‘ಜ್ಞಾನ ಪ್ರಸಾರಕ್ಕೆ ಶ್ರೀ ವಿಶ್ವೇಶ್ವರ ಜಗದ್ಗುರುಗಳ ಕೊಡುಗೆ ಅಪಾರ’

37ನೇ ಪುಣ್ಯಸ್ಮರಣೆಯಲ್ಲಿ ಕಾಶೀ ಜಗದ್ಗುರುಗಳ ಬಣ್ಣನೆ
Jagadguru Dr. Chandrashekhara Shivacharya Bhagavatpada performed special prayers on the occasion of the 37th Punyaradhana (memorial observance) of the late Vishweshwara Jagadguru of Kashi Peetha.
ಕಾಶೀ ಪೀಠದ ಲಿಂಗೈಕ್ಯ ವಿಶ್ವೇಶ್ವರ ಜಗದ್ಗುರುಗಳ 37ನೇ ಪುಣ್ಯಾರಾಧನೆ ಪ್ರಯುಕ್ತ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ವಿಶೇಷ ಪೂಜೆ ಸಲ್ಲಿಸಿದರು.
Published on: 

ವಾರಾಣಸಿ : ಕಾಶಿ ಪೀಠದ 85ನೇ ಪೀಠಾಧಿಪತಿಗಳಾಗಿದ್ದ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಭಗವತ್ಪಾದರು ಹೆಸರಿಗೆ ತಕ್ಕಂತೆ ಇಡೀ ವಿಶ್ವವನ್ನೇ ಪ್ರೀತಿಸುತ್ತಿದ್ದು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅವರು ನೀಡಿದ ಕೊಡುಗೆ ಅಪಾರ ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ. ಕಾಶಿ ಪೀಠದಲ್ಲಿ ನಡೆದ ಲಿಂಗೈಕ್ಯ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಭಗವತ್ಪಾದರ 37ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
1948 ರಿಂದ 1989ರವರೆಗೆ 41 ವರ್ಷಗಳ ಪರ್ಯಂತ ಅವ್ಯಾಹತವಾಗಿ ಧರ್ಮ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಕಾರ್ಯಗಳನ್ನು ಮಾಡಿದ ಪೂಜ್ಯರು, ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ ರಾಜ್ಯದ ತುಂಬೆಲ್ಲಾ ಸಂಚರಿಸಿ ಜನರಿಗೆ ಧರ್ಮ ಸಂಸ್ಕಾರವನ್ನು ಕೊಡುವುದರ ಜೊತೆಗೆ ಬಡ ಮತ್ತು ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವನ್ನು ನೀಡಿದರು. ಪುಣೆ ನಗರದಲ್ಲಿ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ವಸತಿ ಸೌಕರ್ಯವನ್ನು ಮಾಡಿ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಿದ್ದು, ಇಂದಿಗೂ ಬಡ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಕಾಶಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವೀರಶೈವ ಅಧ್ಯಯನ ಪೀಠವನ್ನು ಸ್ಥಾಪಿಸಿ ಐತಿಹಾಸಿಕ ಕ್ರಾಂತಿ ಮಾಡಿದರು. ಈವರೆಗೆ ಅಲ್ಲ್ಲಿ ಸಾವಿರಾರು ವಿದ್ಯಾರ್ಥಿಗಳು ಆಚಾರ್ಯ ಪರೀಕ್ಷೆಯ ಅಧ್ಯಯನ, ಸಂಶೋಧನೆ ಮಾಡಿದ್ದಾರೆ. ಶಿವಾಗಮಗಳನ್ನು ವಿದ್ವಾಂಸರಿಂದ ಸಂಶೋಧಿಸಿ ರಾಷ್ಟ್ರೀಯ ಅಂತರಾಷ್ಟ್ರೀಯ ಭಾಷೆಗಳಿಗೆ ಅನುವಾದಿಸಿ ನೂರಾರು ಗ್ರಂಥಗಳನ್ನು ಮುದ್ರಣ ಗೊಳಿಸಿದ್ದಾರೆ. ಹೀಗೆ ತಮ್ಮ ಕಾರ್ಯಗಳಿಂದ ಜಗದ್ಗುರುಗಳು ಅಜರಾಮರರಾಗಿದ್ದಾರೆ ಎಂದು ವಿವರಿಸಿದರು.

Jagadguru Dr. Chandrashekhara Shivacharya Bhagavatpada performed special prayers on the occasion of the 37th *Punyaradhana* (commemoration of the passing) of the late Vishweshwara Jagadguru of the Kashi Peetha.
ಕಾಶೀ ಪೀಠದ ಲಿಂಗೈಕ್ಯ ವಿಶ್ವೇಶ್ವರ ಜಗದ್ಗುರುಗಳ 37ನೇ ಪುಣ್ಯಾರಾಧನೆ ಪ್ರಯುಕ್ತ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ವಿಶೇಷ ಪೂಜೆ ಸಲ್ಲಿಸಿದರು.

ಸಮಾರಂಭದಲ್ಲಿ ಪೀಠದ ವ್ಯವಸ್ಥಾಪಕರಾದ ಆರ್.ಕೆ.ಸ್ವಾಮಿ, ಶಿವಾನಂದ ಹಿರೇಮಠ, ನಳಿನಿ ಚಿರಮೆ, ಉದಯಬಾನು ಸಿಂಗ್, ಶಿವಮೂರ್ತಿ ಹಿರೇಮಠ, ಗುರುಕುಲದ ವಿದ್ಯಾರ್ಥಿಗಳು, ಕರ್ನಾಟಕ, ಮಹಾರಾಷ್ಟ್ರ, ಮತ್ತಿತರ ಪ್ರಾಂತ್ಯಗಳು ಭಕ್ತರು ಉಪಸ್ಥಿತರಿದ್ದರು. ಪುಣ್ಯಾರಾಧನೆ ಅಂಗವಾಗಿ ಲಿಂಗಕ್ಯ ಜಗದ್ಗುರುಗಳ ಗದ್ದುಗೆಗೆ ರುದ್ರಾಭಿಷೇಕ ಬಿಲ್ವಾರ್ಚನೆ ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ವಿತರಣೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net