_1780237510606.webp?w=480&auto=format%2Ccompress&fit=max)
_1780237510606.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ದೇವರು,ಧರ್ಮ,ಪರಂಪರೆಗಳುಭಾರತೀಯ ಸಂಸ್ಕೃತಿಯ ಪ್ರಮುಖಹೆಗ್ಗುರುತುಗಳು.ಅಂತಹ ಭಾರತೀಯಸಂಸ್ಕೃತಿಯನ್ನು ಗಟ್ಟಿಗೊಳಿಸುವಲ್ಲಿಸಾರಥಿಗಳಾಗಿ ಕೆಲಸ ಮಾಡಿದ್ದುವಿಶ್ವಕರ್ಮ ಸಮುದಾಯ ಎಂದುನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರಮಠದ ಡಾ.ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರಸ್ವಾಮೀಜಿ ಹೇಳಿದರು.
ಟೌನ್‌ಹಾಲ್‌ನಲ್ಲಿಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾಹಮ್ಮಿಕೊಂಡಿದ್ದ ರಾಜ್ಯಮಟ್ಟದಮಕ್ಕಳ ಪ್ರತಿಭಾ ಪುರಸ್ಕಾರಕಾರ್ಯಕ್ರಮದ ಸಾನ್ನಿಧ್ಯ ವಹಿಸಿಆಶೀರ್ವಚನ ನೀಡಿದರು.
ಜಗತ್ತಿನಲ್ಲಿಎಲ್ಲವನ್ನು ಸೃಷ್ಟಿ ಮಾಡುವವನುಭಗವಂತ ಎಂದು ನಂಬಲಾಗಿದೆ.ಆದರೆ ಅಂತಹಭಗವಂತನನ್ನು ಸೃಷ್ಟಿ ಮಾಡುವವನುವಿಶ್ವಕರ್ಮ.ಅಂದರೆ ಕಲಿಗಾಲದಲ್ಲಿಯಾರೂ ದೇವರನ್ನು ನೇರವಾಗಿನೋಡುವುದಕ್ಕೆ ಸಾಧ್ಯವಿಲ್ಲ.ಆದ್ದರಿಂದ ಎಲ್ಲರೂದೇವರನ್ನು ವಿಗ್ರಹಗಳ ಮೂಲಕನೋಡಬೇಕು. ಅಂತಹವಿಗ್ರಹಗಳನ್ನು,ಅವುಗಳನ್ನುಸ್ಥಾಪಿಸುವ ದೇವಾಲಯಗಳನ್ನುನಿರ್ಮಾಣ ಮಾಡುವವರು ವಿಶ್ವಕರ್ಮಸಮುದಾಯದವರು.ದೇವರ ಮೂರ್ತಿಯನ್ನುಕಡೆದು ಅದಕ್ಕೆ ಕಣ್ಣುಗಳನ್ನುಇಡುವ ಮೂಲಕ ಜೀವಕಳೆಯನ್ನುತುಂಬುತ್ತಾರೆ.ಆ ಮೂರ್ತಿಗೆಗುರು ಪ್ರಾಣಪ್ರತಿಷ್ಠೆಯನ್ನುಮಾಡಿ ಪೂಜಾರ್ಹತೆಯನ್ನು ತಂದುಕೊಡುತ್ತಾನೆ.ಹೀಗೆ ವಿಶ್ವಕರ್ಮರಸೇವೆ ಸಮಾಜದಲ್ಲಿ ಅಪೂರ್ವವಾದದ್ದು.ಇಂತಹ ವಿಶ್ವಕರ್ಮಸಮಾಜದ ಪ್ರತಿಭಾನ್ವಿತ ಮಕ್ಕಳಿಗೆಪ್ರತಿಭಾ ಪುರಸ್ಕಾರ ನೀಡುತ್ತಿರುವುದುಉತ್ತಮ ಕಾರ್ಯ.ಇಂದಿನ ಮಕ್ಕಳೇಮುಂದಿನ ಪ್ರಜೆಗಳು.ಅಂತಹವರನ್ನುಸಮಾಜದ ಮುಖಂಡರಾದ ಕೆ.ಪಿ.ನಂಜುಂಡಿಯವರುಗುರುತಿಸಿದ್ದಾರೆ.ನಂಜುಂಡಿಯವರುಪ್ರತಿ ಸೋಮವಾರ ನಮ್ಮ ಮಠಕ್ಕೆಬಂದು ಅಜ್ಜಯ್ಯನ ದರ್ಶನ ಮಾಡುತ್ತಾರೆ.ಅವರು ಯಾವಾಗಲೂತಮಗಾಗಿ ಏನನ್ನೂ ಕೇಳುವುದಿಲ್ಲ.ತಮ್ಮ ಸಮುದಾಯಕ್ಕೆಒಳಿತಾಗುವಂತೆ ಪ್ರಾರ್ಥಿಸುತ್ತಾರೆ.ಮುಂದಿನ ದಿನಗಳಲ್ಲಿಅವರಿಗೆ ಒಳ್ಳೆಯದಾಗಲಿ ಎಂದುಶ್ರೀಗಳು ಆಶೀರ್ವದಿಸಿದರು.
ಸಮಾರಂಭದಲ್ಲಿಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ವಿಶ್ವಕರ್ಮಸಮಾಜದ ಸಂಘಟನೆಗಾಗಿ ಕೆ.ಪಿ.ನಂಜುಂಡಿಕಳೆದ 25-30 ವರ್ಷದಿಂದಬಹಳ ಶ್ರಮಪಟ್ಟಿದ್ದಾರೆ.ಮುಜರಾಯಿ ಇಲಾಖೆಯಎ ಮತ್ತು ಬಿ ದರ್ಜೆ ದೇವಾಲಯಗಳವ್ಯವಸ್ಥಾಪನ ಸಮಿತಿಯಲ್ಲಿವಿಶ್ವಕರ್ಮರೊಬ್ಬರಿಗೆ ಸ್ಥಾನನೀಡುವ ಅವರ ಬೇಡಿಕೆಯನ್ನು ಈಗಾಗಲೇರಾಜ್ಯಪಾಲರಿಗೆ ಕಳಿಸಿದ್ದೇವೆ.ಅದನ್ನು ಪ್ರತ್ಯೇಕವಾಗಿಮತ್ತೊಮ್ಮೆ ಕಳಿಸುವ ಬಗ್ಗೆ ಚಿಂತನೆನಡೆಸುವುದಾಗಿ ಹೇಳಿದರು.
ಸಮಾರಂಭದಲ್ಲಿಸಮುದಾಯದ ವಿವಿಧ ಸ್ವಾಮೀಜಿಗಳು,ಶಾಸಕ ಎಸ್.ಟಿ.ಸೋಮಶೇಖರ್,ಹಿರಿಯ ಪತ್ರಕರ್ತರವಿ ಹೆಗಡೆ,ವಿಶ್ವಕರ್ಮಮಹಾಸಭೆಯ ಕೆ.ಪಿ.ನಂಜುಂಡಿ,ಲಗ್ಗೆರೆರವಿಕುಮಾರ್,ಐ.ಸಿ.ಪಾಂಚಾಳ್ಮತ್ತಿತರರು ಉಪಸ್ಥಿತರಿದ್ದರು.