ಫಲಿತಾಂಶ ವೃದ್ಧಿಗೆ ಶಿಕ್ಷಕರು ಶ್ರಮ ಹಾಕಲಿ

ಯಾದಗಿರಿಯಲ್ಲಿ ಭಾನುವಾರ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಆಯೋಜಿಸಿದ್ದ ವಿಶೇಷ ಉಪನ್ಯಾಸ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಸಕ ಚನ್ನಾರಡ್ಡಿ ಪಾಟೀಲ್ ಉದ್ಘಾಟಿಸಿದರು. ತಿಮ್ಮಯ್ಯ ಪುರ್ಲೆ, ನಿಂಗೇಗೌಡ ಎ.ಎಚ್., ಡಾ.ರವೀಂದ್ರನಾಥ ಹೊಸಮನಿ ಇತರರಿದ್ದರು.
ಯಾದಗಿರಿಯಲ್ಲಿ ಭಾನುವಾರ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಆಯೋಜಿಸಿದ್ದ ವಿಶೇಷ ಉಪನ್ಯಾಸ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಸಕ ಚನ್ನಾರಡ್ಡಿ ಪಾಟೀಲ್ ಉದ್ಘಾಟಿಸಿದರು. ತಿಮ್ಮಯ್ಯ ಪುರ್ಲೆ, ನಿಂಗೇಗೌಡ ಎ.ಎಚ್., ಡಾ.ರವೀಂದ್ರನಾಥ ಹೊಸಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್ ಸಲಹೆ
  • ಪಿಯು ಉಪನ್ಯಾಸಕರ ಸಂಘದಿಂದ ವಿಶೇಷ ಉಪನ್ಯಾಸ
ಯಾದಗಿರಿ
ಎಸ್ಸೆಸ್ಸೆಲ್ಸಿ ಸೇರಿ ಪದವಿಪೂರ್ವ, ಪದವಿ ಪರೀಕ್ಷೆ ಫಲಿತಾಂಶದಲ್ಲಿ ಏರಿಕೆ ಕಾಣುವ ನಿಟ್ಟಿನಲ್ಲಿ ಶಿಕ್ಷಕರು, ಉಪನ್ಯಾಸಕರು ಕಾಳಜಿಪೂರ್ವಕವಾಗಿ ಬೋಧನೆ ಮಾಡಬೇಕು. ವಿಶೇಷ ತರಗತಿ ತೆಗೆದುಕೊಂಡು ಗಿರಿ ಜಿಲ್ಲೆ ಉನ್ನತ ಸ್ಥಾನ ಪಡೆಯುವ ನಿಟ್ಟಿನಲ್ಲಿ ಶ್ರಮ ವಹಿಸಬೇಕೆಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಭಾನುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ, ಅಭಿನಂದನಾ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉಪನ್ಯಾಸಕರ ಬೇಡಿಕೆಗಳ ಈಡೇರಿಕೆ ಸಂಬಂಧ ಅಽವೇಶನದಲ್ಲಿ ಧ್ವನಿ ಎತ್ತುವುದರ ಜತೆ ಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತನಾಡಿ ಸೂಕ್ತ ನಿರ್ಧಾರ ಕೈಗೊಳ್ಳಲು ಮನವಿ ಮಾಡುವುದಾಗಿ ತಿಳಿಸಿದರು.
ಶಿಕ್ಷಕರೇ ನಿಜವಾದ ಶಿಲ್ಪಿಗಳು. ನೀವು ಮನಸ್ಸು ಮಾಡಿದರೆ ಅತಿ ದಡ್ಡ ವಿದ್ಯಾರ್ಥಿಯೂ ಗಣನೀಯ ಸಾಧನೆ ಮಾಡಬಲ್ಲ. ಈ ನಿಟ್ಟಿನಲ್ಲಿ ತಮ್ಮ ಕೆಲಸ ಸಾಗಲಿ ಎಂದು ಸಲಹೆ ನೀಡಿದರು.
ಸಂಘದ ಗೌರವಾಧ್ಯಕ್ಷ ತಿಮ್ಮಯ್ಯ ಪುರ್ಲೆ, ರಾಜ್ಯಾಧ್ಯಕ್ಷ ನಿಂಗೇಗೌಡ ಎ.ಎಚ್. ಮಾತನಾಡಿ, ಉಪನ್ಯಾಸಕರ ಬೇಡಿಕೆ ಈಡೇರಿಕೆಗಾಗಿ ಸಂಘ ಸದಾ ಹೋರಾಟಕ್ಕೆ ಸಿದ್ಧವಿದೆ. ಪ್ರತಿ ಉಪನ್ಯಾಸಕ ಬೆನ್ನಿಗೆ ನಿಂತು ಕೆಲಸ ಮಾಡುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಸರ್ಕಾರ ಏನೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಂಬAಽತರೊAದಿಗೆ ಚರ್ಚಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಡಾ.ರವೀಂದ್ರನಾಥ ಎಸ್.ಹೊಸ್ಮನಿ ಮಾತನಾಡಿ, ಜಿಲ್ಲೆಯಲ್ಲಿ ಸಂಘದ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಬೆಂಗಳೂರಿನ ಅಕ್ಕ ಅಕಾಡೆಮಿ ಮುಖ್ಯಸ್ಥ ಡಾ.ಶಿವಕುಮಾರ ವಿಶೇಷ ಉಪನ್ಯಾಸ ನೀಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುದೀಪ್ ಟಿ.ಸಿ., ಪಿಯು ಕಾಲೇಜು ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ರುದ್ರಗೌಡ ಮಾಲಿಪಾಟೀಲ್, ಪ್ರಧಾನ ಕಾರ್ಯದರ್ಶಿ ಡಾ.ಶರಣಗೌಡ ಪಾಟೀಲ್, ಕಾರ್ಯದರ್ಶಿ ಭೀಮಪ್ಪ ಎಚ್.ಗೊಲ್ಲರ, ಕಲಬುರಗಿ ಜಿಲ್ಲಾಧ್ಯಕ್ಷ ಎನ್.ಬಿ. ರಂಗೋಲಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಹುಡೇದ, ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಕೆಂಭಾವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಅರಳಹಳ್ಳಿ, ಸಾಬಯ್ಯ ಕವಲ್ದಾರ, ಬಿ.ಆರ್. ಅಂಚೆಸೂಗೂರು, ಮೋನಯ್ಯ ಗೋನಾಲ, ದೇವೇಂದ್ರಪ್ಪ ಚಂಡ್ರಿಕಿ, ಲಕ್ಷ್ಮಣ ರಾಠೋಡ್, ರವೀಂದ್ರ ಗುತ್ತೇದಾರ್, ಸಾಬಯ್ಯ ಕವಲ್ದಾರ, ಭೀಮಾಶಂಕರ ದೊಡ್ಮನಿ ಇತರರಿದ್ದರು.

ಪಾಲಿಸಿ ಮೇಕರ್‌ಗಳಾಗಿ

ವಿದ್ಯಾರ್ಥಿ ಮತ್ತು ಸಮಾಜ ವಿಷಯ ಕುರಿತು ಬೆಂಗಳೂರಿನ ಅಕ್ಕ ಅಕಾಡೆಮಿ ಮುಖ್ಯಸ್ಥ ಡಾ.ಶಿವಕುಮಾರ ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ಭಾಷಾ ಸಾಹಿತ್ಯದ ಮೇಲೆ ಪ್ರಭುತ್ವ ಸಾಽಸಬೇಕು. ಪ್ರತಿನಿತ್ಯ ಸತತ ಆರು ತಾಸು ಅಭ್ಯಾಸ ಮಾಡಬೇಕು. ಕಾನೂನುಗಳ ಪರಿಚಯ ಮಾಡಿಕೊಳ್ಳಬೇಕು. ಹತ್ತನೇ ತರಗತಿಯಲ್ಲಿ ಇದ್ದಾಗಲೇ ಮುಂದಿನ ಗುರಿ ಇಟ್ಟುಕೊಂಡು ಅಗತ್ಯ ತಯಾರಿಯೊಂದಿಗೆ ಕಠಿಣ ಶ್ರಮ ಹಾಕಬೇಕು. ವಿಶೇಷವಾಗಿ ಹೆಣ್ಮಕ್ಕಳು ಪದವಿ ತನಕ ಓದಿ ಮುಂದೆ ಅಭ್ಯಾಸ ನಿಲ್ಲಿಸುವುದೇ ಜಾಸ್ತಿ ಕಾಣಿಸುತ್ತದೆ. ಹಾಗೆ ಮಾಡದೆ ಉನ್ನತ ಶಿಕ್ಷಣ ಪಡೆದು ಪಾಲಿಸಿ ಮೇಕರ್‌ಗಳಾಗಬೇಕು ಎಂದು ಸಲಹೆ ನೀಡಿದರು.

೯೦ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

೨೦೨೬ರ ದ್ವಿತೀಯ ಪಿಯುಸಿ ಪರೀಕ್ಷೆ-೧ರ ಕಲಾ, ವಾಣಿಜ್ಯ ಮತ್ತು ವಿಜ್ಝಾನ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ರ‍್ಯಾಂಕ್ ಪಡೆದ ೯೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ೨೦೨೬-೩೧ರ ಅವಽಗೆ ಆಯ್ಕೆಯಾದ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ವೈಯಕ್ತಿಕವಾಗಿ ಶೇ.೧೦೦ ಫಲಿತಾಂಶ ದಾಖಲಿಸುವಲ್ಲಿ ಯಶಸ್ವಿಯಾದ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net