ಚಿತ್ತಾಪುರ: ಮನೆಯೇ ಮೊದಲ ಪಾಠ ಶಾಲೆ, ಜನನಿ ಮೊದಲ ಗುರು. ಹೀಗಾಗಿ ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ, ಪರಂಪರೆ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು ಎಂದು ಗದಗ ಮತ್ತು ವಾರಾಣಸಿ ಬೂದೀಶ್ವರ ಸಂಸ್ಥಾನ ಮಠದ ಅಂತೂರ ಬೆಂತೂರ ಜಗದ್ಗುರು ಶ್ರೀ ಡಾ.ರಾಚೋಟೇಶ್ವರ ಶಿವಾಚಾರ್ಯರು ನುಡಿದರು. ತೆಳಗೇರಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದೇವಸ್ಥಾನ ಸಮಿತಿವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿ, ಭಾರತದ ಸಂಸ್ಕೃತಿ ಮತ್ತು ಸಂಸ್ಕಾರ ಬಹಳ ಮಹತ್ವದಿಂದ ಕೂಡಿದ್ದು, ಪುರಾತನ ಕಾಲದಿಂದಲೂ ಹೆಸರುವಾಸಿಯಾಗಿದೆ. ಅದನ್ನು ಮುಂದಿನ ಪೀಳಿಗೆಗಾಗಿ ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ ಎಂದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿದರು. ಶ್ರೀಗಳಿಗೆ ನಾಣ್ಯಗಳಿಂದ ತುಲಾಭಾರ ನೆರವೇರಿಸಲಾಯಿತು. ಬಸವರಾಜ ಕಾಳಗಿ, ಬಸವರಾಜ ಸಂಕನೂರ, ರಮೇಶ ಕಾಳನೂರ, ಮಲ್ಲಿಕಾರ್ಜುನರೆಡ್ಡಿ ಇಜಾರ್, ಗುರುರಾಜ ಹೂಗಾರ, ಶಿವರಾಜ ಪಾಳೇದ್, ರಮೇಶ ಬೊಮ್ಮನಹಳ್ಳಿ, ಸಾಹೇಬಗೌಡ ಬಂಗಿ, ಸಂತೋಷ ಸಜ್ಜನ್, ಶ್ರೀಮಂತ ಕುಂಬಾರ, ಸಂತೋಷ ಭಂಗಿ, ವಿಶ್ವನಾಥ ಹಾಬಳ, ಚಂದ್ರು ಕಾಳಗಿ, ಸಂತೋಷ ಹಾವೇರಿ ಇತರರಿದ್ದರು.