ಇಂದಿರಾ ಕಿಟ್ ವಿತರಣೆಗಾಗಿ ಇಲಾಖೆ, ರಾಜ್ಯದ 31 ಜಿಲ್ಲೆಗಳನ್ನು ಐದು ವಿಭಾಗವಾಗಿ ವಿಗಂಡಿಸಿದೆ. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಗದಗ, ಹಾವೇರಿ ಮತ್ತು ಧಾರವಾಡಕ್ಕೆ (ವಿಭಾಗ-1) ನೇರಳೆ ಬಣ್ಣದ ಬ್ಯಾಗ್ ವಿತರಿಸಲಾಗುತ್ತದೆ. ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಉಡುಪಿಗೆ ನೀಲಿ ಬಣ್ಣದ ಕಿಟ್ ಸರಬರಾಜು ಮಾಡಲಾಗುತ್ತದೆ. ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರ ಕಾರ್ಡ್‌ದಾರರಿಗೆ( ವಿಭಾಗ-3) ಬಿಳಿ ಬಣ್ಣದ ಬ್ಯಾಗ್ ಕೊಡಲಾಗುತ್ತದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡಕ್ಕೆ ಹಳದಿ ಬಣ್ಣದ ಬ್ಯಾಗ್ ಮತ್ತು ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಬೆಂ.ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಿಗೆ ತಿಳಿ ನೀಲಿ ಬಣ್ಣದ ಇಂದಿರಾ ಕಿಟ್ ವಿತರಿಸಲಾಗುತ್ತದೆ.