ಚಿಂತಾಮಣಿ: ತಾಲೂಕಿನಲ್ಲಿ 2 ದಿನಗಳಿಂದ ಸುರಿಯುತ್ತಿರುವ ಮಳೆ, ಗಾಳಿಗೆ ಬಾಳೆ ಬೆಳೆಗಾರರು ಕಣ್ಣೀರು ಹಾಕುವಂತಾಗಿದೆ. ಕೊಯ್ಲಿಗೆ ಬಂದಿದ್ದ ಬಾಳೆ ತೋಟಗಳು ನೆಲಸಮವಾಗಿದೆ..ಗೊನೆ ಬಿಟ್ಟು ಹಣ್ಣಾಗುವ ಹಂತದಲ್ಲಿದ್ದ ಗಿಡಗಳೇ ಹೆಚ್ಚು ಹಾನಿಗೀಡಾಗಿವೆ. ಸಾಲ ಮಾಡಿ ಬೆಳೆ ಬೆಳೆದಿದ್ದೆವು. ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಕೊಂಡೊಯ್ಯಬೇಕು ಎನ್ನುವಷ್ಟರಲ್ಲಿ ಪ್ರಕೃತಿ ಮುನಿಸಿಕೊಂಡಿದೆ ಎಂದು ಸಂಕಷ್ಟಕ್ಕಿಡಾದ ರೈತ ನೋವು ತೋಡಿಕೊಂಡಿದ್ದಾರೆ.