ದೇವರಿದ್ದಾನೆ ಎಂಬ ನಂಬಿಕೆಯೇ ಬಲ / VIJAYAPUR

ಪ್ರಥಮ ಏಕಾದಶಿ ಪ್ರಯುಕ್ತ ವಿಜಯಪುರದ ಶ್ರೀ ಕ್ಷೇತ್ರ ಹಾರ್ಡಿಪುರದ ಶ್ರೀ ಲಕ್ಷಿ$್ಮವೆಂಕಟರಮಣಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶ್​ ಗೌಡ, ದೇವಾಲಯದ ಪ್ರಧಾನ ಅರ್ಚಕ ನೀಕಿಲ್​ ಶಾಸ್ತ್ರೀ, ಶ್ರೀನಿವಾಸಪ್ಪ, ಬಿಜೆಪಿ ಟೌನ್​ ಅಧ್ಯಕ್ಷ ವೆಂಕಟೇಶ್​ ಪ್ರಭು, ಬಾಬಣ್ಣ ಭಕ್ತರು ಇದ್ದರು.

Published on
ವಿಜಯಪುರ : ದೇವರು ಇದ್ದಾನೆ ಎಂಬುದು ಮನುಷ್ಯನ ನಂಬಿಕೆ. ಆ ನಂಬಿಕೆಯೇ ನಮ್ಮನ್ನು ಸರಿದಾರಿಯಲ್ಲಿ ನಡೆಸುತ್ತದೆ. ತಂತ್ರಜ್ಞಾನದಿಂದ ಮನುಷ್ಯ ಎಷ್ಟೇ ಎತ್ತರಕ್ಕೆ ಏರಿದರೂ ದೈವದ ಮುಂದೆ ಪ್ರತಿಯೊಬ್ಬರು ತಲೆ ಬಾಗಬೇಕಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶ್​ ಗೌಡ ಹೇಳಿದರು.
ಪ್ರಥಮ ಏಕಾದಶಿ ಪ್ರಯುಕ್ತ ಹಾರ್ಡಿಪುರ ಶ್ರೀ ಲಕ್ಷಿ$್ಮವೆಂಕಟರಮಣಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮಲ್ಲಿ ಸಂಸ್ಕಾರ, ಆಚಾರ&ವಿಚಾರ ಬೆಳೆಸುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಯುವಕರು ಭಾಗವಹಿಸಬೇಕು. ಧ್ಯಾನ, ಪೂಜೆಯಿಂದ ನಮ್ಮಲ್ಲಿ ಅಡಗಿರುವ ದ್ವೇಷ, ಅಸೂಯೆ ಕಡಿಮೆಯಾಗುತ್ತದೆ. ಸಮಾಜದ ಬಗ್ಗೆ ಗೌರವ, ಪ್ರೀತಿ ಬೆಳೆಯುತ್ತದೆ. ಧ್ಯಾನ, ಮನಸ್ಸಿಗೆ ಮುದ ನೀಡುವುದರ ಜತೆಗೆ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ದೇವಾಲಯ ಧರ್ಮದರ್ಶಿ ಜಯರಾಮ್​ ಮಾತನಾಡಿ, ಪ್ರತಿಯೊಬ್ಬರಲ್ಲಿ ಧರ್ಮದ ಬಗ್ಗೆ ಶ್ರದ್ಧೆ ಭಕ್ತಿ ಬೆಳವಣಿಗೆಯಾದಲ್ಲಿ ಮಾತ್ರ ಸಮಾಜದ ಅಶಾಂತಿ ದೂರ ಮಾಡಬಹುದು. ಪ್ರಸ್ತುತ ಸಮಾಜದಲ್ಲಿ ಅಶಾಂತಿ ವಾತಾವರಣ ಹೆಚ್ಚಾಗಿ ಭಕ್ತಿ ಭಾವ ದೂರವಾಗುತ್ತಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net