ಯಾದಗಿರಿ ನಗರದಲ್ಲಿನ ಶ್ರೀ ಭಗವಾನ ಮಹಾವೀರ ಜೈನ ಗೋಶಾಲೆಗೆ ಸೋಮವಾರ ಭೇಟಿ ನೀಡಿದ ಹೈಕೊರ್ಟ್ ಮುಖ್ಯ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಗೋಪೂಜೆ ನೆರವೇರಿಸಿದರು. ನ್ಯಾಯಾಧೀಶ ಮರಿಯಪ್ಪ, ಗೋಶಾಲಾ ಅಧ್ಯ ಗೌತಮಚಂದ ಜೈನ, ಬಾಬು ದೋಕಾ, ಜಂಬು ಸೋಲಂಕಿ, ದಿನೇಶಕುಮಾರ ಜೈನ, ಅಜೀತ್ ಜೈನ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹೈಕೊರ್ಟ್ ಮುಖ್ಯ ನ್ಯಾಯಾಧೀಶ ಹಂಚಾಟೆ ಅಭಿಮತ
ಜೈನ ಗೋಶಾಲೆಗೆ ಭೇಟಿ
ಯಾದಗಿರಿ: ನಮ್ಮ ದೇಶ ಆಧ್ಯಾತ್ಮಿಕ ನಾಡು, ಅನಾದಿ ಕಾಲದಿಂದ ಇಲ್ಲಿ ಗೋವು ಸಾಕುವ ಮೂಲಕ ಪಾಲನೆ, ಪೂಜೆ ಮಾಡಿಕೊಂಡು ಬರುವ ಮೂಲಕ ಗೋವಿಗೆ ಅಗ್ರ ಸ್ಥಾನವಿದ್ದು, ಕಾರಣ ಎಲ್ಲರೂ ಅವುಗಳ ರಣೆ ಮಾಡಿದಾಗ ಮಾತ್ರ ನಮ್ಮ ನಾಡು ಸದಾ ಸಮೃದ್ಧಿಯಾಗಿರುತ್ತದೆ ಎಂದು ಹೈಕೊರ್ಟ್ ಮುಖ್ಯ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಹೇಳಿದರು.
ನಗರದ ಹೊರ ವಲಯದಲ್ಲಿರುವ ಶ್ರೀ ಭಗವಾನ ಮಹಾವೀರ ಜೈನ ಗೋಶಾಲೆಗೆ ಸೋಮವಾರ ಭೇಟಿ ನೀಡಿ, ಗೋಪೂಜೆ ನೆರವೇರಿಸಿ ಮಾತನಾಡಿದ ಅವರು, ನಾನು ಇಲ್ಲಿಗೆ ನ್ಯಾಯಾಧೀಶನಾಗಿ ಬಂದಿಲ್ಲ. ಬದಲಾಗಿ ಗೋಭಕ್ತನಾಗಿ ಆಗಮಿಸಿ ಆಶೀರ್ವಾದ ಪಡೆದಿರುವುದು ನನ್ನ ಜೀವನ ಸಾರ್ಥಕ ಎಂದು ತಿಳಿಸಿದರು. ಗೋಶಾಲೆಯಲ್ಲಿ 225 ಹಸುಗಳನ್ನು ವಿಸಿ, ಮೇವುಗಳ ಸಂಗ್ರಹ ಟಕ, ಸಭಾ ಭವನ ಮತ್ತು ಭೋಜನ ಶಾಲೆ ಕಟ್ಟಡ ಕಾಮಗಾರಿ ವಿಸಿದರು. ಪಾಂಡವರ ಕಾಲದಲ್ಲಿ ಅವರ ಅಾತವಾಸ ಸಮಯದಲ್ಲಿಯೂ ಕೂಡ ದುಷ್ಟಶಕ್ತಿಗಳು ಗೋವುಗಳ ಮಾರಣ ಹೋಮ ಮಾಡಲು ಮುಂದಾದಾಗ ಅವರು ಹೋರಾಡಿ ರಣೆ ಮಾಡಿದರು. ಅದರಂತೆ ರೈತನ ಮಿತ್ರ ಎಂದು ಗೋವುಗಳನ್ನು ಕರೆಯುತ್ತಾರೆ. ಈ ಭಾಗದಲ್ಲಿ ನೀರಾವರಿ ಸೌಲಭ್ಯ ಹೆಚ್ಚಿರುವುದರಿಂದ ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ರೈತರು ಬಳಸುತ್ತಾರೆ. ಇದರಿಂದ ಇಡೀ ವಾತಾವರಣವೇ ವಿಷಮಯವಾಗಿ ಹದಗೆಡುತ್ತಿದೆ, ಇಂದು ಕೃಷಿಯಲ್ಲಿ ಅಪಾರ ಬದಲಾವಣೆ ಕಾಣುತ್ತಿದ್ದೇವೆ. ಗೋವಾಧಾರಿತ ಸಾವಯುವ ಕೃಷಿ ಕೈಗೊಳ್ಳುವ ಮೂಲಕ ರೈತರು ನಾಡಿನ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಗೋವುಗಳು ಎಲ್ಲ ಧರ್ಮದವರು ಸಾಕಣೆ ಮಾಡಬೇಕು. ಅದರ ಲಾಭ ಹೆಚ್ಚಿದೆ, ಬರುವ ದಿನಗಳಲ್ಲಿ ಬಕ್ರೀದ್ ಹಬ್ಬ ಬರಲಿದೆ. ಕಾರಣ ಮುಸ್ಲಿಂ ಬಾಂಧವರು ದಯವಿಟ್ಟು ಆಹಾರ ಸೇವನೆ ನೆಪದಲ್ಲಿ ಗೋವುಗಳನ್ನು ಕೊಲೆ ಮಾಡಬೇಡಿ ಎಂದು ಅತ್ಯಂತ ಭಾವನಾತ್ಮಕವಾಗಿ ಮನವಿ ಮಾಡಿದರು.
ಗೋವುಗಳ ಹಾಲಿನಲ್ಲಿ ಹಾಗೂ ಗೋಮೂತ್ರದಲ್ಲಿ ಔಷಧ ಗುಣಗಳಿವೆ, ಮಾರಣಾಂತಿಕ ಕಾಯಿಲೆಗಳನ್ನು ದೂರ ಮಾಡುವ ಶಕ್ತಿ ಅದರಲ್ಲಿ ಅಡಗಿದೆ. ನಾವೂ ಹೆತ್ತ ತಾಯಿ ಹಾಲು ಕುಡಿದು ಬೆಳೆಯುತ್ತೇವೆ, ನಂತರ ದಿನಗಳಲ್ಲಿ ಗೋವು ಹಾಲನ್ನು ಸೇವಿಸುತ್ತಾ ಆರೋಗ್ಯದಿಂದ ಬದುಕು ಕಳೆಯುತ್ತೇವೆ. ಎಲ್ಲರೂ ತಮ್ಮ ದೃಷ್ಟಿ, ಸೃಷ್ಟಿಯಲ್ಲಿ ಬದಲಾವಣೆಯಾಗಿ ಆರೋಗ್ಯಕರ ಸದೃಢ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು. ಜೈನ್ ಸಮಾಜದವರ ಕಾರ್ಯ ಇತರರಿಗೆ ಪ್ರೇರಣೆಯಾಗಿದೆ. ಈ ಗೋಶಾಲೆ ಇನ್ನೂ ವಿಸ್ತಾರವಾಗಿ ಬೆಳೆದು ದೇಶದ ಗಮನ ಸೆಳೆದು ವಿಶ್ವಕ್ಕೆ ಒಳ್ಳೆಯ ಸಂದೇಶ ನೀಡಲಿ ಎಂದರು.