ಕಲಬುರಗಿಯಲ್ಲಿ ಏಪ್ರಿಲ್ 18 ರಂದು ತಾಂತ್ರಿಕ ಕೌಶಲ ಸ್ಪರ್ಧೆ

,
,
Published on
ಕಲಬುರಗಿ : -ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ಹಾಗೂ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಇದೇ ಏಪ್ರಿಲ್ 18 ರಂದು ಬೆಳಿಗ್ಗೆ 9.30 ಗಂಟೆಗೆ ಕಲಬುರಗಿ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ “ತಾಂತ್ರಿಕ ಕೌಶಲ್ಯ ಸ್ಪರ್ಧೆ/ ಪ್ರದರ್ಶನ-2026”ನ್ನು ಹಮ್ಮಿಕೊಳ್ಳಲಾಗಿದೆ.
ಗುಲ್ಬರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ಅಧ್ಯಕ್ಷರಾದ ಪ್ರವೀಣ ಹರವಾಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಖ್ಯಾತ ಉದ್ದಿಮೆದಾರ ಅರುಣಕುಮಾರ ಲೋಯಾ ಮುಖ್ಯ ಅತಿಥಿಗಳಾಗಿ, ಕಲಬುರಗಿ ವಿಭಾಗೀಯ ಕಚೇರಿಯ ಜಂಟಿ ನಿರ್ದೇಶಕಿ ಮಂಜುಳಾ ಎಸ್, ದಾವಣಗೆರೆ ಐ.ಟಿ.ಓ.ಟಿ. ಜಂಟಿ ನಿರ್ದೇಶಕಿ ರವಿಂದ್ರನಾಥ ಎಸ್.ಬಾಳ್ಳಿ, ಕಲಬುರಗಿ ಕೆ.ಜಿ.ಟಿ.ಟಿ.ಐ. ನಿರ್ದೇಶಕ ರಾಜೇಶ ಬಾವಗಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಲಬುರಗಿ (ಪುರುಷ) ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಮುರಳೀಧರ್ ರತ್ನಗಿರಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು. ಕಲಬುರಗಿ (ಪುರುಷ) ಕೈಗಾರಿಕಾ ತರಬೇತಿ ಸಂಸ್ಥೆಯ ಆಡಳಿತಾಧಿಕಾರಿ ಸುರೇಶ ವಗ್ಗೆ ಮತ್ತು ಕಲಬುರಗಿ ವಿ.ಇ.ಎಸ್. ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಶಕೀಲ ಅನ್ಸಾರಿ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ತಾಂತ್ರಿಕ ಕೌಶಲ್ಯ ಸ್ಪರ್ಧೆ ನಿರ್ಣಾಯಕರಾಗಿ ಕಲಬುರಗಿ ಎನ್.ವಿ. ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗದ ಉಪನ್ಯಾಸಕ ಬಸವರಾಜ ಜಿ. ಹೂಗಾರ, ಎಲೆಕ್ಟ್ರಾನಿಕ್ಸ್ ಆಂಡ್ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಸುನೀಲ ಕುಮಾರ್ ಎಸ್. ಗಂಗಾಣಿ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ನಾಗರಾಜ ಅಳವಂಡಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕ ಶ್ರೀಶೈಲ್ ಪಾಟೀಲ ಹಾಗೂ ಸಿವಿಲ್ ವಿಭಾಗದ ಮುಖ್ಯಸ್ಥೆ ಗೀತಾ ರಾಠೋಡ ಅವರು ಉಪಸ್ಥಿತರಿರುವರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net