ರೈತರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ farmers

farmers  ಚಂದಾಪುರದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಆನೇಕಲ್​ ವಿಧಾನಸಭಾ ೇತ್ರದ ನಿಕಟಪೂರ್ವ ಅಭ್ಯರ್ಥಿ ಹುಲ್ಲಹಳ್ಳಿ ಶ್ರೀನಿವಾಸ್​, ಮುಖಂಡರಾದ  ದೊಡ್ಡ ಹಾಗಡೆ ಶಂಕರ್​, ಜಯಪ್ರಕಾಶ್​ ರೆಡ್ಡಿ, ಚಿಕ್ಕ ನಾಗಮಂಗಲ ವೆಂಕಟೇಶ್​,  ನಾಗರಾಜುರೆಡ್ಡಿ, ವೇಣು, ರಮೇಶ್​ ರೆಡ್ಡಿ, ಪೂಣ್ಯ ಕೋಟಿ ಶ್ರೀನಿವಾಸ್​, ಕೃಷ್ಣರೆಡ್ಡಿ, ಸೋಮಶೇಖರ್​ ರೆಡ್ಡಿ, ಮುರಳಿ ಇದ್ದರು.

Published on
ಆನೇಕಲ್: ತಾಲೂಕಿನ ಸರ್ಜಾಪುರ ಹೋಬಳಿಯ ಮುತ್ತಾನಲ್ಲೂರು, ಹಂದೇನಹಳ್ಳಿ farmers ಪಂಚಾಯತಿ ವ್ಯಾಪ್ತಿಯ ಫಲವತ್ತಾದ ಕೃಷಿ ಭೂಮಿಯನ್ನು ಕೆಐಎಡಿಬಿ ಭೂ ಸ್ವಾಧಿನ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಸ್​ಆರ್​ಟಿ ಅಶೋಕ್​ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಚಂದಾಪುರದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ 2 ಸಾವಿರ ಎಕರೆಗೂ ಹೆಚ್ಚು ಕೃಷಿ ಭೂಮಿಯನ್ನು ಕೆಐಎಡಿಬಿ ಸ್ವಾಧಿನ ಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದೆ. ಈ ಸಂಬಂಧ ಹೈ ಕೋರ್ಟ್​ ಸಹ ಪರಿಶೀಲಿಸುವಂತೆ ತೀರ್ಪು ನೀಡಿದೆ. ಆದಾಗ್ಯು, ಸ್ವಾಧಿನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾಗಿರುವುದನ್ನು ಖಂಡಿಸಿ ರೈತರು ಬೆಂಗಳೂರಿನ ಕೆಐಎಡಿಬಿ ಕಚೇರಿಗೆ ತೆರಳಿ ಮನವಿ ಸಲ್ಲಿಸುವ ಸಮಯದಲ್ಲಿ ಪೊಲೀಸರು ರೈತರ ಮೇಲೆ ನಡೆಸಿರುವ ದೌರ್ಜನ್ಯ ಹಾಗೂ ಹಲ್ಲೆಯನ್ನು ಬಿಜೆಪಿ ವಿರೋಧಿಸುತ್ತದೆ ಎಂದು ತಿಳಿಸಿದರು.
ಬಿಜೆಪಿ ಯುವ ಮುಖಂಡ ನಾಗಮಂಗಲ ವೆಂಕಟೇಶ್​ ಗುರು ಮಾತನಾಡಿ, ಆನೇಕಲ್​ ತಾಲೂಕಿನಲ್ಲಿ ಶಾಸಕರು ಅಭಿವೃದ್ಧಿ ಮರೆತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ನಾಯಕರ ಭೇಟಿ:
ತಾಲೂಕಿನ ಸರ್ಜಾಪುರ ಹೋಬಳಿ ವ್ಯಾಪ್ತಿಯ 11 ಗ್ರಾಮಗಳ ರೈತರ ಭೂಮಿಯನ್ನು ಅಕ್ರಮವಾಗಿ ಕೆಐಎಡಿಬಿ ವಶಪಡಿಸಿಕೊಳ್ಳಲು ಮುಂದಾಗಿರುವುದನ್ನು ಖಂಡಿಸಿ ಭೂಸ್ವಾದಿನ ವಿರೋಧ ವೇದಿಕೆಯಿಂದ ಕಳೆದ ವರ್ಷದಿಂದ ನಿರಂತರವಾಗಿ ಪ್ರತಿಭಟನೆ ಹಾಗೂ ಹೋರಾಟ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಧರಣಿ ನಿರತ ಹೋರಾಟಗಾರರನ್ನು ಬೆಂಬಲಿಸಲು ಜು.6ರಂದು ರಾಜ್ಯ ಬಿಜೆಪಿ ನಾಯಕ ಆರ್​.ಅಶೋಕ್​, ಸಂಸದ ಡಾ.ಸಿ.ಎನ್​ ಮಂಜುನಾಥ್​ ಸೇರಿ ರಾಜ್ಯಮಟ್ಟದ ನಾಯಕರು ಭೇಟಿ ಮಾಡಲಿದ್ದಾರೆ ಹಾಗೂ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಬಿಜೆಪಿ ಮುಖಂಡ ಹುಲ್ಲಳ್ಳಿ ಶ್ರೀನಿವಾಸ್​ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net