ಸಮಾಜಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರ

ಬಲಶೆಟ್ಟಿಹಾಳ ಗ್ರಾಮದ ಬಸವಲಿಂಗ ಶಿವಯೋಗಿಗಳ ವಿರಕ್ತಮಠದಲ್ಲಿ ಸಿದ್ಧಲಿಂಗ ದೇವರ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಯುವ ಹಾಗೂ ರೈತ ಸಮಾವೇಶವನ್ನು ಶಾಸಕ ಶರಣಗೌಡ ಕಂದಕೂರ ಉದ್ಘಾಟಿಸಿದರು. ಶಿರಹಟ್ಟಿಯ ಶ್ರೀ ಫಕೀರ್​ ದಿಂಗಾಲೇಶ್ವರ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಪ್ರಭುಲಿಂಗ ಸ್ವಾಮೀಜಿ, ಸಿದ್ಧಲಿಂಗ ದೇವರು ಇತರರಿದ್ದರು.
ಬಲಶೆಟ್ಟಿಹಾಳ ಗ್ರಾಮದ ಬಸವಲಿಂಗ ಶಿವಯೋಗಿಗಳ ವಿರಕ್ತಮಠದಲ್ಲಿ ಸಿದ್ಧಲಿಂಗ ದೇವರ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಯುವ ಹಾಗೂ ರೈತ ಸಮಾವೇಶವನ್ನು ಶಾಸಕ ಶರಣಗೌಡ ಕಂದಕೂರ ಉದ್ಘಾಟಿಸಿದರು. ಶಿರಹಟ್ಟಿಯ ಶ್ರೀ ಫಕೀರ್​ ದಿಂಗಾಲೇಶ್ವರ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಪ್ರಭುಲಿಂಗ ಸ್ವಾಮೀಜಿ, ಸಿದ್ಧಲಿಂಗ ದೇವರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶರಣಗೌಡ ಕಂದಕೂರ ಅಭಿಮತ
  • ಬಲಶೆಟ್ಟಿಹಾಳದಲ್ಲಿ ಯುವ ರೈತ ಸಮಾವೇಶ
ಕಕ್ಕೇರಾ: ಸಮಾಜ ಸುಧಾರಣೆಯಲ್ಲಿ ಯಾವುದೇ ಸರ್ಕಾರಗಳು ಮಾಡದ ಕೆಲಸವನ್ನು ನಮ್ಮ ದೇಶದ ಮಠ ಮಾನ್ಯಗಳು ಮಾಡುತ್ತಿದ್ದು, ಹೀಗಾಗಿ ಸಮಾಜಕ್ಕೆ ಮಠಗಳ ಕೊಡುಗೆ ಅಪಾರವಾಗಿದೆ ಎಂದು ಗುರುಮಠಕಲ್​ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಬಲಶೆಟ್ಟಿಹಾಳ ಗ್ರಾಮದ ಬಸವಲಿಂಗ ಶಿವಯೋಗಿಗಳ ವಿರಕ್ತಮಠದಲ್ಲಿ ಗುರುವಾರ ನಡೆಯಲಿರುವ ಸಿದ್ಧಲಿಂಗ ದೇವರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಯುವ ಮತ್ತು ರೈತ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೆಶದ ಭವಿಷ್ಯ ಯುವ ಸಮೂಹ ಮತ್ತು ರೈತರ ಮೇಲೆ ಅವಲಂಬಿತವಾಗಿದ್ದು, ಈಗಿನ ಮುಂದುವರೆದ ಜಗತ್ತಿನಲ್ಲಿ ಯುವ ಸಮೂಹ ಮೊಬೈಲ್​ಗಳ ವ್ಯಾಮೋಹಕ್ಕೆ ಒಳಗಾಗಿ ಮೋಜು&ಮಸ್ತಿಗಾಗಿ ತಮ್ಮ ಇಡೀ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಮಹಾತ್ಮಾ ಗಾಂಧೀಜಿ ಅವರ ದೇವಾಲಯ ಕಟ್ಟಿಸಿ ದೇಶದ ಗಮನ ಸೆಳೆದ ಬಲಶೆಟ್ಟಿಹಾಳ ಗ್ರಾಮದಲ್ಲಿ ಪೂಜ್ಯರ ನಿರಂಜನ ಪಟ್ಟಾಧಿಕಾರ ಕಾರ್ಯಕ್ರಮ ನಾಡಿನ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಯಶಸ್ಸು ಆಗಲಿ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿ-ಬಾಳೆಹೊಸೂರಿನ ಫಕೀರ್​ ದಿಂಗಾಲೇಶ್ವರ ಸ್ವಾಮೀಜಿ, ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯೊಂದಿಗೆ ಅದ್ಭುತವಾದ ಕನಸ್ಸುಗಳನ್ನು ತಿಳಿ ಹೇಳಬೇಕು. ಪ್ರಮುಖವಾಗಿ ಯುವಕರು ತಾಳ್ಮೆ, ದೂರದೃಷ್ಟಿ, ದುಡಿಮೆ, ಸಜ್ಜನರ ಸಂಗದೊಂದಿಗೆ ದೇಹವೇ ಸಂಪತ್ತನ್ನಾಗಿಸಿ ದೇಶಕ್ಕೆ ಕೊಡುಗೆ ನೀಡಬೇಕು. ಇಲ್ಲವಾದರೆ ತಾರುಣ್ಯಕ್ಕೆ ಮಾಡುವ ಅಪಮಾನ ಎಂದು ಯುವಕ&ಯುವತಿಯರಿಗೆ ತಾರುಣ್ಯದ ಮಹತ್ವವನ್ನು ಯುವ ಸಮೂಹಕ್ಕೆ ಸಾರಿದರು.
ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಸಕಾಲಕ್ಕೆ ತಲುಪದಿರುವ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ರೈತರು ಪ್ರಾಮಾಣಿಕರಾದಾಗ ಮಾತ್ರ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತವೆ ಎಂದು ಮಾರ್ಮಿಕವಾಗಿ ಹೇಳಿದರು. ಸಾತ್ವಿಕದ ಕಿರಿ ವಯಸ್ಸಿನ ಸಿದ್ಧಲಿಂಗ ಪೂಜ್ಯರನ್ನು ಬಲಶೆಟ್ಟಿಹಾಳ ಗ್ರಾಮದ ಸಕಲ ಸದ್ಭಕ್ತರು ನಿರಂಜನ ಚರಪಟ್ಟಾಧಿಕಾರಕ್ಕೆ ಅಣಿಯಾಗುತ್ತಿರುವುದಕ್ಕೆ ಇಡೀ ಗ್ರಾಮ ಸ್ವರ್ಗಮಯವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಕನಕದಾಸ ವೃತ್ತದಿಂದ ವೇದಿಕೆವರೆಗೆ ವಾದ್ಯಮೇಳದೊಂದಿಗೆ ರೈತ ಶೋಭಾಯಾತ್ರೆ ನಡೆಯಿತು. ಯಡ್ರಾಮಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ದುರುದುಂಡೇಶ್ವರ ಸ್ವಾಮೀಜಿ, ಡಾ.ಸುರೇಶ ಸಜ್ಜನ್​ ಮಾತನಾಡಿದರು.
ವೇದಿಕೆಯಲ್ಲಿ ಕಡ್ಲೆಪ್ಪಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಸಿದ್ದಲಿಂಗ ದೇವರು, ರುನಂದನಾ ಶಾಸಿ, ಪ್ರಮುಖರಾದ ಚಂದ್ರಶೇಖರಗೌಡ ಮಾಗನೂರ, ಬಸವರಾಜ ಸ್ವಾಮಿ ಸ್ಥಾವರಮಠ, ಬಾಪುಗೌಡ ಪಾಟೀಲ್​ ಸದಬ, ಚಂದ್ರಶೇಖರ ದಂಡಿನ್​, ಮಲ್ಲಿಕಾರ್ಜುನ ಸತ್ಯಂಪೇಟ, ಮಲ್ಲಣ್ಣಗೌಡ ಹಗರಟಗಿ, ಮಹಾದೇವಿ ಬೇವಿನಾಳಮಠ, ನಾಗಯ್ಯಸ್ವಾಮಿ ದೇಸಾಯಿಗುರು, ಭೋಜಪ್ಪಗೌಡ ಚನ್ನೂರ, ಶರಣಪ್ಪ ಮೋಮನಿ, ಭೀಮನಗೌಡ ಕೀರ್ತಿ, ಸುಭಾಶಚಂದ್ರ ಕನಕಟಿ, ವೆಂಕಟೇಶ ಹೂಗಾರ ಇತರರಿದ್ದರು.
ಗ್ರಾಪಂನ ಸ್ವಚ್ಛತಾ ಸೇನಾನಿಗಳನ್ನು ಮತ್ತು ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಶ್ರಮಿಸುತ್ತಿರುವ ಹಲವರನ್ನು ದಿಂಗಾಲೇಶ್ವರ ಸ್ವಾಮೀಜಿ ಸನ್ಮಾನಿಸಿದರು. ಅಕ್ಕಮಹಾದೇವಿ ದೇಶಮುಖ ಸ್ವಾಗತಿಸಿದರು. ಅಮರಯ್ಯಸ್ವಾಮಿ ಚಾಲಿಬೆಂಚಿ ನಿರೂಪಣೆ ಮಾಡಿದರು. ಬಸವರಾಜ ಭದ್ರಗೋಳ ವಂದಿಸಿದರು.
ಪಟ್ಟಾಧಿಕಾರ ಮಹೋತ್ಸವ ಇಂದು
ಗುರುವಾರ ಬೆಳಗ್ಗೆ 6ಕ್ಕೆ ಪೂಜ್ಯರ ನಿರಂಜನ ಪಟ್ಟಾಧಿಕಾರ ಮಹೋತ್ಸವ ಜರುಗಲಿದ್ದು ಈ ವೇಳೆ ಪಡೇಕನೂರದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಶಿವಪೂರದ ಶ್ರೀ ಶಿವಲಿಂಗ ಸ್ವಾಮೀಜಿ, ಯಡ್ರಾಮಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ, ವಡವಡಗಿಯ ಶ್ರೀ ವೀರಸಿದ್ಧ ಸ್ವಾಮೀಜಿ, ಚಡಚಣದ ಶ್ರೀ ಷಡಕ್ಷರ ಸ್ವಾಮೀಜಿ ಸೇರಿ ಹಲವು ಮಠಗಳ ಪೂಜ್ಯರು ಭಾಗವಹಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಶೂನ್ಯ ಪೀಠಾರೋಹಣ ಹಾಗೂ ಧರ್ಮಸಭೆಯಲ್ಲಿ ವಿವಿಧ ಪೂಜ್ಯರು ಸಾಯಾಗಲಿದ್ದು, ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ನರಸಿಂಹನಾಯಕ(ರಾಜುಗೌಡ) ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net