ವೈಜನಾಥ ಪಾಟೀಲ್ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೋರಾಟದ ನೀಲನಕ್ಷೆ ಸಿದ್ದತೆ
ಚಿಂಚೋಳಿ ಪಟ್ಟಣದ . ವೈಜನಾಥ ಪಾಟೀಲ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ ಕಲ್ಯಾಣ ಕರ್ನಾಟಕ 371(ಜೆ) ಸಂರಕ್ಷಣಾ ಸಮಿತಿ ಹೋರಾಟಕ್ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ್ ಚಾಲನೆ ನೀಡಿದರು. ಈ ವೇಳೆ ಕೊಪ್ಪಳದ ಶರಣಪ್ಪ ಜೆ. ಡಿ, ಗೋಪಾಲರಾವ ಕಟ್ಟಿಮನಿ, ಶಾಮರಾವ ಓಂಕಾರ್, ಭೀಮಶೇಟ್ಟಿ ಮುರುಡಾ, ಕುಪೇಂದ್ರರಾವ ಪಾಟೀಲ್, ಚಂದ್ರಶೇಖರ ಹರಸೂರ, ಕೆ.ಎಂ. ಬಾರಿ, ಚಿತ್ರಶೇಖರ ಪಾಟೀಲ್, ಬಸವರಾಜ ಸುಲೇಪೇಟ, ಉಮೇಶ ಪಾಟೀಲ್, ಶ್ರೀಮಂತ ಕಟ್ಟಿಮನಿ, ಗುಂಡಯ್ಯ ಸ್ವಾಮಿ, ಪೀತಂಬರಾವ ಘಂಟಿ, ಜಗನ್ನಾಥ ಗುತ್ತೇದಾರ, ಸತೀಶ ಇಟಗಿ, ನಾರಾಯಣ, ದೊಡ್ಡಪ್ಪ ಕುಷ್ಟಗಿ, ಸುರೇಶ ಕುಷ್ಟಗಿ, ಮುರಳಿರಾವ ಯಲಬುರ್ಗಾ, ಹೇಮಣ್ಣ ಯಲಬುರ್ಗಾ, ಬಸವರಾಜ ಜಿ. ಎಚ್. ಕೊಪ್ಪಳ, ಬಸವರಾಜ ಯಲಬುರ್ಗಾ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದಿ.ವೈಜನಾಥ ಪಾಟೀಲ್ ಸಮಾಧಿಗೆ ವಿಶೇಷ ಪೂಜೆ / ಕೊಪ್ಪಳದಿಂದ ಕಲ್ಯಾಣ ಕರ್ನಾಟಕ 371 (ಜೆ) ಸಂರಕ್ಷಣಾ ಸಮಿತಿ ಅಸ್ಥಿತ್ವಕ್ಕೆ
ಚಿಂಚೋಳಿ: ಬೀದರದಿಂದ ಕೊಪ್ಪಳದ ವರೆಗೆ ಪ್ರತಿ ಹಳ್ಳಿಯಿಂದ ದೆಹಲಿವರೆಗೆ 371 (ಜೆ) ಸಮಗ್ರ ಜಾರಿಗಾಗಿ ಹಾಗೂ ವಿವಿಧ ಬೇಡಿಕೆಯೊಂದಿಗೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅಡಿಯಲ್ಲಿಯೇ ಕಲ್ಯಾಣ ಕರ್ನಾಟಕ 371 ಜೆ ಸಂರಕ್ಷಣಾ ಸಮಿತಿ ರಚಿಸಿ ಹೋರಾಟಕ್ಕೆ ಸಜ್ಜಾಗುತ್ತಿರುವುದು ಸಂತಸದ ಸಂಗತಿ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ವೈಜನಾಥ ಪಾಟೀಲ್ ಹೇಳಿದರು.
ಇಂದುಬಪಟ್ಟಣದ ದಿ. ವೈಜನಾಥ ಪಾಟೀಲ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೂತನ ಹೋರಾಟ ಸಮಿತಿಗೆ ಜಯವಾಗಲಿ, ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತಾಗಲಿ ಎಂದರು.
ಅದೇ ರೀತಿ ಕೊಪ್ಪಳದ ಶರಣಪ್ಪ ಜೆ. ಡಿ ಮಾತನಾಡಿ ಕಲ್ಯಾಣ ಕರ್ನಾಟಕ 371 ಜೆ ಸಂರಕ್ಷಣಾ ಸಮಿತಿಯು ದಿ. ವೈಜನಾಥ ಪಾಟೀಲ್ ಅವರ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲಿದೆ. ಪ್ರಥಮ ಅಂಶಗಳು ದಿ. ಪಾಟೀಲ್ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಬೇಕು. ಕಲ್ಯಾಣ ಕರ್ನಾಟಕ ಪ್ರತಿ ಜಿಲ್ಲೆಯಲ್ಲಿ ಪಾಟೀಲ್ ಅವರ ಪ್ರತಿಮೆ ಸ್ಥಾಪಿಸಬೇಕು. ಪ್ರತಿ ಕಚೇರಿ, ಶಾಲೆ, ಕಾಲೇಜುಗಳಲ್ಲಿ ಪಾಟೀಲ್ ಅವರ ಭಾವಚಿತ್ರ ಅಳವಡಿಸಬೇಕು. ದಿ. ವೈಜನಾಥ ಪಾಟೀಲ್ ಅಧ್ಯಯನ ಪೀಠ ಸ್ಥಾಪಿಸಬೇಕು.ಪಠ್ಯ ಪುಸ್ತಕದಲ್ಲಿ ಪಾಟೀಲ್ ಅವರ ಬದುಕು, ಹೋರಾಟದ ಕುರಿತು ಪಠ್ಯ ಅಳವಡಿಸಬೇಕು. ಕೆ.ಕೆ.ಆರ್.ಡಿ.ಬಿ ಅನುದಾನ ಸಮರ್ಪಕ ಬಳಕೆಯಾಗಬೇಕು. ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಜಿಲ್ಲಾವಾರು ನೇಮಕಾತಿಯಲ್ಲಿ 371 ಜೆ ಅಡಿಯಲ್ಲಿ ಮೀಸಲಾತಿ ನೀಡಬೇಕು ಎಂಬ ಹಲವಾರು ಬೇಡಿಕೆಗಳೊಂದಿಗೆ ಹೋರಾಟ ರೂಪಿಸಲಾಗಿದ್ದು, ಕೊಪ್ಪಳದಿಂದ ಬೀದರವರೆಗೆ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ, ಹೋರಾಟ ರೂಪಿಸಲಾಗುವುದು ನಿಮ್ಮೆಲ್ಲರ ಸಹಕಾರ ಅವಶ್ಯ ಎಂದು ಮಾತನಾಡಿದರು.
ಅದೇ ರೀತಿ ಗೋಪಾಲರಾವ ಕಟ್ಟಿಮನಿ, ಶಾಮರಾವ ಓಂಕಾರ್, ಭೀಮಶೇಟ್ಟಿ ಮುರುಡಾ, ಕುಪೇಂದ್ರರಾವ ಪಾಟೀಲ್, ಚಂದ್ರಶೇಖರ ಹರಸೂರ, ಕೆ.ಎಂ. ಬಾರಿ, ಚಿತ್ರಶೇಖರ ಪಾಟೀಲ್, ಬಸವರಾಜ ಸುಲೇಪೇಟ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಉಮೇಶ ಪಾಟೀಲ್, ಶ್ರೀಮಂತ ಕಟ್ಟಿಮನಿ, ಗುಂಡಯ್ಯ ಸ್ವಾಮಿ, ಪೀತಂಬರಾವ ಘಂಟಿ, ಜಗನ್ನಾಥ ಗುತ್ತೇದಾರ, ಸತೀಶ ಇಟಗಿ, ನಾರಾಯಣ, ದೊಡ್ಡಪ್ಪ ಕುಷ್ಟಗಿ, ಸುರೇಶ ಕುಷ್ಟಗಿ, ಮುರಳಿರಾವ ಯಲಬುರ್ಗಾ, ಹೇಮಣ್ಣ ಯಲಬುರ್ಗಾ, ಬಸವರಾಜ ಜಿ. ಎಚ್. ಕೊಪ್ಪಳ, ಬಸವರಾಜ ಯಲಬುರ್ಗಾ, ಮಲ್ಲಿಕಾರ್ಜುನ ಅಣವಾರ ಸೇರಿದಂತೆ ಅನೇಕರು ಇದ್ದರು.