ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ: ಶಿಕ್ಷಕ ಅಮಾನತು
ಚಿಕ್ಕೋಡಿ: ತಾಲ್ಲೂಕಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆ, ಕನ್ನಡ ಶಿಕ್ಷಕ ಶ್ರೀಶೈಲ ಕುಂಬಾರ ಎಂಬಾತನಿಗೆ ಪಾಲಕರು ಧರ್ಮದೇಟು ನೀಡಿರುವ ಘಟನೆ ಮಂಗಳವಾರ ನಡೆದಿದೆ.
ಶಾಲೆಯ ಐದಕ್ಕೂ ಅಧಿಕ ವಿದ್ಯಾರ್ಥಿಗಳೊಂದಿಗೆ ಕನ್ನಡ ಶಿಕ್ಷಕ ಶ್ರೀಶೈಲ ಕುಂಬಾರ ಅಸಭ್ಯವಾಗಿ ವರ್ತಿಸಿ,ಕಿರುಕುಳ ನೀಡಿದ್ದಾನೆ ಎಂದ ಪಾಲಕರು ಆರೋಪಿಸಿ,ಆಕ್ರೋಶಗೊಂಡು ಶಾಲೆಗೆ ನುಗ್ಗಿ ಶಿಕ್ಷಕನನ್ನು ಥಳಿಸಿದ್ದಾರೆ. ವಿಷಯ ತಿಳಿಯಬೇಕಾದ ಸ್ಥಳಕ್ಕೆ ಚಿಕ್ಕೋಡಿ ಪೊಲೀಸ್‌ರು ಆಗಮಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿ ಆರೋಪಿತ ಶಿಕ್ಷಕನನ್ನು ಬಂಧಿಸಲಾಗಿದೆ.
ಸ್ಥಳಕ್ಕೆ ಆಗಮಿಸಿದ ಚಿಕ್ಕೋಡಿ ಡಿಡಿಪಿಐ ಸಿತಾರಾಮು ಆರ್.ಎಸ್ ಮಾತನಾಡಿ ಮಕ್ಕಳೊಂದಿಗೆ ಶಿಕ್ಷಕರು ಸರಿಯಾಗಿ ವರ್ತಿಸಬೇಕು. . ಕರ್ತವ್ಯಲೋಪ ಅಸಭ್ಯ ವರ್ತನೆ ತೋರಿದ ಆರೋಪಿ ಶಿಕ್ಷಕನನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ' ಎಂದು ತಿಳಿಸಿದ್ದಾರೆ
ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.