

ಪ್ರಮುಖ ಮುಖ್ಯಾಂಶಗಳು
ಆಳಂದ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲು ವಿಫಲವಾಗಿರುವುದು ಶಾಸಕರ ರಾಜಕೀಯ ಹಾಗೂ ಆಡಳಿತಾತ್ಮಕ ವೈಫಲ್ಯವಾಗಿದೆ. ರೈತರಿಗೆ ಬೆಳೆ ವಿಮೆ, ಬರ ಪರಿಹಾರ ಸೇರಿ ನಿರಂತರವಾಗಿ ಅನ್ಯಾಯವಾಗುತ್ತಿದ್ದರೂ ಅದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಈಗಲಾದರೂ ಆಳಂದವನ್ನು ಬರಪೀಡಿತ ತಾಲೂಕು ಘೋಷಿಸಿ, ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು. ಕುಡಿವ ನೀರು, ಜಾನುವಾರುಗಳಿಗೆ ಮೇವು ಹಾಗೂ ಅಗತ್ಯವಿರುವ ನೆರವು ಒದಗಿಸಬೇಕು.
— > ಸುಭಾಷ ಗುತ್ತೇದಾರ್, ಮಾಜಿ ಶಾಸಕ