ಶಿಕ್ಷಕ ವೃತ್ತಿ ರಾಷ್ಟ್ರ ನಿರ್ಮಾಣದ ಮಹತ್ಕಾರ್ಯ

ಅಳವಂಡಿ ಗ್ರಾಮದಲ್ಲಿ ಶಿಕ್ಷಣಾಭಿಮಾನಿಗಳು ಹಾಗೂ ಹಳೆಯ ವಿದ್ಯಾರ್ಥಿ ಬಳಗ ಹಮ್ಮಿಕೊಂಡಿದ್ದ ನಿವೃತ್ತ ಶಿಕ್ಷಕ ರುದ್ರಪ್ಪ ಹಂಚಿನಾಳ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮರುಳಾರಾದ್ಯ ಶಿವಾಚಾರ್ಯರು ಮಾತನಾಡಿದರು. ಪ್ರಮುಖರಾದ ಪ್ರಕಾಶಸ್ವಾಮಿ ಇನಾಮದಾರ, ಅರವಿಂದಪ್ಪ ಬಿರಾದಾರ, ಬಸವರಡ್ಡಪ್ಪ ಹಳ್ಳಿಕೇರಿ, ದೇವಪ್ಪ ಕಟ್ಟಿಮನಿ, ವೆಂಕರೆಡ್ಡಿ ಇಮ್ಮಡಿ, ಸುರೇಶ ಅರಕೇರಿ, ನಜರುದ್ದೀನ್, ಬಸವರಾಜ, ರಮೇಶ, ನೀಲಪ್ಪ ಇದ್ದರು.

Published on
ಅಳವಂಡಿ: ಶಿಕ್ಷಕ ವೃತ್ತಿ ಕೇವಲ ಜೀವನೋಪಾಯದ ಮಾರ್ಗವಲ್ಲ, ಅದೊಂದು ರಾಷ್ಟ್ರ ನಿರ್ಮಾಣದ ಮಹತ್ಕಾರ್ಯ ಎಂದು ಮರುಳಾರಾದ್ಯ ಶಿವಾಚಾರ್ಯರು ತಿಳಿಸಿದರು.
ಗ್ರಾಮದಲ್ಲಿ ಪ್ರಮುಖರು, ಶಿಕ್ಷಣಾಭಿಮಾನಿಗಳು ಹಾಗೂ ಹಳೆಯ ವಿದ್ಯಾರ್ಥಿ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ ನಿವೃತ್ತ ಶಿಕ್ಷಕ ರುದ್ರಪ್ಪ ಹಂಚಿನಾಳ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನ ನೀಡಿ, ನಿವೃತ್ತಿ ಎಂಬುದು ಕೇವಲ ಹುದ್ದೆಗೆ ಮಾತ್ರ. ಸಮಾಜಕ್ಕೆ ಅವರ ಮಾರ್ಗದರ್ಶನ ನಿರಂತರವಾಗಿರಬೇಕು ಎಂದರು.  
ಸಿಆರ್‌ಪಿ ವಿಜಯಕುಮಾರ ಟಿಕಾರೆ ಮಾತನಾಡಿ, ಶಿಕ್ಷಕ ಹಂಚಿನಾಳ ಅವರು ಕೇವಲ ಪಠ್ಯವನ್ನಷ್ಟೇ ಬೋಧಿಸದೆ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದ್ದಾರೆ ಎಂದರು. 
ನಿವೃತ್ತ ಶಿಕ್ಷಕ ರುದ್ರಪ್ಪ ಹಂಚಿನಾಳ ದಂಪತಿಗೆ ಸನ್ಮಾನಿಸಲಾಯಿತು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net