ಅನ್ಯ ಭಾಷಿಕರಿಗೂ ಕನ್ನಡ ಭಾಷೆಯನ್ನು ಕಲಿಸಿ

ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಹರಳಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಿ ಗೌರವಿಸಲಾಯಿತು. ವಿಜಯ್‌ಎಸ್.ಗೌಡ, ಕೀಳಘಟ್ಟ ನಂಜುಂಡಯ್ಯ, ಚಿಕ್ಕೋನಹಳ್ಳಿ ತಮ್ಮಯ್ಯ, ಹರಳಕೆರೆ ಚಂದ್ರು, ಬಿಳಿಯಪ್ಪ ಇದ್ದರು.
ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಹರಳಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಿ ಗೌರವಿಸಲಾಯಿತು. ವಿಜಯ್‌ಎಸ್.ಗೌಡ, ಕೀಳಘಟ್ಟ ನಂಜುಂಡಯ್ಯ, ಚಿಕ್ಕೋನಹಳ್ಳಿ ತಮ್ಮಯ್ಯ, ಹರಳಕೆರೆ ಚಂದ್ರು, ಬಿಳಿಯಪ್ಪ ಇದ್ದರು.
Published on
ಮದ್ದೂರು: ಕನ್ನಡ ಭಾಷೆಯನ್ನು ಕೇವಲ ರಾಜ್ಯೋತ್ಸವಕಷ್ಟೇ ಸೀಮಿತಗೊಳಿಸದೆ ನಿತ್ಯೋತ್ಸವವನ್ನಾಗಿ ಆಚರಿಸುವ ಮೂಲಕ ಪ್ರತಿಯೊಬ್ಬರೂ ಭಾಷಾಭಿಮಾನವನ್ನು ಮೈಗೂಡಿಸಿಕೊಂಡು ಅನ್ಯ ಭಾಷಿಕರಿಗೂ ಕನ್ನಡ ಭಾಷೆಯನ್ನು ಕಲಿಸುವಂತಹ ಕೆಲಸವಾಗಬೇಕೆಂದು ತಗ್ಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ್‌ಎಸ್.ಗೌಡ ತಿಳಿಸಿದರು.
ತಾಲೂಕಿನ ಕೊಪ್ಪ ಹೋಬಳಿಯ ಹರಳಕೆರೆ ಗ್ರಾಮದಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ, ಕನಕ ಜಯಂತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದ್ದು ಜತೆಗೆ ತಮ್ಮದೇ ಆದ ಐತಿಹ್ಯ ಹೊಂದಿರುವ ಭಾಷೆಯನ್ನು ಪ್ರತಿಯೊಬ್ಬರೂ ಗೌರವಿಸಿ ಪ್ರೀತಿಸುವ ಜತೆಗೆ ಭಾಷಾಭಿಮಾನವನ್ನು ರೂಢಿಸಿಕೊಂಡು ಇತರರಿಗೂ ಭಾಷೆಯ ಸಂಸ್ಕೃತಿ, ಸಾಹಿತ್ಯ, ಪರಂಪರೆ ಕಲೆಯನ್ನು ಪರಿಚಯಿಸುವ ಕೆಲಸವಾಗಬೇಕೆಂದರು.
ಇತ್ತೀಚಿನ ದಿನಗಳಲ್ಲಿ ಅನ್ಯ ಭಾಷಿಕರ ಜತೆಗೂಡಿ ಭಾಷೆಯನ್ನು ನಿರ್ಲಕ್ಷಿಸುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು, ನಮ್ಮ ಮಾತೃ ಭಾಷೆ ಕನ್ನಡವನ್ನು ಗೌರವಿಸುವ ಮೂಲಕ ಅನ್ಯ ಭಾಷಿಕರಿಗೂ ಕನ್ನಡವನ್ನು ಕಲಿಸುವಂತಹ ಕೆಲಸವಾಗಬೇಕಿದ್ದು ಹಲವಾರು ಮಹಾನ್ ಕವಿಗಳು ಭಾಷೆ, ಸಂಸ್ಕೃತಿ, ಕಲೆಯನ್ನಾಧರಿಸಿಕೊಂಡು ಹಲವಾರು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಉದಾಹರಣೆಗಳಿವೆ ಎಂದರು.
ಕರವೇ ತಾಲೂಕು ಅಧ್ಯಕ್ಷ ಹರಳಕೆರೆ ಚಂದ್ರು ಮಾತನಾಡಿ, ಕೊಪ್ಪ ಹೋಬಳಿ ಮಟ್ಟದ ಗ್ರಾಮದಲ್ಲಿ ಕಳೆದ ಏಳು ದಶಕಗಳಿಂದಲೂ ನಿರಂತರವಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ ಸಾಧಕರನ್ನು ಗುರುತಿಸಿ ಜತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದರು.
ಅಭಿನಂದನೆ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಸ್.ಪುಟ್ಟಸ್ವಾಮಿ(ಪತ್ರಕರ್ತರು), ರಾಜಮುಡಿ (ಉತ್ತಮ ವಾಘ್ಮಿ), ಚಲುವರಾಜು(ಸಮಾಜ ಸೇವೆ) ಹಾಗೂ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್.ಬಿಂದುಶ್ರೀ, ಟಿ.ಎಸ್.ರಜತ್, ಕೆ.ಸ್ಫೂರ್ತಿ, ಸಿಂಚನ, ತೇಜಸ್ವಿನಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ರೈತ ಸಂಘಟನೆಯ ಮುಖಂಡ ಕೀಳಘಟ್ಟ ನಂಜುಂಡಯ್ಯ, ಮುಖಂಡರಾದ ಮನ್‌ಮುಲ್ ಮಾಜಿ ನಿರ್ದೇಶಕ ಚಿಕ್ಕೋನಹಳ್ಳಿ ತಮ್ಮಯ್ಯ, ಬಿಳಿಯಪ್ಪ, ಸಿದ್ದೇಗೌಡ, ಮಾಯಣ್ಣ, ರಾಮೇಗೌಡ, ಸುದರ್ಶನ್, ರಮಾನಂದ, ಸಂತೋಷ್, ಮಂಜು, ಸಿದ್ದರಾಜು, ಚನ್ನಪ್ಪ, ಸುಂದರೇಶ್, ಶಿಕ್ಷಕ ಲೋಕೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net