ದಾಬಸ್ಪೇಟೆ &ಮಧುಗಿರಿ ರಾಜ್ಯ toll ಹೆದ್ದಾರಿಯ ನಿಜಗಲ್ ಕೆಂಪೋಹಳ್ಳಿ ಬಳಿಯ ಟೋಲ್ನಲ್ಲಿ ಶುಲ್ಕ ಸಂಗ್ರಹ ಕೈಬಿಡಬೇಕು ಎಂದು ಒತ್ತಾಯಿಸಿ ಸ್ಥಳಿಯರು ಕೆಶಿಪ್ ಟೋಲ್ ಅಧಿಕಾರಿ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ದಾಬಸ್ಪೇಟೆ: ನೆಲಮಂಗಲ ತಾಲೂಕಿನ ರಾಜ್ಯ ಹೆದ್ದಾರಿ 3ರಲ್ಲಿ ದಾಬಸ್ಪೇಟೆ ಹಾಗೂ Toll ಮಧುಗಿರಿ ನಡುವಿನ ನಿಜಗಲ್ ಕೆಂಪೋಹಳ್ಳಿ ಬಳಿಯ ಟೋಲ್ನಲ್ಲಿ ಜ.30ರಂದು ಆರಂಭಿಸಿದ್ದ ಶುಲ್ಕ ಪಡೆಯುವ ವ್ಯವಸ್ಥೆಗೆ ಸ್ಥಳಿಯರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ತಾತ್ಕಾಲಿಕ ತಡೆ ಹಿಡಿಯಲಾಗಿದೆ.
ದಾಬಸ್ಪೇಟೆ &ಮಧುಗಿರಿ ಎಸ್.ಎಚ್.3 ರಸ್ತೆಯಾಗಿದೆ. ಇದು ಕೆಆರ್ಡಿಸಿಎಲ್ ಮತ್ತು ಎಸ್ಟಿಆರ್ಆರ್ಗೆ ಸಂಬಂಧಿಸಿದ್ದಾಗಿದೆ. ಈ ರಸ್ತೆ ಅಭಿವೃದ್ಧಿಗೊಂಡು ಐದಾರು ವರ್ಷಗಳೇ ಕಳೆದಿವೆ.
ಇಂತಹ ದುರಾವಸ್ಥೆಯಿಂದ ಕೂಡಿರುವ ರಸ್ತೆಗೆ ನಿಜಗಲ್&ಕೆಂಪೋಹಳ್ಳಿ ಬಳಿಯ ಟೋಲ್ನಲ್ಲಿ ಮಾಡುತ್ತಿರುವ ಶುಲ್ಕ ಸಂಗ್ರಹವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಸ್ಥಳಿಯ ನಾಗರಿಕರು ಕೆಶಿಪ್ ಟೋಲ್ ಅಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ನರಸೀಪುರದ ವಿಶ್ವನಾಥ್ ಬಾಬು ಮಾತನಾಡಿ, ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಬಸವಪಟ್ಟಣದಿಂದ ನರಸೀಪುರದವರಿಗೂ ಸುಮಾರು 20ರಿಂದ 25 ಕಿ.ಮೀ ರಸ್ತೆ ಇದೆ. ಆದರೆ, ಟೋಲ್ ಸಂಗ್ರಹ ಮಾಡುವವರು ರಸ್ತೆ ದುರಸ್ತಿ ಮಾಡದೆ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಿಯರಿಗೆ ಯಾವುದೇ ರಿಯಾಯಿತಿ ನೀಡದಿರುವುದು ಆಕ್ರೋಶಕ್ಕೆ ಮೂಲ ಕಾರಣವಾಗಿದೆ. ರಸ್ತೆ ಗುಂಡಿಗಳಿಂದ ಕೂಡಿದೆ. ಗುಣಮಟ್ಟ ಕೇಳುವಂತಿಲ್ಲ. 24*7 ಆಂಬುಲೆನ್ಸ್, ಪೆಟ್ರೋಲಿಂಗ್ ವಾಹನ, ಕ್ರೇನ್ಸೇವೆಗಳು, ಅಪಘಾತ ಸಮಯದಲ್ಲಿ ತಕ್ಷಣ ನೆರವು, ಶೌಚಗೃಹ ಮತ್ತು ನೀರಿನ ವ್ಯವಸ್ಥೆ, ಇದ್ಯಾವುದೂ ಇಲ್ಲ. ಸ್ಥಳಿಯ ರಿಯಾಯಿತಿಯಂತೆ 20 ಕಿ.ಮೀ ಒಳಗಿನವರಿಗೆ ಉಚಿತ ಪ್ರವೇಶ ಇಲ್ಲವೆ, ಕನಿಷ್ಠ ಶುಲ್ಕದ ಪಾಸ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಕೆಶಿಪ್ ಅಧಿಕಾರಿ ಶಿವಕುಮಾರ್ ಮಾತನಾಡಿ, ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿ ಸುಮಾರು 25 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಸ್ಥಳಿಯರ ಸಂಚಾರಕ್ಕೆ ಸುಮಾರು 20 ಕಿ.ಮೀ ಅನುಮತಿ ನೀಡಿದ ನಂತರ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದರು.
ಪ್ರತಿ ಬಾರಿಯೂ ಹಣ ನೀಡಬೇಕಾ?
ನಿಜಗಲ್&ಕೆಂಪೋಹಳ್ಳಿ ಟೋಲ್ನಲ್ಲಿ ಯಾವುದೇ ಅನುಕೂಲಗಳು ಇಲ್ಲ ಎಂಬುದು ಸ್ಥಳಿಯರ ಹೋರಾಟಕ್ಕೆ ಮುಖ್ಯ ಕಾರಣವಾಗಿದೆ ಎಂದು ಗ್ರಾಪಂ ಸದಸ್ಯ ಲೋಕೇಶ್ ದೂರಿದರು.
ಶುಲ್ಕ ಪಾವತಿ ಪಡೆಯಬೇಕಾದರೆ ಸಾಕಷ್ಟು ನಿಯಮಗಳನ್ನು ಪಾಲಿಸಬೇಕು ಮತ್ತು ಹತ್ತಾರು ಅನುಕೂಲಗಳನ್ನು ಕಲ್ಪಿಸಬೇಕು. ಮುಖ್ಯವಾಗಿ ಸ್ಥಳಿಯರಿಗೆ ಪ್ರವೇಶ ಉಚಿತ ಇಲ್ಲವೆ, ಕನಿಷ್ಠ ಹಣ ಪಡೆಯಬೇಕು ಎಂಬ ನಿಯಮವಿದೆ. ಆದರೆ, ನಿಜಗಲ್ ಕೆಂಪೋಹಳ್ಳಿ ಟೋಲ್ಗೇಟ್ ಒಮ್ಮೆ ದಾಟಬೇಕಾದರೆ 35 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ನಾವು ಹತ್ತಾರು ಬಾರಿ ಗೇಟ್ ದಾಟಿ ವ್ಯವಹಾರಕ್ಕೆ ಹೋಗಲೇಬೇಕು. ಪ್ರತಿ ಬಾರಿಯೂ ಹಣ ನೀಡಬೇಕಾ? ನಮ್ಮ ಜಮೀನನ್ನು ರಸ್ತೆ ಅಭಿವೃದ್ಧಿಗೆ ನೀಡಿದ್ದೇವೆ.ಅದಕ್ಕೆ ಪರಿಹಾರವಾಗಿ ಕನಿಷ್ಠ ಹಣ ಪಡೆದಿದ್ದೇವೆ. ಈಗ ನಾವು ಸಹ ಶುಲ್ಕ ನೀಡುವ ದುರ್ಗತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.