ಮಠಗಳಿಂದ ಸಮಾಜಕ್ಕೆ ಅರಿವಿನ ಸಂಸ್ಕಾರ

ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಹಿರೇಮಠದ ಲಿಂ ಶಿ ಬಸವ ಶಿವಾಚಾರ್ಯ ಮಹಾಸ್ವಾಮಿಯ ಜನ್ಮ ಶತಮಾನೋತ್ಸವ ಸಮಾರಂಭ, ಶರಣಬಸವೇಶ್ವರ ಪುರಾಣ ಮಹಾಮಂಗಳ ಹಾಗೂ ಕಾಶಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಉತ್ಸವ,ಧರ್ಮ ಸಭೆಯನ್ನು ಕಾಶಿ ಜಗದ್ಗುರು ಉದ್ಘಾಟಿಸಿದರು. ಡಾ. ಶಿವಕುಮಾರ ಶಿವಾಚಾರ್ಯರ ಶ್ರೀ,  ಡಾ. ಮಹಾಂತಲಿಂಗ ಶಿವಾಚಾರ್ಯ ಶ್ರೀ, ಡಾ.ಸಿದ್ಥಲಿಂಗ ಶಿವಾಚಾರ್ಯ ಶ್ರೀ ಮತ್ತಿತರರಿದ್ದರು.
ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಹಿರೇಮಠದ ಲಿಂ ಶಿ ಬಸವ ಶಿವಾಚಾರ್ಯ ಮಹಾಸ್ವಾಮಿಯ ಜನ್ಮ ಶತಮಾನೋತ್ಸವ ಸಮಾರಂಭ, ಶರಣಬಸವೇಶ್ವರ ಪುರಾಣ ಮಹಾಮಂಗಳ ಹಾಗೂ ಕಾಶಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಉತ್ಸವ,ಧರ್ಮ ಸಭೆಯನ್ನು ಕಾಶಿ ಜಗದ್ಗುರು ಉದ್ಘಾಟಿಸಿದರು. ಡಾ. ಶಿವಕುಮಾರ ಶಿವಾಚಾರ್ಯರ ಶ್ರೀ, ಡಾ. ಮಹಾಂತಲಿಂಗ ಶಿವಾಚಾರ್ಯ ಶ್ರೀ, ಡಾ.ಸಿದ್ಥಲಿಂಗ ಶಿವಾಚಾರ್ಯ ಶ್ರೀ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ
  • ಬಸವ ಶಿವಾಚಾರ್ಯ ಮಹಾಸ್ವಾಮಿಗಳು ಜನ್ಮ ಶತಮಾನೋತ್ಸವ
ಬಸವನಬಾಗೇವಾಡಿ: ನಾಡಿನಲ್ಲಿ ಇರುವ ಶಿವಾಚಾರ್ಯರ ಮಠ ಮಾನ್ಯಗಳು ಸಮಾಜಕ್ಕೆ ಉತ್ತಮ ಸಂಸ್ಕಾರ, ಅರಿವಿನ ಜ್ಞಾನದ ಜ್ಯೋತಿ ಬೆಳಗಿಸುವ ಕಾರ್ಯ ಮಾಡುತ್ತಿವೆ ಎಂದು ಕಾಶಿಯ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಇಂಗಳೇಶ್ವರ ಗ್ರಾಮದ ಇತ್ತೀಚೆಗೆ ಹಿರೇಮಠದ ಲಿಂ.ಶಿ. ಬಸವ ಶಿವಾಚಾರ್ಯ ಮಹಾಸ್ವಾಮಿಗಳು ಜನ್ಮ ಶತಮಾನೋತ್ಸವ ಸಮಾರಂಭ, ಶರಣಬಸವೇಶ್ವರ ಪುರಾಣ ಮಹಾಮಂಗಳ ಹಾಗೂ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ, ಧರ್ಮ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾಜಕ್ಕೆ ಧಾರ್ಮಿಕ, ಶೈಕ್ಷಣಿಕ, ಧರ್ಮ ಸಂರಕ್ಷಣೆಯ ಉಪದೇಶ ನೀಡುತ್ತಾ, ಸಮಾಜದಲ್ಲಿ ಸರ್ವರು ಸಹಬಾಳ್ವೆಯೊಂದಿಗೆ ಉತ್ತಮ ಬದುಕು ಕಟ್ಟಿಕೊಳ್ಳುವ ಸಂದೇಶ ಸಾರುತ್ತ ತಮ್ಮ ಕಾರ್ಯವನ್ನು ನಿರಂತರವಾಗಿ ನಾಡಿನ ಶಿವಾಚಾರ್ಯರ ಮಠಮಾನ್ಯಗಳು ಮಾಡುತ್ತಿವೆ ಎಂದು ಹೇಳಿದರು.

ಯಾರು ಸಮಾಜಕ್ಕೆ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯ ಮಾಡುತ್ತಾರೋ ಅವರ ಹೆಸರು ಉಸಿರು ನಿಂತರು ಸಮಾಜದಲ್ಲಿ ಹಚ್ಚ ಹಸಿರಾಗಿ ಉಳಿಯುತ್ತದೆ. ಈ ನಾಡಿನಲ್ಲಿ ಅನೇಕ ಶಿವ ಶರಣರು, ಸಂತರು, ಸನ್ಯಾಸಿಗಳು ತಮ್ಮ ಇಡೀ ಜೀವನವನ್ನು ಜಗತ್ತಿನ ಒಳಿತಿಗಾಗಿ ಮುಡುಪಿಟ್ಟು ಸಾಧನೆ ಮಾಡಿದ್ದಾರೆ. ಅಂತ ಮಹಾತ್ಮರ ಆಚಾರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಿದರೆ ನಮ್ಮ ಬದುಕು ಬಂಗಾರವಾಗುತ್ತದೆ ಎಂದರು.

ಜೆಡಿಎಸ್ ಉಪಾಧ್ಯಕ್ಷ ಸೋಮನಗೌಡ ಮಾತನಾಡಿ, ದಾನ, ಧರ್ಮ, ಸನ್ಮಾರ್ಗದಲ್ಲಿ ನಾವುಗಳು ಮುನ್ನೆಡೆದರೆ ನಮ್ಮ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು.

ಕೆರೂರ ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯರ ಶ್ರೀ, ಮನಗೂಳಿ ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಶ್ರೀ, ಕೊಟ್ಟೂರಿನ ಡೋಣೂರು ಹಿರೇಮಠ ಡಾ. ಸಿದ್ಥಲಿಂಗ ಶಿವಾಚಾರ್ಯ ಶ್ರೀ, ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀ, ಈರಣ್ಣ ಪಟ್ಟಣಶೆಟ್ಟಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net