8ರಂದು ಟಿ.ಬಿ.ಕ್ರಾಸ್​ನಲ್ಲಿ ದೇಗುಲ ಲೋಕಾರ್ಪಣೆ

Temple dedication at T.B. Cross on the 8th
Temple dedication at T.B. Cross on the 8th
Published on
ತುರುವೇಕೆರೆ: ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್​ನಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ವಿನಾಯಕ ಮಾರುತಿ ದೇವಾಲಯದ ಉದ್ಘಾಟನೆ ಮೇ 8ರಂದು ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಎನ್​.ಲೋಕೇಶ್​.ತಿಳಿಸಿದರು.
ತಾಲೂಕಿನ ಸೊರವನಹಳ್ಳಿ ದೇವಾಲಯದ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶ್ರೀ ವಿನಾಯಕ, ಮಾರುತಿ ದೇವರ ವಿಗ್ರಹಗಳ ಪ್ರತಿಷ್ಠಾಪನೆ, ವಿಮಾನಗೋಪುರ ಕಳಸ ಸ್ಥಾಪನೆ ಮತ್ತು ಮಾರುತಿ ಸ್ವಾಮಿಯ 31 ಅಡಿ ಎತ್ತರದ ಪ್ರತಿಮೆಯ ಅನಾವರಣಾ ಕಾರ್ಯಕ್ರಮದ ಸಲುವಾಗಿ ಮೇ 7ರಂದು ಬೆಳಗ್ಗೆ ಧ್ವಜಾರೋಹಣ, ಮಹಾಗಣಪತಿ ಪ್ರಾರ್ಥನೆ, ಗಂಗಾಪೂಜೆ, ಹೋಮಗಳು, ಪುನ್ಯಾವಾಚನ, ಪೂರ್ಣಾಹುತಿ ನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.
8ರಂದು ಕುಂಭಾಭಿಷೇಕದ ದಿವ್ಯ ಸಾನ್ನಿದ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ವಹಿಸಲಿದ್ದಾರೆ. ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕಾರ್ಯಕ್ರಮಕ್ಕೆ ಕೇಂದ್ರದ ಉಕ್ಕು ಮತ್ತು ಬೃಹತ್​ ಕೈಗಾರಿಕಾ ಸಚಿವ ಎಚ್​.ಡಿ.ಕುಮಾರಸ್ವಾಮಿ, ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಜೆಡಿಎಸ್​ ಯುವ ಟಕದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಭಾಗವಹಿಸಿಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಂ.ಟಿ.ಕೃಷ್ಣಪ್ಪ ವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಿತಿಯ ಉಪಾಧ್ಯಕ್ಷ ಕೆ.ರಘು, ಹನುಮಂತರಾಜು, ಕಾರ್ಯದರ್ಶಿ ಜಿ.ಡಿ.ಗಂಗಾಧರಯ್ಯ, ಖಜಾಂಚಿ ಎಸ್​.ಎನ್​.ಚಂದ್ರಶೇಖರಯ್ಯ, ಸದಸ್ಯರಾದ ನಂಜುಂಡಯ್ಯ, ವೈ.ಮಂಜುನಾಥ್​, ಪಿ.ನಾಗೇಶ್​, ಸ್ವಾಮಿ, ಎಂ.ಕೆ.ಶಿವಣ್ಣ, ಕೆ.ಎಲ್​.ಲೋಕೇಶ್​, ಎಸ್​.ಪಿ.ಶಿವಣ್ಣ, ಎಸ್​.ಎನ್​.ರಾಮಚಂದ್ರ ಮತ್ತಿತರರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net