ಶಾಸಕರ ವಿರುದ್ಧ ಆರೋಪ ಸರಿಯಲ್ಲ / ANEKAL

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್​ ಮುಖಂಡ ಮದ್ದೂರಪ್ಪ ಮಾತನಾಡಿದರು. ಹಿರಿಯ ಮುಖಂಡ ಬಿ.ಪಿ.ರಮೇಶ್​, ಕಾಂಗ್ರೆಸ್​ ನಾಯಕರಾದ ಕರ್ಪೂರು ರಮೇಶ್​, ಶಂಭಯ್ಯ, ಬೆಸ್ತಮಾನಹಳ್ಳಿ ಯಲ್ಲಪ್ಪ, ಚಂದಾಪುರ ಕೃಷ್ಣಮೂರ್ತಿ, ಪುಷ್ಪರಾಜು ಇತರರು ಇದ್ದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್​ ಮುಖಂಡ ಮದ್ದೂರಪ್ಪ ಮಾತನಾಡಿದರು. ಹಿರಿಯ ಮುಖಂಡ ಬಿ.ಪಿ.ರಮೇಶ್​, ಕಾಂಗ್ರೆಸ್​ ನಾಯಕರಾದ ಕರ್ಪೂರು ರಮೇಶ್​, ಶಂಭಯ್ಯ, ಬೆಸ್ತಮಾನಹಳ್ಳಿ ಯಲ್ಲಪ್ಪ, ಚಂದಾಪುರ ಕೃಷ್ಣಮೂರ್ತಿ, ಪುಷ್ಪರಾಜು ಇತರರು ಇದ್ದರು.
Published on
ಆನೇಕಲ್​ : ಶಾಸಕ ಬಿ.ಶಿವಣ್ಣ ಸಾಕಷ್ಟು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲವೆಂದು ಕಾಂಗ್ರೆಸ್​ ಮುಖಂಡ ಮದ್ದೂರಪ್ಪ ಆಕ್ರೋಶ ಹೊರ ಹಾಕಿದರು.
ಬಿಜೆಪಿ ಆನೇಕಲ್​ ಪರಾಜಿತ ಅಭ್ಯರ್ಥಿ ಹುಲ್ಲಳ್ಳಿ ಶ್ರೀನಿವಾಸ್​ ಅವರು ಶಾಸಕ ಬಿ.ಶಿವಣ್ಣ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ, ಗುಂಡಿಗಳನ್ನು ಮುಚ್ಚುತ್ತಿಲ್ಲ ಎಂಬ ಕಾರಣಕ್ಕೆ ಪ್ರತಿಭಟಿಸಿ ಆರೋಪ ಮಾಡಿದ್ದಾರೆ. ತಾಲೂಕು, ಪಟ್ಟಣದಿಂದ ಪ್ರತಿ ಗ್ರಾಮಕ್ಕೂ ಗುಣಮಟ್ಟದ ರಸ್ತೆ ನಿಮಾರ್ಣದಲ್ಲಿ ಶಾಸಕರು ಪ್ರಮುಖ ಪಾತ್ರವಹಿಸಿದ್ದಾರೆ. ಪ್ರತಿ ಹಳ್ಳಿಯಲ್ಲೂ ಸಮುದಾಯ ಭವನ, ಹಕ್ಕುಪತ್ರ, ನೀರಿನ ವ್ಯವಸ್ಥೆ ಸೇರಿ ಮೂಲ ಸೌಲಭ್ಯ ಕಲ್ಪಿಸಿದ್ದಾರೆ. ಆನೇಕಲ್​ನಲ್ಲಿ ಬಿಜೆಪಿ ಆಡಳಿತ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಹುಲ್ಲಳ್ಳಿ ಶ್ರೀನಿವಾಸ್​ ಅವರು ತಾಲೂಕಿಗೆ ನೀಡಿದ ಕೊಡುಗೆಯಾದರೂ ಏನು ಎಂದು ತಾಲೂಕಿನ ಶಾಸಕರ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕಾಂಗ್ರೆಸ್​ನ ಹಿರಿಯ ಮುಖಂಡ ಬಿ.ಪಿ.ರಮೇಶ್​ ಮಾತನಾಡಿ, ದಾಖಲೆ ಇಲ್ಲದೆ ಶಾಸಕರ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದರು. ಕಾಂಗ್ರೆಸ್​ ನಾಯಕರಾದ ಸರ್ಜಾಪುರ ಶ್ರೀನಿವಾಸ್​, ಅರೇಹಳ್ಳಿ ಮಧು, ಬನಹಳ್ಳಿ ಅಭಿ, ಶ್ರೀರಾಮ್​, ಮನೋಹರ್​, ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net