ವಿದ್ಯಾರ್ಥಿಗಳ ಭವಿಷ್ಯ ತಿದ್ದಿದಾಗ ಮಾತ್ರ ಶಿಕ್ಷಕ ವೃತ್ತಿಗೆ ಗೌರವ Teaching profession

ವಿದ್ಯಾರ್ಥಿಗಳ ಭವಿಷ್ಯ ತಿದ್ದಿದಾಗ ಮಾತ್ರ ಶಿಕ್ಷಕ ವೃತ್ತಿಗೆ ಗೌರವ Teaching profession
ವಿದ್ಯಾರ್ಥಿಗಳ ಭವಿಷ್ಯ ತಿದ್ದಿದಾಗ ಮಾತ್ರ ಶಿಕ್ಷಕ ವೃತ್ತಿಗೆ ಗೌರವ Teaching profession
Published on
ಶ್ರೀನಿವಾಸಪುರ: ಜಿ.ಕೃಷ್ಣಪ್ಪ ಅವರು ಶಿಕ್ಷಕರ ಸೇವೆಯಿಂದ ವಯೋನಿವೃತ್ತಿ ಪಡೆಯುತ್ತಿದ್ದು, ಇವರ ಮುಂದಿನ ಜೀವನ ಸುಖ ಶಾಂತಿಯಿಂದ ಇರಲಿ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಬಯ್ಯರೆಡ್ಡಿ ಹಾರೈಸಿದರು. Teaching profession
ತಾಲೂಕಿನ ಅವಗಾನಪಲ್ಲಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಜಿ.ಕೃಷ್ಣಪ್ಪ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಾಮುಖ್ಯವಾಗಿದೆ. ಶಿಕ್ಷಕರ ವೃತ್ತಿಯನ್ನು ವಿದ್ಯಾರ್ಥಿಗಳ ಸುಂದರ ಭವಿಷ್ಯ ತಿದ್ದಲು ಮುಡಿಪಾಗಿಟ್ಟಾಗ ಸಮಾಜದಲ್ಲಿ ಗೌರವ ಲಭಿಸುತ್ತದೆ. ಈ ಸಾಲಿನಲ್ಲಿ ಜಿ.ಕೃಷ್ಣಪ್ಪ ಒಬ್ಬರಾಗಿದ್ದಾರೆ ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಆರ್​.ಎಸ್​. ರೆಡ್ಡಪ್ಪ, ಸಂಘಟನಾ ಕಾರ್ಯದರ್ಶಿ ವೆಂಕಟರಾಮರೆಡ್ಡಿ, ವೇಣುಗೋಪಾಲ್​ರೆಡ್ಡಿ, ಗ್ರಂಥಪಾಲಕ ಗೋವಿಂದಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net