ಸಮಾಜದಲ್ಲಿ ತಾಯಂದಿರ ಕೊಡುಗೆ ದೊಡ್ಡದು

ಬಸವಕಲ್ಯಾಣದ ಕೇತಕಿ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ  ಕಲ್ಯಾಣ ನಾಡು ಗ್ರಾಮೀಣ ಜನಪದ ಸಂಘದಿಂದ ಸೋಮವಾರ ಆಯೋಜಿಸಿದ್ದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಬಸವಣ್ಣನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಿದ್ದಮ್ಮ ಮಲಶೆಟ್ಟೆ, ಸರಸ್ಪತಿ ಬಿರಾದಾರ, ನಿರ್ಮಲಾ ಪಾರ, ಲಕ್ಷ್ಮೀ ತೋಂಟೆ, ಪಾರ್ವತಿ ಬಿರಾದಾರ, ವೀರಶೆಟ್ಟಿ ಮಲಶೆಟ್ಟಿ ಇದ್ದರು.
ಬಸವಕಲ್ಯಾಣದ ಕೇತಕಿ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ನಾಡು ಗ್ರಾಮೀಣ ಜನಪದ ಸಂಘದಿಂದ ಸೋಮವಾರ ಆಯೋಜಿಸಿದ್ದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಬಸವಣ್ಣನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಿದ್ದಮ್ಮ ಮಲಶೆಟ್ಟೆ, ಸರಸ್ಪತಿ ಬಿರಾದಾರ, ನಿರ್ಮಲಾ ಪಾರ, ಲಕ್ಷ್ಮೀ ತೋಂಟೆ, ಪಾರ್ವತಿ ಬಿರಾದಾರ, ವೀರಶೆಟ್ಟಿ ಮಲಶೆಟ್ಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೂಜ್ಯ ಕಲ್ಯಾಣಮ್ಮ ತಾಯಿ ನುಡಿ
  • ಕಲ್ಯಾಣದಲ್ಲಿ ವಿಶ್ವ ಅಮ್ಮಂದಿರ ದಿನಾಚರಣೆ
ಬಸವಕಲ್ಯಾಣ :ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ತಾಯಂದಿರ ಕೊಡುಗೆ ದೊಡ್ಡದು ಎಂದು ಬಂದವರ ಓಣಿಯ ಪೂಜ್ಯ ಕಲ್ಯಾಣಮ್ಮ ತಾಯಿ ನುಡಿದರು.
ನಗರದ ಕೇತಕಿ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ನಾಡು ಗ್ರಾಮೀಣ ಜನಪದ ಸಂಘದಿಂದ ಸೋಮವಾರ ಆಯೋಜಿಸಿದ್ದ ವಿಶ್ವ ತಾಯಂದಿರ ದಿನಾಚರಣೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಒಂಬತ್ತು ತಿಂಗಳು ಹೊತ್ತು, ಹೆತ್ತು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹಾಗೂ ಪೋಷಿಸುವ ತಾಯಿಗೆ ಸಮಾನವಾದ ಮತ್ತೊಬ್ಬರು ಜಗತ್ತಿನಲ್ಲಿ ಇಲ್ಲ. ಅನೇಕ ಯಶಸ್ವಿ ಮಹಾಪುರುಷರ ಸಾಧನೆಗೆ ತಾಯಿ ನೀಡಿದ ಸಂಸ್ಕಾರವೇ ಕಾರಣ. ಹೀಗಾಗಿ ಜಗತ್ತಿನಲ್ಲಿ ತಾಯಿಗೆ ದೊಡ್ಡ ಸ್ಥಾನ ಇದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ, ಪತ್ರಕರ್ತ ವೀರಶೆಟ್ಟಿ ಮಲಶೆಟ್ಟೆ ಮಾತನಾಡಿ, ತಾಯಿಗಿಂತ ದೊಡ್ಡ ದೇವರಿಲ್ಲ, ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ತಾಯಿ. ತನಗಾಗಿ ಏನನ್ನು ಬಯಸದೆ ಮಕ್ಕಳ ನಗುವಿಲ್ಲಿಯೇ ತನ್ನ ಖುಷಿ ಕಾಣುವ, ಮಕ್ಕಳಿಗಾಗಿಯೇ ಜೀವನ ಮೀಸಲಿಟ್ಟ ತಾಯಿಯ ಬಗ್ಗೆ ಹೇಳಲು ಪದಗಳು ಸಾಲದು ಎಂದರು.
ಬಸವಣ್ಣನವರ ಭಾವ ಚಿತ್ರಕ್ಕೆ ಸಿದ್ದಮ್ಮ ಮಲಶೆಟ್ಟೆ, ಸರಸ್ಪತಿ ಬಿರಾದಾರ, ನಿರ್ಮಲಾ ಪಾರ, ಲಕ್ಷ್ಮೀ ತೋಂಟೆ, ಪಾರ್ವತಿ ಬಿರಾದಾರ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ತಾಯಂದಿರ ಪಾದಪೂಜೆ ನೆರವೇರಿಸಿ ಗೌರವಿಸಲಾಯಿತು.
ಕಲ್ಯಾಣ ನಾಡು ಗ್ರಾಮೀಣ ಜನಪದ ಸಂದ ಅಧ್ಯಕ್ಷ ದಿಲೀಪ ದೇಸಾಯಿ, ಆಕಾಶವಾಣಿ ತಬಲಾ ವಾದಕ ಶರಣಪ್ಪ ಜಮಾದಾರ ಹಾಗೂ ಸಂಗೀತಗಾರ ಸೂರ್ಯಕಾಂತ ಬಿರಾದಾರ ತಾಯಂದಿರ ಕುರಿತ ಗಾಯನ ನಡೆಸಿಕೊಟ್ಟರು. ಶಿವರಾಜ ಪಾರಾ ಹಾಗೂ ಪ್ರಮುಖರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net