ದೇವಾಲಯಗಳು ನೆಮ್ಮದಿ, ಶಾಂತಿ ನೀಡುವ ಕೇಂದ್ರಗಳು / NELAMANGAL

ನೆಲಮಂಗಲ ತಾಲೂಕಿನ ಜ್ಯೋಗಿಪಾಳ್ಯ ಉದ್ಭವ ಕಾಡು ಮಲ್ಲೇಶ್ವರ ಸ್ವಾಮಿ ದೇಗುಲ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಚನ್ನಬಸವ ಸ್ವಾಮೀಜಿ, ಶಾಸಕ ಎನ್​. ಶ್ರೀನಿವಾಸ್​ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ಎಂ.ನಾರಾಯಣ್​ಗೌಡ, ಟಿಎಪಿಸಿಎಂಎಸ್​ ಅಧ್ಯಕ್ಷ ಹನುಮಂತರಾಜು, ಬ್ಲಾಕ್​ ಕಾಂಗ್ರೆಸ್​ ಉಪಾಧ್ಯಕ್ಷ ಸಿ.ಎಂ.ಗೌಡ, ಉದ್ಯಮಿ ಚಿಕ್ಕೇಗೌಡ, ನಾರಾಯಣ್​ಸ್ವಾಮಿ ಇತರರು ಇದ್ದರು.
ನೆಲಮಂಗಲ ತಾಲೂಕಿನ ಜ್ಯೋಗಿಪಾಳ್ಯ ಉದ್ಭವ ಕಾಡು ಮಲ್ಲೇಶ್ವರ ಸ್ವಾಮಿ ದೇಗುಲ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಚನ್ನಬಸವ ಸ್ವಾಮೀಜಿ, ಶಾಸಕ ಎನ್​. ಶ್ರೀನಿವಾಸ್​ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ಎಂ.ನಾರಾಯಣ್​ಗೌಡ, ಟಿಎಪಿಸಿಎಂಎಸ್​ ಅಧ್ಯಕ್ಷ ಹನುಮಂತರಾಜು, ಬ್ಲಾಕ್​ ಕಾಂಗ್ರೆಸ್​ ಉಪಾಧ್ಯಕ್ಷ ಸಿ.ಎಂ.ಗೌಡ, ಉದ್ಯಮಿ ಚಿಕ್ಕೇಗೌಡ, ನಾರಾಯಣ್​ಸ್ವಾಮಿ ಇತರರು ಇದ್ದರು.
Published on
ನೆಲಮಂಗಲ : ತಾಲೂಕಿನ ಜ್ಯೋಗಿಪಾಳ್ಯ ಇತಿಹಾಸ ಪ್ರಸಿದ್ಧ ಶ್ರೀ ಉದ್ಭವ ಕಾಡು ಮಲ್ಲೇಶ್ವರ ಸ್ವಾಮಿ ದೇವಾಲಯ ಜೀಣೋರ್ದ್ಧಾರಗೊಂಡು ಉದ್ಘಾಟನೆ ಹಿನ್ನೆಲೆಯಲ್ಲಿ ಆವರಣದಲ್ಲಿ ಹೋಮ, ಹವನ, ಭಜನೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ದೇಗುಲ, ಗ್ರಾಮದ ಪ್ರಮುಖ ಬೀದಿಗಳನ್ನು ದೀಪಗಳಿಂದ ಅಲಂಕರಿಸಲಾಗಿತ್ತು. ಕಾಡುಮಲ್ಲೇಶ್ವರ ದೇವರಿಗೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಜಗಣ್ಣಯ್ಯ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ದೇವಾಲಯಗಳು ಭಕ್ತರ ಮನಸ್ಸನ್ನು ಸನ್ಮಾರ್ಗದತ್ತ ಕೊಂಡ್ಯೊಯುವ ಧಾರ್ಮಿಕ ಕೇಂದ್ರ. ಮನುಷ್ಯನಿಗೆ ಶಾಂತಿ, ನೆಮ್ಮದಿ ನೀಡಿ ಕಷ್ಟಗಳನ್ನು ನಿವಾರಿಸುವಲ್ಲಿ ಪ್ರಮುಖ ಸ್ಥಾನವಹಿಸುತ್ತವೆ. ಪ್ರತಿಯೊಬ್ಬರು ದುಡಿಮೆಯಲ್ಲಿ ಸ್ವಲ್ಪ ಪ್ರಮಾಣ ಹಣವನ್ನು ಸಮಾಜ ಮುಖಿ ಹಾಗೂ ಧಾರ್ಮಿಕ ಕಾರ್ಯಕ್ಕೆ ಮೀಸಲಿಟ್ಟರೇ ಭಗವಂತ ಕೃಪೆಗೆ ಪಾತ್ರರಾಗುತ್ತಾರೆ ಎಂದರು.
ಶಾಸಕ ಎನ್​. ಶ್ರೀನಿವಾಸ್​ ಮಾತನಾಡಿ, ಭಗವಂತ ಕೃಪೆಯಿಂದ ಉತ್ತಮ ಮಳೆ, ಬೆಳೆಯಾಗಲಿ. ಜತೆಗೆ ರಸ್ತೆ ಮತ್ತು ಸಮುದಾಯ ಭವನಕ್ಕೆ ಮುಂದಿನ ದಿನಗಳಲ್ಲಿ 50ಲಕ್ಷ ರೂ. ಅನುದಾನ ನೀಡುವ ಕಾರ್ಯ ಮಾಡಲಾಗುವುದು ಎಂದರು.
ದೇವಾಲಯ ಜೀಣೋರ್ದ್ಧಾರ ಸಮಿತಿ ಮುಖ್ಯಸ್ಥ ಎಂಬಿಟಿ ರಾಮಕೃಷ್ಣಪ್ಪ ಮಾತನಾಡಿ, ದೇವಾಲಯ ನಿಮಾರ್ಣಕ್ಕೆ ದೇವರೇ ಶಕ್ತಿ ತುಂಬಿ ಸುಸಜ್ಜಿತ ನೆಲೆಯನ್ನು ನಿಮಾರ್ಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದೇವಾಲಯ ಮತ್ತಷ್ಟು ಜೀಣೋರ್ದ್ಧಾರ ಹೆಚ್ಚಾಗಿ ಮಾಡಲಾಗುವುದು ಎಂದರು.
ವಿವಿಧ ಕಾರ್ಮಿಕ ಕಾರ್ಯ : ಭಾನುವಾರ ಸಂಜೆ ಧರ್ಮಧ್ವಜಾರೋಹಣ, ಗಂಗಾಪೂಜೆ, ಗೋಪೂಜೆ, ಗಣಪತಿ ಪೂಜೆ, ವಾಸ್ತುರಾಕ್ಷೋಘ್ನ ಹೋಮ, ಪುಣ್ಯಾಜ, ಶಿವನಾಂದ, ಪಂಚ ಕಳಶ, ನವಗ್ರಹ ಶಾಂತಿ ಸಹಿತ ಮಲ್ಲೇಶ್ವರ ಕಳಶಾರಾಧನೆ, ಗಣಪತಿ ಹೋಮ, ಶಾಂತಿ ಹೋಮ, ದಾನ್ತಾಧಿವಾಸ, ಪುಷ್ಪಾ ಹಾಗೂ ವಸ್ತ್ರಾದಿವಾಸ, ಶಯನವಾಸ, ಲಘು ಮಂಗಳಾರತಿ, ಸೋಮವಾರ ಸುಪ್ರಭಾತ, ವೇದಘೋಷ್ಯ, ಕಳಾವಾಹನೆ, ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ಮಿಲನ, ಮಹಾರುದ್ರಾಭಿಷೇಕ, ದಿಶಾ ಹೋಮ, ಕಳಾ ಹೋಮ, ಮಹಾಪೂರ್ಣಾಹುತಿ, ವಿಮಾನ ಗೋಪುರ, ಕಳಶ ಸ್ಥಾಪನೆ, ಕದಳೀಛೇದನ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿ ವಿವಿಧ ಧಾರ್ಮಿಕ ಕಾರ್ಯ ನಡೆಯಿತು.
ಗಣ್ಯರ ಭೇಟಿ : ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಜಗಣ್ಣಯ್ಯಮಠದ ಶ್ರೀ ಚನ್ನಬಸವ ಸ್ವಾಮೀಜಿ, ಶಾಸಕ ಎನ್​.ಶ್ರೀನಿವಾಸ್​, ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಎಂ.ವಿ.ನಾಗರಾಜು, ವಿಧಾನ ಪರಿಷತ್​ ಮಾಜಿ ಸದಸ್ಯ ಬಿಎಂಎಲ್​.ಕಾಂತರಾಜು ಇತರರು ದೇವರ ದರ್ಶನ ಪಡೆದುಕೊಂಡರು.
ಗ್ರಾಪಂ ಮಾಜಿ ಸದಸ್ಯ ಮಂಜುನಾಥಯ್ಯ, ಶಿವಶಂಕರ್​, ಗೋವಿಂದರಾಜು, ರವಿಶಂಕರ್​, ಗ್ರಾಮಸ್ಥರಾದ ಚನ್ನಪ್ಪ, ಗಂಗಮ್ಮ ನಾಗರಾಜ್​, ರವಿಕುಮಾರ್​, ಸಿದ್ದರಾಜು, ಯಂಜಪ್ಪ, ಗೋಪಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net