ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಅಂಗವಾಗಿ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಪಪಂ ಅಧ್ಯಕ್ಷ ನಾರಾಯಣಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ.ರಾಜೇಂದ್ರ ಪ್ರಸಾದ, ಡಾ.ಪೂರ್ಣಿಮಾ, ಶಂಕ್ರಮ್ಮ, ಕಿರಣಕುಮಾರ, ಸೀತಾ ಪಾಟೀಲ, ಶರಣಬಸವ ಇದ್ದರು.
ತಾವರಗೇರಾ: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಪ್ರಯುಕ್ತ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಪಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಮಗುವಿಗೆ ವ್ಯಾಕ್ಸಿನ್ ಹಾಕುವ ಮೂಲಕ ಭಾನುವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೈದ್ಯಾಧಿಕಾರಿ ರಾಜೇಂದ್ರ ಪ್ರಸಾದ ಮಾತನಾಡಿ, ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ಸಿಗಾಗಿ ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿ 20 ತಂಡಗಳನ್ನು ರಚಿಸಲಾಗಿದೆ. 112 ಜನರು ಲಸಿಕಾ ಕಾರ್ಯದಲ್ಲಿದ್ದಾರೆ.
ಪಟ್ಟಣ ಮತ್ತು ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ 18 ಗ್ರಾಮಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 3933 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದರು.
ವೈದ್ಯಾಧಿಕಾರಿ ಪೂರ್ಣಿಮಾ, ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಮೇಲ್ವಿಚಾರಕ ಸಂಗಮೇಶ, ಆರೋಗ್ಯ ಹಿರಿಯ ಮೇಲ್ವಿಚಾರಕಿ ಶಂಕ್ರಮ್ಮ, ಹಿರಿಯ ಸಹಾಯಕ ಅರುಣ ಕುಮಾರ, ಹಿರಿಯ ಸಹಾಯಕಿ ಸೀತಾ ಪಾಟೀಲ್, ಸಿಬ್ಬಂದಿ ಶರಣಬಸವ, ಸಂಜಯ ಛಲವಾದಿ, ಜೈರಾಜ ಇದ್ದರು.