ಟೆಲಿಗ್ರಾಂ ಗ್ರೂಪ್​ ರಚಿಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಸಂಚು ರೂಪಿಸುತ್ತಿದ್ದ ಆರೋಪ: ಯುವಕನನ್ನು ಬಂಧಿಸಿದ ಚಿಕ್ಕಬಳ್ಳಾಪುರ ಪೊಲೀಸರು! Terror Plot Foiled in Chikkaballapura

ಬಂಧಿತ ಶಬ್ಬೀರ್ ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಪ್ರತ್ಯೇಕವಾದ ಭಯೋತ್ಪಾದಕರ ಗ್ರೂಪ್‌ ಒಂದನ್ನು ಕ್ರಿಯೇಟ್ ಮಾಡಿಕೊಂಡು ದುಷ್ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
Terror Plot Foiled in Chikkaballapura
ಬಂಧಿತ ಆರೋಪಿ ಶಬ್ಬೀರ್
Published on: 

ಚಿಕ್ಕಬಳ್ಳಾಪುರ: ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಚಿಕ್ಕಬಳ್ಳಾಪುರ ನಗರದಲ್ಲಿ ( Terror Plot Foiled in Chikkaballapura ) ಶಬ್ಬೀರ್ ಎಂಬ ಯುವಕನನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ.

Also Read
ಅರ್ಧ ದೇಶದಲ್ಲಿ ಮಳೆಯ ಅಬ್ಬರ, ಮತ್ತರ್ಧ ಬಿಸಿಲಿನ ಭೀಕರ: ಇನ್ಸಾಟ್-3ಡಿಎಸ್ ಕ್ಯಾಮೆರಾದಲ್ಲಿ ಬೆರಗುಗೊಳಿಸುವ ದೃಶ್ಯ ಸೆರೆ! INSAT-3DS satellite
Terror Plot Foiled in Chikkaballapura

ಬಂಧಿತ ಶಬ್ಬೀರ್ ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಪ್ರತ್ಯೇಕವಾದ ಗ್ರೂಪ್‌ ಒಂದನ್ನು ಕ್ರಿಯೇಟ್ ಮಾಡಿಕೊಂಡು ದುಷ್ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಎನ್ನಲಾಗಿದೆ. ಈ ಡಿಜಿಟಲ್ ಗ್ರೂಪ್ ಮೂಲಕ ದೇಶದ ವಿವಿಧ ಮೂಲೆಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುವುದು ಹೇಗೆ ಎಂಬ ಬಗ್ಗೆ ಪ್ರತಿದಿನವೂ ಸಭೆ ನಡೆಸಿ ಪ್ಲ್ಯಾನ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಭಯೋತ್ಪಾದನೆಗೆ ಬೇಕಾದ ಆರ್ಥಿಕ ಸಂಪನ್ಮೂಲವನ್ನು ಹೊಂದಿಸಲು ಶ್ರೀಮಂತರನ್ನು ಕಿಡ್ನಾಪ್ ಮಾಡುವ ದೊಡ್ಡ 'ಸ್ಕೆಚ್' ಹಾಕಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ದೇಶದ ಮೂವರು ಪ್ರಭಾವಿ ನಾಯಕರನ್ನು ಹತ್ಯೆ ಮಾಡಬೇಕು ಎಂಬ ಸಂಚಿನ ಕುರಿತು ಟೆಲಿಗ್ರಾಂ ಗ್ರೂಪ್‌ನಲ್ಲಿ ನಿರಂತರವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Also Read
ಸಿಇಸಿಗೆ ಮುಗಿಯದ ಸಂಕಷ್ಟ!...ದೆಹಲಿ ಬೀದಿಯಲ್ಲಿ ಜ್ಞಾನೇಶ್ ಹಟಾವೋ ಪೋಸ್ಟರ್, ಕೋರ್ಟ್‌ಗೂ ಅರ್ಜಿ | Gyanesh Hatao Posters
Terror Plot Foiled in Chikkaballapura

ಈ ಗಂಭೀರ ಪ್ರಕರಣದ ಆಳವನ್ನು ಅರಿತ ಚಿಕ್ಕಬಳ್ಳಾಪುರ ನಗರ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಬಿಎನ್‌ಎಸ್‌ (BNS) ಕಾಯ್ದೆ ಸೆಕ್ಷನ್ 113ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟೆಲಿಗ್ರಾಂ ಗ್ರೂಪ್‌ನಲ್ಲಿ ಶಬ್ಬೀರ್ ಜತೆ ಸಂಪರ್ಕದಲ್ಲಿದ್ದುಕೊಂಡು ದೇಶದ ಮೂಲೆ ಮೂಲೆಗಳಲ್ಲಿ ಅಡಗಿರುವ ಇತರ ಹಲವು ಶಂಕಿತರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಪ್ರಕರಣದ ತೀವ್ರತೆಯನ್ನು ಪರಿಗಣಿಸಿ, ಬಂಧಿತ ಶಬ್ಬೀರ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಎನ್‌ಐಎ (NIA) ವಶಕ್ಕೆ ಒಪ್ಪಿಸಲಾಗಿದೆ.

ಆರೋಪ ಅಲ್ಲಗೆಳೆದ ತಾಯಿ

ಭಯೋತ್ಪಾದನೆಗೆ ಪಿತೂರಿ ನಡೆಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿರುವ ಶಬ್ಬೀರ್ ಅಮಾಯಕನಾಗಿದ್ದು, ಆತನಿಗೆ ಯಾವುದೇ ವಿಧ್ವಂಸಕ ಕೃತ್ಯದ ಬಗ್ಗೆ ತಿಳಿದಿಲ್ಲ ಎಂದು ಶಬ್ಬೀರ್‌ ಅವರ ತಾಯಿ ಹಾಗೂ ಸಹೋದರ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ. ಶಬ್ಬೀರ್‌ ಮನೆಯಲ್ಲಿ ಇರುತ್ತಿದ್ದ. ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಏನಾಯಿತು ಎಂಬುದೇ ನಮಗೆ ಗೊತ್ತಿಲ್ಲ. ಪೊಲೀಸರು ಆತನನ್ನು ಬಂಧಿಸಿರುವುದರಿಂದ ನಮಗೆ ಭಯ ಹಾಗೂ ಆತಂಕ ಉಂಟಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದ ಶಬ್ಬೀರ್‌ ಅವರ ತಾಯಿ, ಪತಿ ಕೆಲಸಕ್ಕೆ ಹೋಗುತ್ತಿಲ್ಲ. ತಾವು ಚಿಕ್ಕ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ಕುಟುಂಬದ ಜೀವನ ಸಾಗಿಸುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಮಗನ ಬಂಧನದಿಂದ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net