ವಿದ್ವಾನ್ ಎಚ್.ವಿ.ರಘುರಾಮ್, ವಿದ್ವಾನ್ ಎಂ.ವಿ.ವಿಶ್ವಜಿತ್, ವಿದ್ವನ್ ಎಸ್.ಆರ್.ಕಾರ್ತಿಕೇಯ ಅವರು ಎರಡೂವರೆ ತಾಸು ಪಿಟೀಲು ತ್ರಯ ನುಡಿಸಿ ನಾದಲೋಕವನ್ನೇ ಸೃಷ್ಟಿಸಿದರು. ವಿದ್ವಾನ್ ಎ.ರೇಣುಕಾ ಪ್ರಸಾದ್ ಮೃದಂಗ ಬಾರಿಸಿದರೆ, ವಿದ್ವಾನ್.ಎ.ಎಸ್.ಎನ್.ಸ್ವಾಮಿ ಅವರು ಖಂಜಿರ ನುಡಿಸಿ, ವಿದ್ವಾನ್ ಶರತ್ ಕೌಶಿಕ್ ಘಟ ನುಡಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ವಿದ್ವಾನ್ ಆರ್.ಕೆ. ಪದ್ಮನಾಭ ಅವರು ಸಂಗೀತ ಕಚೇರಿ ನಡೆಸಿಕೊಟ್ಟ ಕಲಾವಿದರನ್ನು ಸನ್ಮಾನಿಸಿ ಪ್ರಶಂಸೆ ವ್ಯಕ್ತಪಡಿಸಿದರು.