ಹಾಲಟ್ಟಿಯಲ್ಲಿ ಲಕ್ಷ್ಮೀದೇವಿ ಮಂದಿರ ಉದ್ಘಾಟನೆ

ದೇವಸ್ಥಾನ ಉದ್ಘಾಟನೆ ವೇಳೆ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ
ದೇವಸ್ಥಾನ ಉದ್ಘಾಟನೆ ವೇಳೆ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ
Published on

ಪ್ರಮುಖ ಮುಖ್ಯಾಂಶಗಳು

  • ಹಾಲಟ್ಟಿಯಲ್ಲಿ ಲಕ್ಷ್ಮೀದೇವಿ ದೇವಸ್ಥಾನ ಉದ್ಘಾಟನೆ
  • ಚಿಕ್ಕೋಡಿ ಪಟ್ಟಣದ ಹಾಲಟ್ಟಿ
  • ಸಂಪಾದನ ಸ್ವಾಮೀಜಿ ಉಪಸ್ಥಿತಿ

ಸಮಾಜಕ್ಕೆ ಸಂಸ್ಕಾರಯುತ ಕುಟುಂಬವೇ ಮೂಲಾಧಾರ
| ಚಿಂಚಣಿ ಮಠದ ಶಿವಪ್ರಸಾದ ದೇವರು ಅಭಿನುಡಿ | ದೇವಸ್ಥಾನ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸುವಲ್ಲಿ ತಾಯಿಯ ಪಾತ್ರ ಅತ್ಯಂತ ಹೆಚ್ಚು ಮಹತ್ವದ್ದಾಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಸಂಸ್ಕಾರಯುತ ಕುಟುಂಬವೇ ಮೂಲಾಧಾರ ಎಂದು ಚಿಂಚಣಿ ಮಠದ ಶಿವಪ್ರಸಾದ ದೇವರು ಹೇಳಿದರು.
ಪಟ್ಟಣದ ಹಾಲಟ್ಟಿಯಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಲಕ್ಷ್ಮಿ ದೇವಿಯ ದೇವಸ್ಥಾನ ಕಟ್ಟಡವನ್ನು ಈಚೆಗೆ ಅವರು ಉದ್ಘಾಟಿಸಿದರು. ಸ್ವರ್ಗ ಇರುವುದು ತಾಯಿಯ ಮಡಿಲಲ್ಲೇ, ಆದ್ದರಿಂದ ತಾಯಿಯು ಕುಟುಂಬದಲ್ಲಿ ಸಂಸ್ಕಾರ, ಧರ್ಮ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಂತೆ ಕರೆ ನೀಡಿ,ಸಮಾಜ ಸೇವಕ ವಿಶ್ವನಾಥ ಕಾಮಗೌಡರವರು ಸಮಾಜದ ಒಳಿತಿಗಾಗಿ ಕೈಗೊಂಡಿರುವ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಸಾನ್ನಿಧ್ಯ ವಹಿಸಿದ್ದ ಚರಮೂರ್ತಿಮಠದ ಸಂಪಾದನಾ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ, ಸಂಸ್ಕಾರ ಹಾಗೂ ಸೇವಾಭಾವದ ಮನೋಭಾವ ಅತ್ಯಂತ ಅವಶ್ಯಕವಾಗಿದೆ ಮತ್ತು ಸಮಾಜದ ಹಿತಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವವರನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಇದೇ ವೇಳೆ ಬಸವ ನಗರದ ನೂತನ ನಾಮಫಲಕ ಹಾಗೂ ಬಸವನಗರದಲ್ಲಿ ಹೊಸದಾಗಿ ನಿರ್ಮಾಣಗೊಂಡ ಉದ್ಯಾನವನದಲ್ಲಿ ಸಸಿ ನೆಡುವುದು, ಭಕ್ತರಿಗೆ ಮಹಾಪ್ರಸಾದ ವಿತರಣೆ.
ವಿಶ್ವನಾಥ ಕಾಮಗೌಡ, ಸಂಜಯ ಚನ್ನವರ, ಸಂದೀಪ ಮಾನೆ, ರಾಘವೇಂದ್ರ ಲಿಂಬಿಗಿಡದ, ವಿನಾಯಕ ಪೂಜಾರಿ, ಪ್ರಶಾಂತ ಕೇಸ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net