ವಿದ್ಯಾರ್ಥಿನಿ ಮೇಲೆ ಟೀಚರ್​​ ಹಲ್ಲೆ ಆರೋಪ: ಕೋಲಿನಿಂದ ಬಾಸುಂಡೆ ಬರುವಂತೆ ಹೊಡೆದಿರುವ ಗಣಿತ ಶಿಕ್ಷಕಿ; ಪಾಲಕರಿಂದ ಪೊಲೀಸರಿಗೆ ದೂರು! Teacher Assaults Student

ವಿದ್ಯಾರ್ಥಿನಿ ಮೇಲೆ ಗಣಿತ ಶಿಕ್ಷಕಿ ಕೋಲಿನಿಂದ ಹಲ್ಲೆ
ವಿದ್ಯಾರ್ಥಿನಿ ಮೇಲೆ ಗಣಿತ ಶಿಕ್ಷಕಿ ಕೋಲಿನಿಂದ ಹಲ್ಲೆ
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿನಿ ಮೇಲೆ ಗಣಿತ ಶಿಕ್ಷಕಿ ಕೋಲಿನಿಂದ ಹಲ್ಲೆ
  • ಬಾಸುಂಡೆ ಬರುವಂತೆ ಹೊಡೆದ ಗಂಭೀರ ಆರೋಪ
  • ಆಕ್ರೋಶಗೊಂಡ ಪಾಲಕರಿಂದ ಪೊಲೀಸರಲ್ಲಿ ದೂರು ದಾಖಲು
ಬೆಂಗಳೂರು: ಒಂಭತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಗಣಿತ ಶಿಕ್ಷಕರೊಬ್ಬರು ಹಲ್ಲೆ (Teacher Assaults Student) ನಡೆಸಿದ ಹಿನ್ನಲೆ ಪ್ರಕರಣ ದಾಖಲಾಗಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.  

ಎಲ್.ಆರ್. ಬಂಡೆ ಬಳಿಯ ಓಕ್ವುಡ್ ಇಂರ್ಟನ್ಯಾಷನಲ್​ ಶಾಲೆಯ ವಿದ್ಯಾರ್ಥಿನಿ ಮೇಲೆ ಶಬಿಷ್ಟಾ ಎಂಬ ಶಿಕ್ಷಕಿ ಹಲ್ಲೆ ನಡೆಸಿದ್ದು, ಪಾಲಕರು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾಗಿ ತಿಳಿದು ಬಂದಿದೆ. 

ಪಾಲಕರು ಸಲ್ಲಿಸಿರುವ ದೂರಿನ ಪ್ರಕಾರ, ಶಿಕ್ಷಕಿ ಕಟ್ಟಿಗೆ ಕೋಲಿನಿಂದ ವಿದ್ಯಾರ್ಥಿಯ ಕುತ್ತಿಗೆ, ತೊಡೆ, ಕೈ ಹಾಗೂ ಹಿಂಬದಿಗೆ ಬಲವಾಗಿ ಹೊಡೆದಿದ್ದು, ಬಿದ್ದಿರುವ ಏಟಿನ ಗಾಯದ ಗುರುತು ಕೂಡ ಸ್ಪಷ್ಟವಾಗಿ ಕಾಣುತ್ತಿದೆ ಎಂದು ನಮೂದಿಸಲಾಗಿದೆ.

ಶಾಲಾ ಆಡಳಿತ ವಿಫಲ!

ವಿದ್ಯಾರ್ಥಿನಿ ಶಾಲೆಯಲ್ಲಿ ನಡೆದ ಈ ಘಟನೆ ಬಗ್ಗೆ ಮನೆಯಲ್ಲಿ ತಿಳಿಸಿದಾಗ, ಪಾಲಕರು ನೇರವಾಗಿ ಶಾಲೆಯ ಮುಖ್ಯೋಪಾದ್ಯಾಯರಿಗೆ ಹಾಗೂ ಶಾಲೆಯ ಆಡಳಿತ ಮಂಡಳಿಯಲ್ಲಿ ದೂರನ್ನು ಸಲ್ಲಿಸಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿಯಿಂದ, ಆರೋಪಿತ ಶಿಕ್ಷಕಿಯ ಮೇಲೆ ಯಾವುದೇ ಕ್ರಮ ಜಾರಿಯಾಗದ ಹಿನ್ನಲೆ, ಪೊಲೀಸರಲ್ಲಿ ದೂರನ್ನು ಸಲ್ಲಿಸಿದ್ದಾಗಿ ವಿದ್ಯಾರ್ಥಿನಿಯ ಪಾಲಕರು ತಿಳಿಸಿದ್ದಾರೆ.

ಪೊಲೀಸರಿಂದ ತನಿಖೆ ಚುರುಕು!

ಶಾಲಾ ಆಡಳಿತದಿಂದ ಪರಿಹಾರ ದೊರೆಯದ ಹಿನ್ನಲೆ ಪಾಲಕರು ಡಿಜೆ ಹಳ್ಳಿ ಪೊಲೀಸ್​ ಠಾಣೆಯಲ್ಲಿ ಶಿಕ್ಷಕಿಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಡಿಜೆ ಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದು, ಕೆಲವೇ ದಿನಗಳಲ್ಲಿ ಶಿಕ್ಷಕಿಯನ್ನು ಹಾಗೂ ಶಾಲಾ ಆಡಳಿತವನ್ನು ವಿಚಾರಣೆಗೆ ಗುರಿಮಾಡಲಿದ್ದು, ಆದಷ್ಟು ಬೇಗ ಈ ಪ್ರಕರಣವನ್ನು ಇತ್ಯರ್ಥ ಮಾಡುವುದಾಗಿ ತಿಳಿಸಿದ್ದಾರೆ, (ಏಜನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net