ಕಕ ಶರಣರು ಆಳಿದ ಪುಣ್ಯದ ನಾಡು

ನಗನೂರ ಗ್ರಾಮದಲ್ಲಿ ಬಲವಂತ ಶರಣರು ಹಾಗೂ ಗಂಗಮ್ಮ ತಾಯಿ ಅವರ ಪುಣ್ಯಸ್ಮರಣೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಪ್ರೊ.ಶಿವರಾಜ ಪಾಟೀಲ್ ಉದ್ಘಾಟಿಸಿದರು. ಶ್ರೀ ಶರಣಪ್ಪ ಶರಣರು, ಶ್ರೀ ಖಂಡಪ್ಪ ತಾತಾ, ಶಂಕ್ರಣ್ಣ ವಣಕ್ಯಾಳ, ಜಗದೀಶ ಶರಣರು, ದತ್ತರಾಜ ಕಲಶೆಟ್ಟಿ ಇದ್ದರು.
ನಗನೂರ ಗ್ರಾಮದಲ್ಲಿ ಬಲವಂತ ಶರಣರು ಹಾಗೂ ಗಂಗಮ್ಮ ತಾಯಿ ಅವರ ಪುಣ್ಯಸ್ಮರಣೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಪ್ರೊ.ಶಿವರಾಜ ಪಾಟೀಲ್ ಉದ್ಘಾಟಿಸಿದರು. ಶ್ರೀ ಶರಣಪ್ಪ ಶರಣರು, ಶ್ರೀ ಖಂಡಪ್ಪ ತಾತಾ, ಶಂಕ್ರಣ್ಣ ವಣಕ್ಯಾಳ, ಜಗದೀಶ ಶರಣರು, ದತ್ತರಾಜ ಕಲಶೆಟ್ಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರೊ. ಶಿವರಾಜ ಪಾಟೀಲ್ ಅಭಿಮತ
  • ನಗನೂರ ಗ್ರಾಮದಲ್ಲಿ ಶರಣ ಸಂಸ್ಕೃತಿ ಉತ್ಸವ
  • ವಿವಿಧ ಸಾಧಕರಿಗೆ ಸನ್ಮಾನ ಕಕ ಶರಣರು ಆಳಿದ ಪುಣ್ಯದ ನಾಡು
ಕೆಂಭಾವಿ : ನಮ್ಮ ಕಲ್ಯಾಣ ಕರ್ನಾಟಕ ಭಾಗವನ್ನು ಶರಣರು ಆಳಿದ ಪುಣ್ಯದ ನಾಡಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಶಿವರಾಜ ಪಾಟೀಲ್ ಹೇಳಿದರು.
ನಗನೂರ ಗ್ರಾಮದ ಶರಣಬಸವೇಶ್ವರ ದಾಸೋಹ ಮಠದಲ್ಲಿ ಬಲವಂತ ಶರಣರು ಹಾಗೂ ಮಾತೋಶ್ರೀ ಗಂಗಮ್ಮ ತಾಯಿ ಅವರ ಪುಣ್ಯ ಸ್ಮರಣೋತ್ಸವ ನಿಮಿತ್ತ ಪುಟ್ಟರಾಜ ಪುಟಾಣಿಗಳ ಕಲಾ ತಂಡ ಶಹಾಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ಶರಣ ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಶರಣ ಮತ್ತು ಶರಣೆಯರ ಮಾಹಿತಿಯನ್ನು ಸಂಗ್ರಹಿಸಿ ದೊಡ್ಡ ಪುಸ್ತಕ ಹೊರ ತರುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಅರಳಗುಂಡಗಿಯಲ್ಲಿ ಜನಿಸಿದ ಶರಣಬಸವೇಶ್ವರರ ಇತಿಹಾಸ ಕೇವಲ ನಮ್ಮ ರಾಜ್ಯಕ್ಕೆ ಸೀಮಿತವಾಗಿರದೆ ರಾಷ್ಟçಮಟ್ಟದಲ್ಲಿ ಅವರ ಕೀರ್ತಿ ಹಬ್ಬಿದೆ. ಶ್ರೀ ಶರಣಬಸವೇಶ್ವರರ ಪವಾಡಗಳಿದ್ದು, ಅವರ ಇತಿಹಾಸ ಮತ್ತು ಶರಣ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳು ಎಲ್ಲೆಡೆ ನಡೆಯುವಂತಾಗಬೇಕು. ನಗನೂರ ಶ್ರೀಮಠಕ್ಕೂ ಮತ್ತು ಅರಳಗುಂಡಗಿ ಸಾಲೋಕ್ಯ ವಂಶದ ಶ್ರೀ ಶರಣಬಸವೇಶ್ವರ ಮನೆತನಕ್ಕೂ ಅವಿನಾಭಾವ ಸಂಬAಧವಿದ್ದು ಇವೆರೆಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ ಸಜ್ಜನ್, ನಗನೂರ ದಾಸೋಹ ಮಠ ಅತೀ ಪ್ರಾಶಚೀನವಾದ ತನ್ನದೆ ಇತಿಹಾಸ ಹೊಂದಿರುವ ಧರ್ಮ ಸಂಘಟನೆಯ ಮಠವಾಗಿದೆ. ಇಲ್ಲಿ ಶರಣರ ಸಂಸ್ಕೃತಿ, ದಾಸೋಹ, ಧರ್ಮಾಚರಣೆ ನಿತ್ಯ ನಡೆಯುತ್ತಿದ್ದು ಇದು ಪ್ರತಿಯೊಬ್ಬ ಆಸ್ತಿಕನ ಶ್ರದ್ಧಾ ಮತ್ತು ಭಕ್ತಿಯ ಕೇಂದ್ರವಾಗಿದೆ ಎಂದರು.
ಶರಣರಿಗೆ ಹಣ ಸಂಪತ್ತು ಮುಖ್ಯವಲ್ಲ ಅವರಿಗೆ ಶರಣರ ಮಾತುಗಳು ಅವರು ಹಾಕಿಕೊಟ್ಟ ಸಂಸ್ಕೃತಿಯ ಮಾರ್ಗ ಮುಖ್ಯವಾಗಿದ್ದು, ಇದು ಮಠದಲ್ಲಿ ನಿತ್ಯ ನಡೆಯಬೇಕಾದರೆ ಭಕ್ತರ ಸಹಕಾರ ಕೂಡ ಬಹಳ ಮುಖ್ಯವಾಗಿದೆ. ನಮ್ಮ ಪೀಳಿಗೆಗೆ ಶರಣರ ಸಂಸ್ಕೃತಿ ಕಲಿಸಿದಾಗ ಮಾತ್ರ ಧರ್ಮ ಜಾಗೃತಿಯಾಗಲು ಸಾಧ್ಯ ಎಂದರು.
ಜಿಪA ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಕ್ಯಾಳ, ನಗನೂರ ಮಠ ನಡೆದು ಬಂದ ದಾರಿ ಮತ್ತು ಇಲ್ಲಿನ ಸಂಸ್ಕೃತಿ ಬಗ್ಗೆ ಮಾತನಾಡಿದರು. ಆಕಾಶವಾಣಿ ಕಲಾವಿದ ದತ್ತರಾಜ ಕಲಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವರನ್ನು ಶರಣಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ನಾಡಿನ ಖ್ಯಾತ ಸಂಗೀತಗಾರರಿAದ ಮತ್ತು ವಿವಿಧ ಭಜನಾ ಮಂಡಳಿಗಳಿAದ ಸಂಗೀತ, ಭಜನೆ ನೆರವೇರಿತು.
ಪೀಠಾಽಪತಿ ಶ್ರೀ ಶರಣಪ್ಪ ಶರಣರು ಹಾಗೂ ಶ್ರೀ ಖಂಡಪ್ಪ ತಾತಾ ಸಾನ್ನಿಧ್ಯ ವಹಿಸಿದ್ದರು. ಕಲಾ ತಂಡದ ಅಧ್ಯಕ್ಷೆ ವಿದ್ಯಾಶ್ರೀ ಕಲಶೆಟ್ಟಿ, ಸೂಗೂರೇಶ ವಾರದ, ಚನ್ನಬಸಪ್ಪ ದೇಸಾಯಿ, ರಾಮಣ್ಣ ದೇಶಪಾಂಡೆ, ಶಿವರಾಜ ಬೂದೂರ, ಶಿವಶಂಕರ ತಿಪ್ಪಶೆಟ್ಟಿ, ಹಳ್ಳೆಪ್ಪ ಹವಾಲ್ದಾರ ಇದ್ದರು. ಮಠದ ವಕ್ತಾರ ಶ್ರೀ ಜಗದೀಶ ಶರಣರು ನಿರೂಪಣೆ ಮಾಡಿದರು. ಶ್ರೀಮಂತ ತಿಪ್ಪಶೆಟ್ಟಿ ಸ್ವಾಗತಿಸಿದರು. ದೇವರಾಜ ಹೂಗಾರ ವಂದಿಸಿದರು.

ಪ್ರಶಸ್ತಿ ಪಡೆದ ಸಾಧಕರು

ವಿಠ್ಠಲ ಯಾದವ (ಉದ್ಯಮ), ಬಸವರಾಜ ಭಂಟನೂರ (ಸಂಗೀತ), ಪಾರ್ವತಿ ಎಸ್.ಬೂದೂರ (ಸಾಹಿತ್ಯ), ಶಾಂತಾ ಅಪ್ಪಾಗೋಳ (ಶಿಕ್ಷಣ), ಡಿ. ಸಿ.ಪಾಟೀಲ (ಶಿಕ್ಷಣ), ಬಸವರಾಜ ಅಂಗಡಿ (ಸಮಾಜ ಸೇವೆ), ವಿಜಯಾಚಾರ್ಯ ಪುರೋಹಿತ (ಮಾಧ್ಯಮ), ನಾರಾಯಣ ಸಂಗಾಡೆ (ಉದ್ಯಮ), ಶರಣು ಕಾಡಮಗೇರಾ (ಸಮಾಜ ಸೇವೆ), ಶಿವು ಸ್ವಾಮಿ ಶಹಾಪೂರ (ಸಮಾಜ ಸೇವೆ), ಸೋಮರೆಡ್ಡಿ ಮಂಗಿಹಾಳ (ಶಿಕ್ಷಣ), ಪ್ರಕಾಶ ಅಲಬನೂರ (ಸಮಾಜ ಸೇವೆ), ಕನಕ ಪುರಂದರ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವಾಸಂಸ್ಥೆ (ಸಾಂಸ್ಕೃತಿಕ ಕ್ಷೇತ್ರ).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net