

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:
ಯುವತಿಗೆ ನಿರಂತರ ಕಿರುಕುಳ ನೀಡಿ ಮತ್ತು ಆಕೆಗೆ ಬಂದ ಮದುವೆ ಸಂಬಂಧಗಳನ್ನು ತಪ್ಪಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದಲ್ಲಿ ವಿವಾಹಿತ ವ್ಯಕ್ತಿಯೊಬ್ಬನ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
⚠️
ಪ್ರಚೋದನೆ ಮೇಲ್ನೋಟಕ್ಕೆ ಸಾಬೀತು
ಆತ್ಮಹತ್ಯೆ ಪ್ರಚೋದನೆ ಪ್ರಕರಣ ಎಂದು ಪರಿಗಣಿಸಲು ಅಗತ್ಯವಾದ ಪ್ರಚೋದನೆ, ಗೋಳುಹೊಯ್ದುಕೊಳ್ಳುವುದು ಮತ್ತು ಸಾಮಿಪ್ಯದ ಅಂಶಗಳು ಈ ಪ್ರಕರಣದಲ್ಲಿ ಮೆಲ್ನೋಟಕ್ಕೆ ಸಾಬೀತಾಗಿವೆ. ಆರೋಪಿಯ ವರ್ತನೆಗೆ ಯುವತಿಯು ವಿರೋಧ ವ್ಯಕ್ತಪಡಿಸಿದ್ದರೂ, ಕಿರುಕುಳ ನೀಡುವುದನ್ನು ಮುಂದುವರೆಸಿದ್ದಾನೆ. ಆದ್ದರಿಂದ ಈ ಪ್ರಕರಣದಲ್ಲಿ ವಿಚಾರಣೆ ಅತ್ಯಗತ್ಯ ಎಂದು ಕೋರ್ಟ್ ಅವಲೋಕನ ಮಾಡಿದೆ.