ಕಟ್ಟಡ ನಿರ್ಮಾಣ ಗುಣಮಟ್ಟದಿಂದ ಕೂಡಿರಲಿ

ಬೀಳಗಿ ಸುನಗ ತಾಂಡಾ-2ರಲ್ಲಿ ನಿರ್ಮಾಣವಾಗಲಿರುವ ಕಟ್ಟಡ ಕಾರ್ಮಿಕ ಇಲಾಖೆ ವಸತಿ ಶಾಲೆ ನಿರ್ಮಾಣಕ್ಕೆ ಶಾಸಕ ಜೆ.ಟಿ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಜಿಪಂ ಕೆಡಿಪಿ ನಾಮ ನಿರ್ದೇಶಿತ ಸದಸ್ಯ ಜಿ. ಆರ್.ಪಾಟೀಲ, ಕಾರ್ಮಿಕ ಇಲಾಖೆ ಎಇಇ ಎಚ್. ಅರುಣಕುಮಾರ, ರಾಜಶೇಖರ ಕುರಡಿಕರ, ಯಮನಪ್ಪ ರೊಳ್ಳಿ, ರವಿ ನಾಗನಗೌಡರ, ಪ್ರವೀಣ ಹಿರೇಮಠ, ಇತರರಿದ್ದರು.
ಬೀಳಗಿ ಸುನಗ ತಾಂಡಾ-2ರಲ್ಲಿ ನಿರ್ಮಾಣವಾಗಲಿರುವ ಕಟ್ಟಡ ಕಾರ್ಮಿಕ ಇಲಾಖೆ ವಸತಿ ಶಾಲೆ ನಿರ್ಮಾಣಕ್ಕೆ ಶಾಸಕ ಜೆ.ಟಿ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಜಿಪಂ ಕೆಡಿಪಿ ನಾಮ ನಿರ್ದೇಶಿತ ಸದಸ್ಯ ಜಿ. ಆರ್.ಪಾಟೀಲ, ಕಾರ್ಮಿಕ ಇಲಾಖೆ ಎಇಇ ಎಚ್. ಅರುಣಕುಮಾರ, ರಾಜಶೇಖರ ಕುರಡಿಕರ, ಯಮನಪ್ಪ ರೊಳ್ಳಿ, ರವಿ ನಾಗನಗೌಡರ, ಪ್ರವೀಣ ಹಿರೇಮಠ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜೆ. ಟಿ.ಪಾಟೀಲ ಸೂಚನೆ
  • 35 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ
  • ಸುನಗ ತಾಂಡಾದಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಿಕ್ಷಣ ಸೌಲಭ್ಯ
ಬೀಳಗಿ: ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಸುನಗ ಹತ್ತಿರ ಸುಮಾರು 8 ಎಕರೆ ಪ್ರದೇಶದಲ್ಲಿ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗಾಗಿ ಸುಸಜ್ಜಿತ ವಸತಿ ಶಾಲೆ ನಿರ್ಮಾಣವಾಗಲಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ. ಪಾಟೀಲ ಹೇಳಿದರು.
ತಾಲೂಕಿನ ಸುನಗ ತಾಂಡಾ-2ರಲ್ಲಿ ಕರ್ನಾಟಕ ಸರ್ಕಾರ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಅಂದಾಜು 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಟ್ಟಡ ಕಾರ್ಮಿಕ ವಸತಿ ಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮತನಾಡಿದರು.
ಕಟ್ಟಡ ನಿರ್ಮಾಣವು ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿಯನ್ನು ಯೋಜನಾ ವರದಿ ಪ್ರಕಾರ 18 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಶಿಕ್ಷಣದ ಸೌಲಭ್ಯ ಒದಗಿಸಲಾಗುತ್ತಿದ್ದು, ನೋಂದಾಯಿತ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಇದಲ್ಲದೆ, ಸುನಗ, ಚಿಕ್ಕಾಲಗುಂಡಿ ಹಾಗೂ ಯಡಹಳ್ಳಿ ಗ್ರಾಮಗಳಿಗೆ ಕೆಪಿಎಸ್ ಶಾಲೆ ಮಂಜೂರಾಗಿದ್ದು, ಶೀಘ್ರದಲ್ಲೇ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುವುದು. ಸುನಗ ಗ್ರಾಮದಲ್ಲಿ ರಸ್ತೆ ಸೇರಿ ಮೂಲ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು. ಬೀಳಗಿ ಪಟ್ಟಣದಲ್ಲಿ ಕಾರ್ಮಿಕರ ಕುಟುಂಬಗಳಿಗಾಗಿ 2 ಎಕರೆ ಪ್ರದೇಶದಲ್ಲಿ ಕಲ್ಯಾಣ ಮಂಟಪ ಹಾಗೂ ನಿರಾಶ್ರಿತರಿಗಾಗಿ 8 ಎಕರೆ ಭೂಮಿಯಲ್ಲಿ ಕೇಂದ್ರ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಯುಕೆಪಿ ಯೋಜನೆಯಲ್ಲಿ ಮುಳುಗಡೆಯಾಗಲಿರುವ ನೀರಾವರಿ ಭೂಮಿಗೆ 40, ಒಣಬೇಸಾಯ ಭೂಮಿಗೆ 30 ಲಕ್ಷ ರೂ. ಎಕರೆಗೆ ಪರಿಹಾರ ನಿಗದಿ ಮಾಡಿ ಪರಿಹಾರ ವಿತರಿಸಲಾಗುತ್ತಿದೆ. ಸಾಲ ತೆಗೆದಾದರೂ ಸರಿ ನಮ್ಮ ಸರ್ಕಾರ ಯುಕೆಪಿ ಯೋಜನೆ ಪೂರ್ಣಗೊಳಿಸಲಿದೆ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸುರಕ್ಷತಾ ಕಿಟ್‌ಗಳನ್ನು ವಿತರಿಸಲಾಯಿತು.
ಜಿಪಂ ಕೆಡಿಪಿ ನಾಮ ನಿರ್ದೇಶಿತ ಸದಸ್ಯ ಜಿ. ಆರ್. ಪಾಟೀಲ, ಕಾರ್ಮಿಕ ಇಲಾಖೆ ಎಇಇ ಎಚ್. ಅರುಣಕುಮಾರ, ತಾಲೂಕು ಕಾರ್ಮಿಕ ನಿರೀಕ್ಷಕ ರಾಜಶೇಖರ ಕುರಡಿಕರ, ಮಾಜಿ ಜಿಪಂ ಸದಸ್ಯ ಯಮನಪ್ಪ ರೊಳ್ಳಿ, ಕಾರ್ಮಿಕ ಇಲಾಖೆ ಕಾರ್ಯನಿರ್ವಾಹಕ ರವಿ ನಾಗನಗೌಡರ, ಪ್ರವೀಣ ಹಿರೇಮಠ, ಚಂದ್ರಶೇಖರ ಪಂಢರಿ, ರವಿ ಲಿಂಗಣ್ಣವರ, ಹನಮಂತ ದಳವಾಯಿ, ಬಸು ಮೇಟಿ, ನಾರಾಯಣ ಕಂಬಾರ, ಶಂಕರ ಡಬರಿ, ರಂಗಪ್ಪ ಕವಳ್ಳಿ, ಶಂಕರ ಲಮಾಣಿ, ಮಹೇಶ ಲಮಾಣಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net