ಸುರಪುರ ವೀರಪ್ಪ ನಿಷ್ಠಿ ಇಂಜನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡ ಜ್ಞಾನ ಮಂಥನ&2026 ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಕಾಲೇಜಿನ ಕಾರ್ಯದರ್ಶಿ ಡಾ.ಶಾಂತಲಾ ಎಸ್.ನಿಷ್ಠಿ, ಡಾ.ಅನಿಲಕುಮಾರ ಜಿ.ಬಿಡವೆ, ಡಾ.ಶುಭಾಂಗಿನಿ ಡಿ.ಸಿ. ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿವಿ ಕುಲಸಚಿವ ಡಾ.ಅನೀಲಕುಮಾರ ಬಿಡವೆ ಬಣ್ಣನೆ
ಸುರಪುರದಲ್ಲಿ ಜ್ಞಾನ ಮಂಠನ ಕಾರ್ಯಕ್ರಮ
ಸುರಪುರ: ಯಾದಗಿರಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಶರಣಬಸವ ಸಂಸ್ಥೆಗಳ ಕೊಡುಗೆ ಅಪಾರವಾಗಿದ್ದು, ಅದರಲ್ಲೂ ವಿಶೇಷವಾಗಿ ನಿಷ್ಠಿ ಕುಟುಂಬ ಈ ಭಾಗದಲ್ಲಿ ಶಿಕ್ಷಣ ೇತ್ರಕ್ಕೆ ನೀಡುತ್ತಿರುವ ನಿರಂತರ ಸೇವೆ ಶ್ಲಾನೀಯ ಎಂದು ಕಲಬುರಗಿಯ ಶರಣಬಸವ ವಿಶ್ವ ವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಜಿ.ಬಿಡವೆ ಹೇಳಿದರು.
ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡ ಜ್ಞಾನ ಮಂಥನ&2026 ಪದವಿ ಪ್ರಧಾನ ಸಮಾರಂಭ ಮತ್ತು ಬೃಹತ್ ತಾಂತ್ರಿಕ ಹಾಗೂ ಸಾಂಸತಿಕ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕಲಬುರಗಿ ವಿದ್ಯಾವರ್ಧಕ ಸಂದ ಶರಣಬಸವ ಸಂಸ್ಥೆಗಳ ಶಿಕ್ಷಣ ೇತ್ರದ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದರು.
ವಿಟಿಯು ಪ್ರಾದೇಶಿಕ ಕಚೇರಿಯ ನಿರ್ದೇಶಕ ಡಾ.ಶುಭಾಂಗಿನಿ ಡಿ.ಸಿ.ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಹಿರಿಯದಾಗಿದೆ. ಕೇವಲ ಪದವಿ ಗಳಿಸುವುದಷ್ಟೇ ಗುರಿಯಾಗಬಾರದು. ಜೀವನದಲ್ಲಿ ಮೊದಲು ಮಾನವನಾಗು ಎಂಬ ಉನ್ನತ ಮೌಲ್ಯ ಮೈಗೊಡಿಸಿಕೊಳ್ಳಬೇಕು ಎಂದು ಮೌಲ್ಯಾಧಾರಿತ ಸಂದೇಶದ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ನಿಷ್ಠಿ ವೀರಪ್ಪ ಇಂಜನಿಯರಿಂಗ್ ಕಾಲೇಜಿನ ಸಂಸ್ಥಾಪಕರು ಮತ್ತು ಹಿರಿಯ ನ್ಯಾಯವಾದಿ ಶರಣಬಸಪ್ಪ ನಿಷ್ಠಿ ಮಾತನಾಡಿ, ಸುರಪುರದ ಐತಿಹಾಸಿಕ ಹಿನ್ನೆಲೆ, ಸಾಂಸತಿಕ ವೈಭವ ಮತ್ತು ಪರಂಪರೆಯನ್ನು ನೆನಪಿಸಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಿದರು.
ಕಾಲೇಜಿನ ಕಾರ್ಯದರ್ಶಿ ಡಾ.ಶಾಂತಲಾ ಎಸ್. ನಿಷ್ಠಿ, ಡಾ.ಬ್ರಿಜ್ಘೂಷಣ್.ಎಸ್ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ.ಶರಣಬಸಪ್ಪ ಸಾಲಿ ಮಾತನಾಡಿದರು. ಪ್ರೊ.ಅಂಬಿಕಾ ಮತ್ತು ಪ್ರೊ.ಪೂಜಾ ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ಹರಷಿತಾ ಸ್ವಾಗತಿಸಿದರು. ಸಾನಿಯಾ ನಿರೂಪಿಸಿದರು. ರಾಧಿಕಾ ವಂದಿಸಿದರು.
ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದ ಪದವಿ ಪ್ರದಾನದ ವೇಳೆ ವಿದ್ಯಾರ್ಥಿಗಳ ಮುಖದಲ್ಲಿ ಸಾಧನೆಯ ತೃಪ್ತಿ ಕಂಡುಬಂತು. ಪಾಲಕರು ತಮ್ಮ ಮಕ್ಕಳ ಯಶಸ್ಸನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಪದವೀಧರರು ಸಂಭ್ರಮಿಸಿದರು. ಕಾಲೇಜಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನೂರಾರು ವಿದ್ಯಾರ್ಥಿಗಳು ಪದವಿ ಸ್ವೀಕರಿಸಿ ವೃತ್ತಿ ಬದುಕಿಗೆ ಕಾಲಿಟ್ಟರು. ಸಭಾ ಕಾರ್ಯಕ್ರಮದ ನಂತರ ನಡೆದ ವಿದ್ಯಾರ್ಥಿಗಳ ಸಾಂಸತಿಕ ವೈವಿಧ್ಯಮಯ ಕಾರ್ಯಕ್ರಮ ಅವರಲ್ಲಿನ ಸುಪ್ತ ಪ್ರತಿಭೆ ಅನಾವರಣಗೊಳಿಸಿತು. ಒಟ್ಟಾರೆ ಜ್ಞಾನ ಮಂಥನ&2026 ಸಮಾರಂಭದ ವೈಭವವು ವೀರಪ್ಪ ನಿಷ್ಠಿ ಕಾಲೇಜಿನ ಶೈಕ್ಷಣಿಕ ಶ್ರೇಷ್ಠತೆ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಸಾಯಂತಿತ್ತು.