ಮಂಗಳವಾರ ಬೆಳಗ್ಗೆ ಚಾಮರಾಜನಗರದಿಂದ ಶಾಲೆಗಳಿಗೆ ಒಟ್ಟಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ತಾಳವಾಡಿ ಬಳಿಯ ರಸ್ತೆಯಲ್ಲಿ ಕಾಡಾನೆ ಕಾಣಿಸಿದೆ. ದೂರದಲ್ಲೇ ಬೈಕ್ ನಿಲ್ಲಿಸಿ ಆನೆ ಕಾಡಿನೊಳಗೆ ಹೋಗುವುದನ್ನೇ ಕಾಯ್ದಿದ್ದಾರೆ. ಆನೆ ಕಾಡಿನೊಳಗೆ ಹೋಗಿದೆ. ಆದರೆ ಸ್ವಲ್ಪ ಸಮಯದ ನಂತರ ಶಿಕ್ಷಕರು ನಿಂತಿದ್ದ ಜಾಗಕ್ಕೆ ಬಂದು ದಾಳಿ ಮಾಡಿದೆ. ಬೈಕ್ ಬಿಟ್ಟು ಓಡಿ ಹೋಗಿ ಶಿಕ್ಷಕರು ಜೀವ ಉಳಿಸಿಕೊಂಡಿದ್ದಾರೆ. ಬೈಕ್ ಜಖಂಗೊಳಿಸಿದ ಆನೆ ನಂತರ ಸ್ಥಳದಿಂದ ತೆರಳಿದೆ.