ತಾತ್ಕಾಲಿಕ ಪ್ರತಿಭಟನೆ ಮುಂದೂಡಿಕೆ protest

ತಾತ್ಕಾಲಿಕ ಪ್ರತಿಭಟನೆ ಮುಂದೂಡಿಕೆ protest
ತಾತ್ಕಾಲಿಕ ಪ್ರತಿಭಟನೆ ಮುಂದೂಡಿಕೆ protest
Published on
ಮುಳಬಾಗಿಲು: ಅಪರ ಜಿಲ್ಲಾಧಿಕಾರಿ ಮಂಗಳಾ ಅವರು ದೇವರಾಯಸಮುದ್ರ, ಕೊತ್ತಮಂಗಲ ಕಂದಾಯ ವ್ಯಾಪ್ತಿಯ ಭೂ ಹಗರಣವನ್ನು ತನಿಖೆ ನಡೆಸಲು ವಿಶೇಷ ತಂಡ ರಚನೆ ಮಾಡುವ ಭರವಸೆ ನೀಡಿದ ಹಿನ್ನೆಲೆ ಏ.23ರ ಗುರುವಾರ ದೇವರಾಯಸಮುದ್ರ ಗೇಟ್​ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ತಿಳಿಸಿದರು. protest
ತಾಲೂಕಿನ ದೇವರಾಯಸಮುದ್ರ ಬಳಿ ಮಂಗಳವಾರ ಎಡಿಸಿ ಮಂಗಳಾ, ತಹಸೀಲ್ದಾರ್​ ವಿ.ಗೀತಾಗೆ ರೈತ ಸಂಘದಿಂದ ಮನವಿ ಸಲ್ಲಿಸಿ ಮಾತನಾಡಿ, ಇಬ್ಬರು ಅಧಿಕಾರಿಗಳು ಭರವಸೆ ನೀಡಿದ ಮೇರೆಗೆ ಗುರುವಾರ ಕರೆ ನೀಡಿದ್ದ ಹೆದ್ದಾರಿ ಬಂದ್​ ವಾಪಸ್​ ಪಡೆಯಲಾಗಿದೆ. ಮುಳಬಾಗಿಲು ತಾಲೂಕಿನ ಕೊತ್ತಮಂಗಲ ಹಾಗೂ ದೇವರಾಯಸಮುದ್ರ ಕಂದಾಯ ವ್ಯಾಪ್ತಿಯಲ್ಲಿ ಭೂ ಹಗರಣ, ನಕಲಿ ಸಾಗುವಳಿ ಚೀಟಿ ತನಿಖೆ ಆಗುವವರೆಗೂ ಯಾವುದೇ ಕಾರಣಕ್ಕೂ ಈ ಕಂದಾಯ ವೃತ್ತಗಳ ಜಮೀನಗಳ ಸ. ನಂ. ನೋಂದಣಿ ಮಾಡದಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಬೇಕೆಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಮುಖಂಡ ಕಮ್ಮದಟ್ಟಿ ಚಲಪತಿ ಮಾತನಾಡಿದರು. ಯಲುವಳ್ಳಿ ಪ್ರಭಾಕರ್​, ಹೆಬ್ಬಣಿ ಆನಂದರೆಡ್ಡಿ, ಪುತ್ತೇರಿ ರಾಜು, ನಾಗಣ್ಣ, ಸುನೀಲ್​ ಕುಮಾರ್​, ವೇಣು, ಕೇಶವ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net