ಶಿವಯೋಗ ಪರಂಪರೆ ಕೊಡುಗೆ ಅಪಾರ

ಗುರುಮಠಕಲ್ ಪಟ್ಟಣದ ಖಾಸಾಮಠದಲ್ಲಿ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮಿಜಿ, ಅಖಂಡೇಶ್ವರಯ್ಯ ಹಿರೇಮಠ  ಇತರರು ಪಾಲ್ಗೊಂಡಿದ್ದರು.
ಗುರುಮಠಕಲ್ ಪಟ್ಟಣದ ಖಾಸಾಮಠದಲ್ಲಿ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮಿಜಿ, ಅಖಂಡೇಶ್ವರಯ್ಯ ಹಿರೇಮಠ ಇತರರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಖAಡೇಶ್ವರಯ್ಯ ಅಭಿಮತ
  • ಗುರುಮಠಕಲ್‌ನಲ್ಲಿ ಮಾಸಿಕ ಶರಣ ಸಂಗಮ
ಗುರುಮಠಕಲ್:

ಶರಣ ಸಂಸ್ಕೃತಿ, ವಚನ ಸಾಹಿತ್ಯ ಹಾಗೂ ಧಾರ್ಮಿಕ ಮೌಲ್ಯಗಳನ್ನು ಸಮಾಜದಲ್ಲಿ ವಿಸ್ತರಿಸಲು ಶಿವಯೋಗ ಪರಂಪರೆ ಮತ್ತು ಬಸವಾದಿ ಶರಣ ವಿಚಾರಧಾರೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಉಪನ್ಯಾಸಕ ಅಖಂಡೇಶ್ವರಯ್ಯ ಹಿರೇಮಠ ಹೇಳಿದರು.

ಪಟ್ಟಣದ ಖಾಸಾಮಠದ ಆವರಣದಲ್ಲಿ ಶನಿವಾರ ಸಂಜೆ ಜರುಗಿದ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಶಿವಯೋಗ ಪರಂಪರೆ ಕುರಿತು ಉಪನ್ಯಾಸ ನೀಡಿ, ಮುಳಗುಂದ ಮಹಾಂತ ಶಿವಯೋಗಿಗಳ ಜೀವನ, ಅವರ ಆಧ್ಯಾತ್ಮಿಕ ಸಾಧನೆ, ಸಮಾಜಮುಖಿ ಚಿಂತನೆಗಳು ಹಾಗೂ ಶಿವಯೋಗ ಪರಂಪರೆಗೆ ನೀಡಿದ ಅಮೂಲ್ಯ ಕೊಡುಗೆಗಳನ್ನು ವಿವರಿಸಿದರು.
ಪವಾಡಗಳ ಮೂಲಕ ಜನಮನ ಗೆದ್ದಿದ್ದ ಶ್ರೀಗಳು ಸಾಹಿತ್ಯ ಕ್ಷೇತ್ರದಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದು, ಅನುಭಾವದ ಪ್ರತೀಕವಾಗಿ 'ಕೈವಲ್ಯದರ್ಪಣ' ಎಂಬ ಅಮೂಲ್ಯ ಗ್ರಂಥ ರಚಿಸಿದ್ದಾರೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಖಾಸಾಮಠದ ಪೂಜ್ಯ ಶ್ರೀ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮಿಜಿ ಮಾತನಾಡಿ, ಮಾಸಿಕ ಶರಣ ಸಂಗಮವು ಗುರು-ಭಕ್ತರ ನಡುವಿನ ಸಂಬAಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಆಧ್ಯಾತ್ಮಿಕ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಯ್ಯ ಪಡಿಗೆ ಕಲಾವಿದರ ತಂಡ, ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಶಿಕ್ಷಕರು, ಖಾಸಮಠದ ವಸತಿ ಮಕ್ಕಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net