ಬಾಗಿನ ವಿತರಣೆಗೆ ತಾಲೂಕು ಆಡಳಿತ ಅಡ್ಡಿ

ತಿಪಟೂರಿನಲ್ಲಿ ಸುದ್ದಿಗಾರರೊಂದಿಗೆ ಜಿಪಂ  distribution ಮಾಜಿ ಸದಸ್ಯ ಅಶ್ವತ್ಥ್​ ನಾರಾಯಣ್​ ಮಾತನಾಡಿದರು. ಜಿಪಂ ಮಾಜಿ ಸದಸ್ಯ ವಿರೂಪಾಕ್ಷ, ಗೊಲ್ಲ ಸಮಾಜದ ಮಂಜುನಾಥ್​, ಬಸವರಾಜು, ಪ್ರಸಾದ್​, ಸಂದೀಪ್​, ಮೋಹನ್​, ಇತರರು ಇದ್ದರು
ತಿಪಟೂರಿನಲ್ಲಿ ಸುದ್ದಿಗಾರರೊಂದಿಗೆ ಜಿಪಂ distribution ಮಾಜಿ ಸದಸ್ಯ ಅಶ್ವತ್ಥ್​ ನಾರಾಯಣ್​ ಮಾತನಾಡಿದರು. ಜಿಪಂ ಮಾಜಿ ಸದಸ್ಯ ವಿರೂಪಾಕ್ಷ, ಗೊಲ್ಲ ಸಮಾಜದ ಮಂಜುನಾಥ್​, ಬಸವರಾಜು, ಪ್ರಸಾದ್​, ಸಂದೀಪ್​, ಮೋಹನ್​, ಇತರರು ಇದ್ದರು
Published on
ತಿಪಟೂರು : ತಾಲೂಕಿನ ಮಂಜುನಾಥ್​ ನಗರದಲ್ಲಿ ಜು.27ರಂದು ಆಯೋಜಿಸಿದ್ದ 10 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ ವಿತರಿಸುವ ಕಾರ್ಯಕ್ರಮಕ್ಕೆ ತಾಲೂಕು ಆಡಳಿತ ಅಡಚಣೆ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಶ್ವತ್ಥ್​ ನಾರಾಯಣ್​ ಆರೋಪಿಸಿದರು. distribution
ಕಾರ್ಯಕ್ರಮದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಕ್ರಮದ ಬಗ್ಗೆ ತಾಲೂಕಿನ 26 ಗ್ರಾಪಂ ವ್ಯಾಪ್ತಿಗಳಲ್ಲಿ ಹಾಗೂ ನಗರದಲ್ಲಿ ಸ್ಥಳಿಯ ಆಡಳಿತದ ಅನುಮತಿ ಪಡೆದು ಬ್ಯಾನರ್​ ಕಟ್ಟಿ ಪ್ರಚಾರ ಮಾಡಲಾಗಿತ್ತು. ಆದರೆ ನನ್ನ ಏಳಿಗೆ ಸಹಿಸದ ತಾಲೂಕು ಆಡಳಿತ ಅಧಿಕಾರಿಗಳನ್ನು ಕೈಗೊಂಬೆಯಾಗಿಸಿಕೊಂಡು ಈ ಬ್ಯಾನರ್​ಗಳನ್ನು ತೆರವುಗೊಳಿಸಿದ್ದಾರೆ ಎಂದು ದೂರಿದರು. distribution
ಗ್ರಾಪಂ ಪಿಡಿಒಗಳು, ಅಧಿಕಾರಿಗಳು ಮತ್ತು ಪೊಲೀಸರು ನನ್ನ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಇದನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಾತಿ ಗೆಲ್ಲುತ್ತೋ, ಪ್ರೀತಿ ಗೆಲ್ಲುತ್ತೋ ಎಂಬುದು ತಾಲೂಕು ಆಡಳಿತಕ್ಕೆ ತಿಳಿಯಲಿದೆ. ಎಷ್ಟೇ ಅಡೆತಡೆ ಮಾಡಿದರೂ ಕಾರ್ಯಕ್ರಮ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net