ಆರೋಗ್ಯ ಕ್ಷೇತ್ರಕ್ಕೆ ಆಯುರ್ವೇದ ಕೊಡುಗೆ ಅಪಾರ

ವಿಜಯಪುರ ನಗರದ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಒಂದು ದಿನದ ವಿಚಾರ ಸಂಕಿರಣ ಅನುಸಂಧಾನ-11 ಕಾರ್ಯಕ್ರಮವನ್ನು ಡಾ. ಅಲ್ಲಮಪ್ರಭು ಗುಡ್ಡಾ ಉದ್ಘಾಟಿಸಿದರು.  ಡಾ. ಸುಹಾಸಕುಮಾರ ಶೆಟ್ಟಿ, ಡಾ. ಶೈಲೇಶ ದೇಶಪಾಂಡೆ, ಡಾ. ಆರ್.ವಿ. ಕುಲಕರ್ಣಿ ಇತರರಿದ್ದಾರೆ.
ವಿಜಯಪುರ ನಗರದ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಒಂದು ದಿನದ ವಿಚಾರ ಸಂಕಿರಣ ಅನುಸಂಧಾನ-11 ಕಾರ್ಯಕ್ರಮವನ್ನು ಡಾ. ಅಲ್ಲಮಪ್ರಭು ಗುಡ್ಡಾ ಉದ್ಘಾಟಿಸಿದರು. ಡಾ. ಸುಹಾಸಕುಮಾರ ಶೆಟ್ಟಿ, ಡಾ. ಶೈಲೇಶ ದೇಶಪಾಂಡೆ, ಡಾ. ಆರ್.ವಿ. ಕುಲಕರ್ಣಿ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಅಲ್ಲಮಪ್ರಭು ಗುಡ್ಡಾ ಅಭಿಮತ
  • ರಾಷ್ಟ್ರಮಟ್ಟದ ವಿಚಾರ ಸಂಕಿರಣ
ವಿಜಯಪುರ: ಆಯುರ್ವೇದದಲ್ಲಿ ಸಂಶೋಧನೆಗೆ ಹೆಚ್ಚು ಹೆಚ್ಚು ಸಂಶೋಧನೆ ಕೈಗೊಳ್ಳುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಲು ಸಾಧ್ಯ ಎಂದು ನವದೆಹಲಿ ಎನ್‌ಸಿಐಎಸ್‌ಎಂ ಬೋರ್ಡ್ ಆಫ್ ಆಯುರ್ವೇದ ಅಧ್ಯಕ್ಷ ಡಾ. ಅಲ್ಲಮಪ್ರಭು ಗುಡ್ಡಾ ಹೇಳಿದರು.
ನಗರದ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಬಿಎಲ್ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಒಂದು ದಿನದ ವಿಚಾರ ಸಂಕಿರಣ ಅನುಸಂಧಾನ-11 ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದ ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು. ಈ ಮೂಲಕ ಜನರಿಗೆ ಆಯುರ್ವೇದ ಚಿಕಿತ್ಸೆಯ ಲಾಭ ದೊರೆಯುವಂತೆ ಮಾಡಬೇಕು ಎಂದು ಅವರು ಹೇಳಿದರು.
ಬೆಳಗಾವಿ ಕೆಎಲ್ಇ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸುಹಾಸಕುಮಾರ ಶೆಟ್ಟಿ, ಪುಣೆಯ ಭಾರತೀಯ ವಿದ್ಯಾಪೀಠದ ಪ್ರಾಚಾರ್ಯ ಡಾ. ಶೈಲೇಶ ದೇಶಪಾಂಡೆ, ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಂಖ್ಯಾಶಾಸ್ತ್ರಜ್ಞ ಡಾ. ಅಜಯಕುಮಾರ ರಂಗೋಲಿ ಮಾತನಾಡಿದರು.
ಡಾ. ಆರ್.ವಿ. ಕುಲಕರ್ಣಿ, ಡಾ. ಬಿ. ಶ್ರೀನಿವಾಸ ಪ್ರಸಾದ, ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ, ಉಪಪ್ರಾಚಾರ್ಯ ಡಾ. ಶಶಿಧರ ನಾಯಕ, ವೈದ್ಯರಾದ ಡಾ. ಪ್ರಮೋದ ಸಿ. ಬರಗಿ, ಡಾ. ಸತೀಶ ಪಾಟೀಲ ಇತರರಿದ್ದರು.
ದೇಶದ ನಾನಾ ರಾಜ್ಯಗಳ 400ಕ್ಕೂ ಹೆಚ್ಚು ಸ್ನಾತಕೋತ್ತರ ವೈದ್ಯಕೀಯ, ಯುನಾನಿ, ನರ್ಸಿಂಗ್, ಫಾರ್ಮಸಿ ಸಂಶೋಧನೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net