ಗಣತಿಗೆ ಜನರ ಸಹಕಾರ ಅಗತ್ಯ

The census requires people's cooperation.
The census requires people's cooperation.
Published on
ಬಾಗೇಪಲ್ಲಿ: ರಾಷ್ಟ್ರೀಯ ಜನಗಣತಿ ಅಂಗವಾಗಿ ಏ.16 ರಿಂದ 2026ರ ಮೇ 15 ವರಗೆ ನಡೆಯಲಿರುವ ಮನೆ ಗಣತಿ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್​ ತಿಳಿಸಿದ್ದಾರೆ.
ಬಾಗೇಪಲ್ಲಿ ಪುರಸಭೆಯಲ್ಲಿ ಮನೆ ಗಣತಿದಾರರಿಗೆ ತರಬೇತಿ ನೀಡಿ ಪರಿಕರ ವಿತರಿಸಿ ಗಣತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಬಾಗೇಪಲ್ಲಿ ಪಟ್ಟಣದ ವ್ಯಾಪ್ತಿಯ 23 ವಾರ್ಡ್​ಗಳಿಗೆ ಏ.16 ರಿಂದ ಮೇ 15 ರವರೆಗೆ 1 ತಿಂಗಳ ಕಾಲ ಜನಗಣತಿ ಅಂಗವಾಗಿ ಮನೆ ಗಣತಿ ಕಾರ್ಯ ನಡೆಯಲಿದ್ದು ಪಟ್ಟಣ ವ್ಯಾಪ್ತಿಯ 23 ವಾರ್ಡ್​ಗಳಲ್ಲಿ 52 ಬ್ಲಾಕ್​ ರಚಿಸಿ ಗಣತಿ ಕಾರ್ಯಕ್ಕೆ ಒಟ್ಟು 52 ಗಣತಿದಾರರನ್ನು ನೇಮಕ ಮಾಡಲಾಗಿದೆ.
ಮನೆ ಗಣತಿ ಕಾರ್ಯಕ್ಕೆ ತೆರಳುವ ಮೇಲ್ವಿಚಾರಕರಿಗೆ, ಗಣತಿದಾರರಿಗೆ ಈಗಾಗಲೇ 3 ಹಂತದಲ್ಲಿ ತರಬೇತಿ ಕಾರ್ಯಾಗಾರ ಮಾಡಲಾಗಿದ್ದು, ಮನೆ ಗಣತಿ ಕಾರ್ಯಕ್ಕೆ ಮನೆಗಳ ಬಳಿ ಬರುವ ಗಣತಿದಾರರಿಗೆ ಮಾಹಿತಿ ನೀಡಿ ಸಹಕರಿಸುವಂತೆ ಪುರಸಭೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಚೇರಿ ಪ್ರಭಾರ ವ್ಯವಸ್ಥಾಪಕ ಅತಾವುಲ್ಲಾ, ಕಂದಾಯ ನೀರೀಕ್ಷಕಿ ಉಷಾರಾಣಿ, ಮೇಲ್ವಿಚಾರಕರು, ಗಣತಿದಾರರು, ಸಿಬ್ಬಂದಿ ವರ್ಗದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net