ಅಲೆಮಾರಿ ಸುಡುಗಾಡುಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಅಲೆಮಾರಿ ಸುಡುಗಾಡುಸಿದ್ದ ಮಹಾಸಭಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಸಿ.ಎಸ್.ದ್ವಾರಕಾನಾಥ್, ಬಿ.ಎಲ್.ಹನುಮಂತಪ್ಪ, ಹುಸೇನಪ್ಪ ಮತ್ತಿತರರು ಉಪಸ್ಥಿತರಿದ್ದರು.
ಅಲೆಮಾರಿ ಸುಡುಗಾಡುಸಿದ್ದ ಮಹಾಸಭಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಸಿ.ಎಸ್.ದ್ವಾರಕಾನಾಥ್, ಬಿ.ಎಲ್.ಹನುಮಂತಪ್ಪ, ಹುಸೇನಪ್ಪ ಮತ್ತಿತರರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಲೆಮಾರಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
  • ಅಲೆಮಾರಿ ಸುಡುಗಾಡುಸಿದ್ದ ಮಹಾಸಭೆ ಕಾರ್ಯಕ್ರಮ
  • ಇದೇ ಮೊದಲ ಬಾರಿಗೆ ಕಾರ್ಯಕ್ರಮ ಆಯೋಜನೆ

ಬೆಂಗಳೂರು: ಗಾಂಧಿಭವನದಲ್ಲಿ ಅಲೆಮಾರಿ ಸುಡುಗಾಡುಸಿದ್ದಮಹಾಸಭೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಅಲೆಮಾರಿ ಸುಡುಗಾಡುಸಿದ್ಧ ಸಮುದಾಯದಪ್ರತಿಭಾವಂತ ವಿದ್ಯಾರ್ಥಿಗಳುಮತ್ತು ಸಮಾಜದ ಹಿರಿಯ ಮುಖಂಡರನ್ನುಸನ್ಮಾನಿಸಲಾಯಿತು.

ಸನ್ಮಾನನೆರವೇರಿಸಿ ಮಾತನಾಡಿದ ಹಿಂದುಳಿದವರ್ಗಗಳ ಆಯೋಗದ ಮಾಜಿ ಅಧ್ಯಕ್ಷಡಾ. ಸಿ.ಎಸ್ದ್ವಾರಕನಾಥ,ಇಂತಹ ಕಾರ್ಯಕ್ರಮಗಳುಹೆಚ್ಚು ಹೆಚ್ಚಾಗಿ ನಡೆದು ಸಮಾಜದಬದಲಾವಣೆಗೆ ಪ್ರಯತ್ನಿಸಬೇಕು.ಡಾ.ಬಾಬಾ ಸಾಹೇಬ್ಅಂಬೇಡ್ಕರ್ ಜೀವನ ಮತ್ತು ಸಂಘರ್ಷದವಿಚಾರಗಳನ್ನು ತಮ್ಮ ಹೃದಯದಲ್ಲಿಅಳವಡಿಸಿಕೊಂಡು ಸಮಾಜದ ಜನರಿಗೆಸಹಕಾರಿಯಾಗಬೇಕೆಂದು ತಿಳಿಸಿದರು.

ಅಲೆಮಾರಿಸುಡುಗಾಡುಸಿದ್ದ ಮಹಾಸಭಾದರಾಜ್ಯಾಧ್ಯಕ್ಷ ಬಿ.ಎಲ್.ಹನುಮಂತಪ್ಪಮಾತನಾಡಿ, ಅಲೆಮಾರಿಸುಡುಗಾಡಸಿದ್ದ ಮಹಾಸಭಾ ಶೇ.1ಒಳಮೀಸಲಾತಿಯನ್ನುಪಡೆಯಲು 59 ಅಸ್ಪೃಶ್ಯಅಲೆಮಾರಿ ಸಮುದಾಯಗಳ ಜೊತೆಯಲ್ಲಿಮುಂಚೂಣಿಯಾಗಿ ಹೋರಾಟ ನಡೆಸಿದೆ.ಆದರೆ ಕಾಂಗ್ರೆಸ್ಸರ್ಕಾರ ನಮ್ಮನ್ನು ನಿರ್ಲಕ್ಷ್ಯಮಾಡಿ, ಅತಿಹಿಂದುಳಿದ,ನಿರ್ಗತಿಕಸಮುದಾಯಗಳಿಗೆ ದ್ರೋಹವೆಸಗಿದೆ.ಇದರಿಂದ ಉತ್ತಮಅಂಕ ಪಡೆದ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆಸರ್ಕಾರಿ ಉದ್ಯೋಗ ಮುಂದಿನ ದಿನಗಳಲ್ಲಿಮರೀಚಿಕೆಯಾಗಲಿದೆ ಎಂದು ಕಳವಳವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸುಡುಗಾಡುಸಿದ್ದ ಮಹಾಸಭಾದಕಾರ್ಯದರ್ಶಿ ಹುಸೇನಪ್ಪ, ಮಹೇಶ್ ಗಂಟೆ,ಮಹಾಸಭಾದ ರಾಜ್ಯಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳುಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net