ಪೂರ್ವಿಕರ ಹಬ್ಬಗಳ ಆಚರಣೆ ವೈಜ್ಞಾನಿಕ ನೆಲಗಟ್ಟಿನಲ್ಲಿತ್ತು : ಸಮಾಜಸೇವಕ ಕೆ ಹೇಮಂತ್.

 ಕೆಆರ್ ಪುರದ ಶ್ರೀ  ಮಹಾಬಲ ದೇವಸ್ಥಾನ ಬಳಿ ಮಕರ ಸಂಕ್ರಾಂತಿ ಅಂಗವಾಗಿ ಕಾರ್ಯಕ್ರಮದಲ್ಲಿ ರಾಸುಗಳ ಮಾಲೀಕರಿಗೆ ಸಮಾಜ ಸೇವಕ ಹೇಮಂತ್ ಚಿನ್ನಿ ನಗದು ವಿತರಿಸಿದರು.
ಕೆಆರ್ ಪುರದ ಶ್ರೀ ಮಹಾಬಲ ದೇವಸ್ಥಾನ ಬಳಿ ಮಕರ ಸಂಕ್ರಾಂತಿ ಅಂಗವಾಗಿ ಕಾರ್ಯಕ್ರಮದಲ್ಲಿ ರಾಸುಗಳ ಮಾಲೀಕರಿಗೆ ಸಮಾಜ ಸೇವಕ ಹೇಮಂತ್ ಚಿನ್ನಿ ನಗದು ವಿತರಿಸಿದರು.
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಕೆ.ಆರ್.ಪುರ: ನಮ್ಮ ಪೂರ್ವಿಕರು ಹಬ್ಬ ಹರಿದಿನಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ರೂಢಿ ಮಾಡಿದ್ದಾರೆ. ಅವುಗಳನ್ನು ಮುಂದಿನ ಪೀಳಿಗೆಯೂ ಆಚರಿಸುವಂತೆ ಮಾಡಬೇಕಿದೆ ಎಂದು ಸಮಾಜಸೇವಕ ಕೆ ಹೇಮಂತ್ ಚಿನ್ನಿ ತಿಳಿಸಿದ್ದಾರೆ.
ಕೆ ಆರ್ ಪುರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಬಲೇಶ್ವರ ದೇವಸ್ಥಾನದ ಬಳಿ ಪ್ರತಿ ವರ್ಷದಂತೆ ಮಕರ ಸಂಕ್ರಾತಿ ಹಬ್ಬದ ನಿಮಿತ್ತ ಆಯೋಜಿಸಿದ್ದ ಧನಕರುಗಳ ಮೆರವಣಿಗೆ ಕಾರ್ಯಕ್ರಮದಲಿ ್ಲ ಭಾಗವಹಿಸಿ ಮಾತನಾಡಿರು.
ಪ್ರತಿ ಹಬ್ಬಗಳಲ್ಲಿ ವಿಶಿಷ್ಠ ರೀತಿಯ ಭಕ್ಷಗಳನ್ನು ತಯಾರಿಸಿ ನೈವೈದ್ಯ ಮಾಡುವ ಪರಿಪಾಠ ನಮ್ಮಲ್ಲಿ ಚಾಲ್ತಿಯಲ್ಲಿದೆ. ಪ್ರಮುಖವಾಗಿ ಸಂಕ್ರಾತಿ ಹಬ್ಬ ಚಳಿಗಾಲ ಮುಗಿಸಿ ಬೇಸಿಗೆ ಕಾಲಕ್ಕೆ ಪಾರ್ದಾಪಣೆ ಮಾಡುವ ಕಾಲ. ಈ ಹಬ್ಬದಲ್ಲಿ ಎಳ್ಳು ಬೆಲ್ಲ ಹಂಚಿ ಆಚರಣೆ ಮಾಡುವುದರಲ್ಲಿ ವೈಜ್ಞಾನಿಕ ಮಹತ್ವವಿದೆ. ಹಿರಿಯ ಸಂಪ್ರದಾಯಗಳನ್ನು ಉಳಿಸಿ ಬೆಳಸಲು ಇಂತಹ ಹಬ್ಬ ಹರಿದಿನಗಳನ್ನು ಸಾಮೂಹಿಕವಾಗಿ ಆಚರಣೆ ಮಾಡೋಣ ಎಂದರು.
ಇದೇ ವೇಳೆ ಧನಕರುಗಳ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ರಾಸುಗಳಿಗೆ ಮೊದಲನೇ ಬಹುಮಾನ 10,000 ಎರಡನೇ ಬಹುಮಾನ ₹5,000 ಮೂರನೇ ಬಹುಮಾನ ₹3,000 + ಟ್ರೋಫಿ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಧನಕರುಗಳಿಗೆ ಸಮಾಧಾನಕರ ನಗದು ಬಹುಮಾನ ವಿತರಿಸಲಾಯಿತು, ಸ್ನೇಹ ಮತ್ತು ಪ್ರೀತಿಯ ಸಂಕೇತವಾಗಿ ಸುಮಾರು 5000 ಜನರಿಗೆ ಎಳ್ಳು ಬೆಲ್ಲ ನೀಡಿ ಹಬ್ಬದ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಅಂತೋಣಿಸ್ವಾಮಿ, ಕೆ.ಎನ್, ಸರಸ್ವತಮ್ಮ, ಅಮರ್ ಜ್ಯೋತಿ ಮೋಹನ್,ಶಿವಪ್ಪ,ಚಿದಂಬರ್, ಕೆ.ವೈ.ರಾಕೇಶ,ತೇಜಸ್ ಬುಜ್ಜ ಗಿರೀಶ್,ಮಂಜುಳಾ ದೇವಿ,ಮುರಳಿಸ್ವಾಮಿ,ರವಿ ನಾಗಭೂಷಣ,ಕೆ.ಪಿ.ಕೃಷ್ಣ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net