ಮೃತ್ಯುಕೂಪವಾದ ಟ್ರಾನ್ಸ್​ಫಾರ್ಮರ್​ Transformer

ಮೃತ್ಯುಕೂಪವಾದ ಟ್ರಾನ್ಸ್​ಫಾರ್ಮರ್​ Transformer
ಮೃತ್ಯುಕೂಪವಾದ ಟ್ರಾನ್ಸ್​ಫಾರ್ಮರ್​ Transformer
Published on
ಬಂಗಾರಪೇಟೆ: ತಾಲೂಕಿನ ಕಾರಹಳ್ಳಿ ಗ್ರಾಪಂ ವ್ಯಾಪ್ತಿಯ ಕಾರಹಳ್ಳಿ ಬಡಾವಣೆಯ ನಿವಾಸಿಗಳು ಪ್ರತಿದಿನ ಜೀವಭಯದಲ್ಲೇ ದಿನದೂಡುವಂತಾಗಿದೆ. ಬಡಾವಣೆಯ ಮಧ್ಯಭಾಗದ ಕಾಲುದಾರಿಯಲ್ಲಿ ಹಲವು ವರ್ಷಗಳ ಹಿಂದೆ ಅಳವಡಿಸಲಾಗಿರುವ ವಿದ್ಯುತ್​ ಟ್ರಾನ್ಸ್​ಫಾರ್ಮರ್​ ಇದೀಗ ಸ್ಥಳಿಯರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.Transformer
ಟ್ರಾನ್ಸ್​ಫಾರ್ಮರ್​ನಿಂದ ಸಂಪರ್ಕ ಹೊಂದಿರುವ ಹೈಟೆನ್ಷನ್​ ವಿದ್ಯುತ್​ ತಂತಿಗಳು ಇಲ್ಲಿನ ಮನೆಗಳ ಪಕ್ಕದಲ್ಲೇ ಅತ್ಯಂತ ಅಪಾಯಕಾರಿಯಾಗಿ ಜೋತಾಡುತ್ತಿವೆ. ಕೆಲವು ಮನೆಗಳಿಗಂತೂ ಈ ಟ್ರಾನ್ಸ್​ಫಾರ್ಮರ್​ ಅಂಟಿಕೊಂಡಂತೆಯೇ ಇರುವುದರಿಂದ ನಿವಾಸಿಗಳ ಆತಂಕ ದುಪ್ಪಟ್ಟಾಗಿದೆ. ಪ್ರಸ್ತುತ ಮಳೆಗಾಲ ಆರಂಭವಾಗಿರುವುದರಿಂದ, ಬಿರುಗಾಳಿ ಹಾಗೂ ಮಳೆಗೆ ಯಾವುದೇ ಕ್ಷಣದಲ್ಲಾದರೂ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಅಪಾಯಕಾರಿ ಟ್ರಾನ್ಸ್​ಫಾರ್ಮರ್​ ಅನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಕಳೆದ ಮೂರು ವರ್ಷಗಳಿಂದ ಬೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
ಗ್ರಾಪಂ ಅಭಿವೃದ್ಧಿ ಅಧಿಕಾರಿ (ಪಿಡಿಒ) ವೇಣು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಮತ್ತು ಬೆಸ್ಕಾಂ ಅಧಿಕಾರಿಗಳ ಮೇಲೆ ಒತ್ತಡ ತಂದು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಂಭವನೀಯ ಅನಾಹುತ ತಪ್ಪಿಸಲು ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕಿಂದು ಸ್ಥಳಿಯ ನಿವಾಸಿಗಳು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net