ಗೌರಿಬಿದನೂರು :ವಿಶ್ವದ ಸೃಷ್ಟಿಯಲ್ಲಿ ಪ್ರಮುಖ ಪಾತ್ರವಹಿಸಿದ ವಿಶ್ವಕರ್ಮ ಮಹರ್ಷಿಗಳು ಜಗತ್ತಿನ ಮೊದಲ ಇಂಜಿನಿಯರ್ ಎಂದು ತಹಸೀಲ್ದಾರ್ ಕೆ.ಎಂ.ಅರವಿಂದ್ ಹೇಳಿದರು.
ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿ,
ವಿಶ್ವಕರ್ಮರ ವಾಸ್ತುಶಿಲ್ಪಕ್ಕೆ ಮಾರುಹೋಗದವರು ಇಲ್ಲ. ನಿರ್ಮಾಣ, ಮರಗೆಲಸ ಸೇರಿ ಇತರ ಕುಶಲ ಕರ್ಮಿಗಳಲ್ಲಿ ತೊಡಗಿರುವ ಕಾರ್ಮಿಕರ ದೇವರು ಎಂದು ಅವರನ್ನು ಪರಿಗಣಿಸಲಾಗುತ್ತದೆ.
ಬ್ರಹ್ಮಾಂಡವನ್ನು ಸುಂದರವಾಗಿ ರಚಿಸಲು ದೇವರಿಗೆ ನೆರವು ಒದಗಿಸಿ, ಇಡೀ ಪ್ರಪಂಚದ ನೆ ರಚನೆಯಲ್ಲಿ, ಪ್ರಮುಖ ಧಾರ್ಮಿಕ ೇತ್ರಗಳ ನಿರ್ಮಾಣದಲ್ಲಿ ಅವರ ಕೊಡುಗೆ ಅಪಾರವಾಗಿದೆ. ವಾಸ್ತುಶಿಲ್ಪಗಳು ಅಜರಾಮರವಾಗಿ ಉಳಿದಿವೆ ಎಂದರು.
ವಿಶ್ವಕರ್ಮ ಸಂದ ತಾಲೂಕು ಅಧ್ಯಕ್ಷ ಎಂ.ಎನ್.ರಾಧಾಕೃಷ್ಣ ಮಾತನಾಡಿ, ವಿಶ್ವಕರ್ಮ ಸಮುದಾಯ ಜಗತ್ತಿಗೆ ತನ್ನದೇ ಆದ ಕೊಡುಗೆ ನೀಡಿದರೂ ರಾಜಕೀಯವಾಗಿ ಹಿಂದುಳಿದಿದೆ. ಈ ೇತ್ರದಲ್ಲಿ ಮುಂಚೂಣಿಗೆ ಬರಲು ಸಮುದಾಯದವರು ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದರು.
ಯುವ ಮುಖಂಡರಾದ ಎಂ.ಆರ್.ಆಕಾಶ್ ದೀಪ್ ಮಾತನಾಡಿ, ಜಯಂತಿಯನ್ನು ಸರ್ಕಾರವು ಆಚರಣೆ ಮಾಡುವುದರಿಂದ ಸರ್ಕಾರ ಮತ್ತು ಸಮುದಾಯದ ನಡುವೆ ಸಂಪರ್ಕ ಸೇತುವೆಯಾಗಲು ಸಾಧ್ಯವಾಗುತ್ತದೆ. ಪ್ರತಿ ಸಮುದಾಯಕ್ಕೂ ರಾಜಕೀಯ ಶಕ್ತಿ ಪ್ರಮುಖವಾಗಿದ್ದು,
ಇದರಿಂದ ಮಾತ್ರ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದೇ ನಮ್ಮೆಲ್ಲರ ಉದ್ದೇಶವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಮುದಾಯದ ಸಾಧಕರಾದ ರಾ ಜಗದೀಶ್, ಅಶೋಕಚಾರಿ, ಆರ್.ರಾಜು, ಜನಾರ್ಧನಚಾರಿ, ತರುಣ್ ರಂಗನಾಥ್, ಗುರು ಪ್ರಸಾದ್, ಎಚ್.ಎಸ್.ಮಲ್ಲಿಕಾರ್ಜುನ, ಎಚ್.ಜಗದೀಶ ಚಾರಿ, ಎಂ.ಆರ್.ಆಕಾಶ್ ದೀಪ್ ಅವರನ್ನು ತಹಸೀಲ್ದಾರ್ ಕೆ.ಎಂ.ಅರವಿಂದ್ ಅಭಿನಂದಿಸಿದರು.