ಕಾರ್ಯಕ್ರಮದಲ್ಲಿ ಮನೆ ತೋಟ, ಅಪಾರ್ಟ್‌ಮೆಂಟ್, ಕಾರ್ಪೊರೇಟ್ ವಲಯ, ಕೈಗಾರಿಕಾ ವಲಯ, ಶಿಕ್ಷಣ ಸಂಸ್ಥೆಗಳು ಸೇರಿ ವಿವಿಧ ವಲಯಗಳಲ್ಲಿ ಸಸ್ಯತೋಟ ಬೆಳೆಸಿದವರನ್ನು ಗುರುತಿಸಿ ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳ ವಿಭಾಗದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಕುರಿತಾದ ಅತ್ಯುತ್ತಮ ಕಥೆ, ಲೇಖನ, ಪಾತ್ರ ಹಾಗೂ ಸನ್ನಿವೇಶ ಆಧಾರಿತ ಚಿತ್ರಕಲೆಗೆ ಬಹುಮಾನ ನೀಡಲಾಯಿತು. ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ.ಜಗದೀಶ್, ಉಪನಿರ್ದೇಶಕ ಬಾಲಕೃಷ್ಣ ಇತರರ ಇದ್ದರು.