ಸಮಾರಂಭದಲ್ಲಿ ದೇವನೂರು ಮಠದ ಶ್ರೀ ಮಹಾಂತ ಸ್ವಾಮೀಜಿ, ನವಿಲೂರು ಮಠದ ಚನ್ನಬಸವ ಸ್ವಾಮೀಜಿ, ಶರಣನ ಸಂಗಮ ಮಠದ ನಾಗರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ನೆರವೇರಿದವು.
ಇದೇ ಸಂದರ್ಭದಲ್ಲಿ ರಂಜಿತಾ ಶೇಖರ್ ಅವರು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ, ಶಾಲೆ ಮಕ್ಕಳಿಂದ ವಚನ ನೃತ್ಯ ವೈಭವ, ಆದರ್ಶ ಶಾಲೆಯ ಮಕ್ಕಳ ಭರತನಾಟ್ಯ ಗಮನ ಸೆಳೆಯಿತು. ಸಂಘದ ಉಪಾಧ್ಯಕ್ಷರಾದ ಉಪಾಧ್ಯಕ್ಷರಾದ ಎನ್.ಎ.ಕುಮಾರಸ್ವಾಮಿ, ಮೀನಾಕ್ಷಿ, ಎಚ್.ಎಸ್.ಮಹೇಶ್, ಪ್ರಧಾನ ಕಾರ್ಯದರ್ಶಿಗಳಾದ ಶಂಕರ್ ಪ್ರಸಾದ್, ಖಜಾಂಚಿಗಳಾದ ಮಹೇಶ್ ಮುದ್ದಳ್ಳಿ ಇತರರು ಇದ್ದರು.