ಜೀತಪದ್ಧತಿ ಜೀವಂತ

ಹುಲಿಯೂರುದುರ್ಗ ಹೋಬಳಿ ಪಾವಸಂದ್ರದ labour  ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ  ಮೇಲೆ ಅಧಿಕಾರಿಗಳು ದಾಳೀ ನಡೆಸಿದರು.
ಹುಲಿಯೂರುದುರ್ಗ ಹೋಬಳಿ ಪಾವಸಂದ್ರದ labour ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಮೇಲೆ ಅಧಿಕಾರಿಗಳು ದಾಳೀ ನಡೆಸಿದರು.
Published on
ಹುಲಿಯೂರುದುರ್ಗ :ಜಿಲ್ಲೆಯಲ್ಲಿ ಅಮಾನವೀಯ ಜೀತ ಪದ್ಧತಿ ಜೀವಂತವಾಗಿರುವುದು ಪತ್ತೆಯಾಗಿದ್ದು, ಕುಣಿಗಲ್​ ತಾಲೂಕಿನಲ್ಲಿ ಉಪ ವಿಭಾಗಾಧಿಕಾರಿ ನಾಹೀದ ಜಮ್​ ಜಮ್​ ನೇತೃತ್ವದ ತಂಡ ಜೀತಕ್ಕಿದ್ದ 11 ಗಣಿ ಕಾರ್ಮಿಕರನ್ನು ರಕ್ಷಣೆ ಮಾಡಿದೆ.
labour
ಹುಲಿಯೂರುದುರ್ಗ ಹೋಬಳಿ ಪಾವಸಂದ್ರದ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಜೀತಕ್ಕಿಟ್ಟುಕೊಂಡು ದುಡಿಸಿಕೊಳ್ಳುತ್ತಿದ್ದ ಇಬ್ಬರು ಮಕ್ಕಳು ಸೇರಿ ಐವರು ಮಹಿಳೆಯರು, ನಾಲ್ವರು ಪುರುಷರನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಮೈಸೂರು ಮೂಲದ ಕಲ್ಲು ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಕರೆತಂದು ಹಣ ನೀಡಿ ಜೀತಕ್ಕೆ ದುಡಿಸಿಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಮುಕ್ತಿ ಸಂಸ್ಥೆ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿ ಪ್ರಾಕೃತಿಕ ಸಂಪತ್ತನ್ನು ದೋಚಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಕೂಡ ಮಾಡಲಾಗಿದೆ
. ಕಳೆದ 20 ವರ್ಷಗಳಿಂದಲೂ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರೂ ಅಧಿಕಾರಿಗಳು ಮೌನವಿಸಿರುವ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯರಿಗೆ ಕುಣಿಗಲ್​ ಮಹಿಳಾ ಸಂತ್ವಾನ ಕೇಂದ್ರ ಹಾಗೂ ಪುರುಷರಿಗೆ ಕುಣಿಗಲ್​ ಬಾಲಕರ ವಸತಿ ನಿಲಯದಲ್ಲಿ ಆಶ್ರಯ ಕಲ್ಪಿಸಲಾಗಿದೆ. ತಹಸೀಲ್ದಾರ್​ ವರದಿ ಆಧರಿಸಿ ಹುಲಿಯೂರುದುರ್ಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಕುಣಿಗಲ್​ ತಹಸೀಲ್ದಾರ್​ ಕರಿಯನಾಯ್ಕ್​, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಯ್ಯ, ಸಿಡಿಪಿಒ ಕಮಲ, ಕಾರ್ಮಿಕ ಇಲಾಖೆ ಅಧಿಕಾರಿ ಪುರುಷೋತ್ತಮ್​, ಕಂದಾಯ ನಿರೀಕ್ಷಕ ರಘು, ಗ್ರಾಮ ಆಡಳಿತ ಅಧಿಕಾರಿ ಭವ್ಯಾ ಇದ್ದರು.
ಕುಣಿಗಲ್​ ತಾಲೂಕಿನ ಪಾವಸಂದ್ರದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯಲ್ಲಿ ಜೀತಕಿದ್ದ ಹನ್ನೊಂದು ಮಂದಿಯನ್ನು ರಣೆ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಬಾಲಕಾರ್ಮಿಕ ಹಾಗೂ ಜೀತ ಪದ್ಧತಿ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಣೆ ಮಾಡಿರುವ ಕಾರ್ಮಿಕರಿಗೆ ಜೀತ ವಿಮುಕ್ತಿ ಪ್ರಮಾಣ ಪತ್ರ ವಿತರಿಸಲಾಗುವುದು.
> ನಾಹೀದ ಜಮ್​ ಜಮ್​, ಉಪವಿಭಾಗಧಿಕಾರಿ, ತುಮಕೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net