ಬೆಂಗಳೂರು: ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೇಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ವರ್ಲ್ಡ್ 10 ಕೆ ಬೆಂಗಳೂರು 2026 (ಟಿಸಿಎಸ್ ವರ್ಲ್ಡ್ 10 ಕೆ) ಪ್ರವರ್ತಕರಾದ ಪ್ರೊಕ್ಯಾಮ್ ಇಂಟರ್ ನ್ಯಾಷನಲ್, 26 ಏಪ್ರಿಲ್ 2026ರ ಭಾನುವಾರದಂದು ನಡೆಯಲಿರುವ ರೇಸ್ ನ ಅಂತಾರಾಷ್ಟ್ರೀಯ ಕೂಟದ ರಾಯಭಾರಿಯಾಗಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಮತ್ತು ಎರಡು ಬಾರಿ ವಿಶ್ವ ಚಾಂಪಿಯನ್ ಬ್ಲಾಂಕಾ ವ್ಲಾಸಿಕ್ ಅವರನ್ನು ಘೋಷಿಸಿದೆ.