ಪಂಚಾಯಿತಿಯಿಂದ ಜಿಲ್ಲಾಧಿಕಾರಿವರೆಗೆ: ಕಳೆದ ಒಂದು ವರ್ಷದಿಂದ ಬೇಕಾದ ಎಲ್ಲ ಸಿದ್ಧತೆಗಳಿಗೆ ಸತತ ಪ್ರಯತ್ನ ನಡೆದಿತ್ತು. ಗ್ರಾಪಂನಲ್ಲಿ ಸರ್ವಾನುಮತದ ರ್ನಿಣಯ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಲ್ಲಿ ಇದ್ದ ಎಲ್ಲ ಅಡ್ಡಿ ಆತಂಕಗಳ ನಿವಾರಣೆ ಮಾಡಿ ಮೇಲ್ದರ್ಜೆಗೆ ಬೇಕಾದ ಎಲ್ಲ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ದಾಖಲೆ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸರ್ಕಾರಕ್ಕೆ ಶಿಾರಸು ಮಾಡಲು ಬೇಕಾದ ಅಂಕಿ&ಅಂಶಗಳು ಮತ್ತು ದಾಖಲೆಗಳನ್ನು ಪಡೆದು ಬೇತಮಂಗಲ ಗ್ರಾಪಂ ಅನ್ನು ಪಪಂ ಆಗಿ ಮಾಡಲು ಎಲ್ಲ ಅರ್ಹತೆ ಇದ್ದು, ಇದನ್ನು ಪರಿಗಣಿಸಬಹುದು ಎಂದು ಸರ್ಕಾರಕ್ಕೆ ಶಿಾರಸು ಮಾಡಿದ್ದಾರೆ ಎನ್ನಲಾಗಿದೆ.