ನಾಡಿನ ಪ್ರಗತಿಗೆ ಮಠಗಳ ಕೊಡುಗೆ ಅಪಾರ

ಯಾದಗಿರಿ ತಾಲೂಕಿನ ಹತ್ತಿಕುಣಿಯಲ್ಲಿ ಶುಕ್ರವಾರ ಕರುಣೇಶ್ವರ ಜನಕಲ್ಯಾಣ ಟ್ರಸ್ಟ್​ನ ಕೆಂಚಬಸವೇಶ್ವರ ಶಾಖಾಮಠದ ಕಾಮಗಾರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಅಧ್ಯ ಶರಣಪ್ಪಗೌಡ ಮಾಲಿ ಪಾಟೀಲ್​ ಭೂಮಿ ಪೂಜೆ ನೆರವೇರಿಸಿದರು. ಶ್ರೀ ಕರುಣೇಶ್ವರ ಸ್ವಾಮೀಜಿ, ಸಿದ್ದಲಿಂಗರಡ್ಡಿ ಮಾಲಿ ಪಾಟೀಲ್​, ಶರಣಪ್ಪ ಸೋಮಣ್ಣೋರ, ಭರಮರಡ್ಡಿ ಹೊಸಳ್ಳಿ, ವೈಜನಾಥರಡ್ಡಿ ಪಾಟೀಲ್​ ಇತರರಿದ್ದರು.
ಯಾದಗಿರಿ ತಾಲೂಕಿನ ಹತ್ತಿಕುಣಿಯಲ್ಲಿ ಶುಕ್ರವಾರ ಕರುಣೇಶ್ವರ ಜನಕಲ್ಯಾಣ ಟ್ರಸ್ಟ್​ನ ಕೆಂಚಬಸವೇಶ್ವರ ಶಾಖಾಮಠದ ಕಾಮಗಾರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಅಧ್ಯ ಶರಣಪ್ಪಗೌಡ ಮಾಲಿ ಪಾಟೀಲ್​ ಭೂಮಿ ಪೂಜೆ ನೆರವೇರಿಸಿದರು. ಶ್ರೀ ಕರುಣೇಶ್ವರ ಸ್ವಾಮೀಜಿ, ಸಿದ್ದಲಿಂಗರಡ್ಡಿ ಮಾಲಿ ಪಾಟೀಲ್​, ಶರಣಪ್ಪ ಸೋಮಣ್ಣೋರ, ಭರಮರಡ್ಡಿ ಹೊಸಳ್ಳಿ, ವೈಜನಾಥರಡ್ಡಿ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಹಕಾರ ಸಂದ ಅಧ್ಯಕ್ಷ ಶರಣಗೌಡ ಅಭಿಮತ
  • ಹತ್ತಿಕುಣಿಯಲ್ಲಿ ಕಾಮಗಾರಿಗೆ ಭೂಮಿಪೂಜೆ
ಯಾದಗಿರಿ :ಈ ಭರತ ಭೂಮಿ ಪವಿತ್ರ ಋಷಿ&ಮುನಿಗಳ, ಶರಣರ, ಸಂತರ ನಾಡು. ಇಲ್ಲಿ ಅನಾದಿ ಕಾಲದಿಂದ ಮಠ&ಮಾನ್ಯಗಳು ತ್ರಿವಿಧ ದಾಸೋಹ ಮೂಲಕ ನಾಡಿನ ಪ್ರಗತಿಗೆ ಮಹತ್ವದ ಕೊಡುಗೆ ನೀಡಿವೆ ಎಂದು ಹತ್ತಿಕುಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಅಧ್ಯ ಶರಣಪ್ಪಗೌಡ ಮಾಲಿ ಪಾಟೀಲ್​ ಹೇಳಿದರು.
ತಾಲೂಕಿನ ಹತ್ತಿಕುಣಿಯಲ್ಲಿ ಶುಕ್ರವಾರ ನೂತನವಾಗಿ ನಿರ್ಮಾಣವಾಗಲಿರುವ ಕರುಣೇಶ್ವರ ಜನಕಲ್ಯಾಣ ಟ್ರಸ್ಟ್​ನ ಕೆಂಚಬಸವೇಶ್ವರ ಶಾಖಾಮಠದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಠಾಧೀಶರ ಆಶೀರ್ವಾದ, ಧರ್ಮ ಸಂದೇಶಗಳಿಂದ ಸಮಾಜದಲ್ಲಿ ಶಾಂತಿ ಸ್ಥಾಪನೆಯಾಗುವ ಜತೆಗೆ ಎಲ್ಲ ವರ್ಗದ ಜನರಲ್ಲಿ ಸಾಮರಸ್ಯ ಮೂಡಲಿದೆ ಎಂದರು.
ಪ್ರಸಕ್ತ ದಿನಗಳಲ್ಲಿ ನಾವೇಲ್ಲರೂ ಸ್ವಲ್ಪ ಸಮಯ ಧಾರ್ಮಿಕ ಚಟುವಟಿಕೆಗಳಿಗೆ ಹಾಗೂ ಸಾಮಾಜಿಕ ಕಾರ್ಯಗಳಿಗೆ ಮೀಸಲಿಡಬೇಕಾಗಿರುವುದು ಅಗತ್ಯವಾಗಿದೆ. ಅದರಿಂದ ಸಿಗುವ ಆತ್ಮತೃಪ್ತಿ ಬೇರೆ ಯಾವ ಕೆಲಸದಿಂದ ಸಿಗುವುದಿಲ್ಲ. ಇಲ್ಲಿ ಶ್ರೀಗಳು ಲೋಕ ಕಲ್ಯಾಣಕ್ಕಾಗಿ ಕೈಗೊಳ್ಳುವ ಚಟುವಟಿಕೆಗಳಿಗೆ ಎಲ್ಲರೂ ಸಹಾಯ&ಸಹಕಾರ ನೀಡಿದಾಗ ಮಾತ್ರ ಎಲ್ಲರಿಗೂ ಹಾಗೂ ಗ್ರಾಮಕ್ಕೆ ಒಳಿತಾಗುತ್ತದೆ ಎಂದರು.
ಟ್ರಸ್ಟ್​ನ ಅಧ್ಯರೂ ಆದ ಮಠದ ಪೀಠಾಧಿಪತಿ ಶ್ರೀ ಕರುಣೇಶ್ವರ ಸ್ವಾಮೀಜಿ ಮಾತನಾಡಿ, ಇಂದು ಜಗತ್ತಿಗೆ ಮಾನವೀಯ ಮೌಲ್ಯಗಳ ಸ್ಪರ್ಶ ನೀಡಿದ ಬುದ್ಧ ಪೂರ್ಣಿಮ ದಿನವಾಗಿದೆ. ಭಕ್ತರೆಲ್ಲರೂ ಕೂಡಿ ಮಠ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿರುವುದು ಬದಲಾವಣೆಯ ಸಂಕೇತವಾಗಿದೆ ಎಂದು ನುಡಿದರು. ಇಲ್ಲಿ ಸಮಾಜಮುಖಿ ಚಟುವಟಿಕೆಳನ್ನು ನಡೆಸಿಕೊಂಡು ಬರುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ, ಸದೃಢ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ವೇದಮೂರ್ತಿ ಪಂಡಿತ ಕುಮಾರಸ್ವಾಮಿ ಹಿರೇಮಠ ಅವರು ಪೂಜೆ ಕಾರ್ಯ ನೆರವೇರಿಸಿದರು.ಈ ಸಂದರ್ಭದಲ್ಲಿ ಭೂಧಾನಿ ಸಿದ್ದಲಿಂಗರಡ್ಡಿ ಮಾಲಿ ಪಾಟೀಲ್​, ಶರಣಪ್ಪ ಸೋಮಣ್ಣೋರ, ಭರಮರಡ್ಡಿ ಹೊಸಳ್ಳಿ, ವೈಜನಾಥರಡ್ಡಿ ಪಾಟೀಲ್​, ಶರಣಪ್ಪ ಶಂಕ್ರಪ್ಪನೋರ, ಹಣಮಂತ ಖಂಡಪ್ಪನೋರ, ಮಲ್ಲು ಹೊಸಳ್ಳಿ, ಶರಣಪ್ಪ ಬೂದೂರ, ಪ್ರಕಾಶ ಪೂಜಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net