ಅಂಜುಮನ್ ಸಂಸ್ಥೆಯಿಂದ ಪ್ರತಿಭಾವಂತರಿಗೆ ಸನ್ಮಾನ

ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಂಜುಮನ್-ಎ-ರಾಯಚೂರು ಸಂಸ್ಥೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಶಾಸಕ ಹಂಪನಗೌಡ ಬಾದರ್ಲಿ, ಪ್ರಾಧ್ಯಾಪಕ ಡಾ.ಸೈಯದ್ ಮಿನ್ಹಾಜುಲ್ ಹಸ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಹ್ಯಾರಿಸ್ ಸಿದ್ದಿಕಿ ಇತರರಿದ್ದರು.
ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಂಜುಮನ್-ಎ-ರಾಯಚೂರು ಸಂಸ್ಥೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಶಾಸಕ ಹಂಪನಗೌಡ ಬಾದರ್ಲಿ, ಪ್ರಾಧ್ಯಾಪಕ ಡಾ.ಸೈಯದ್ ಮಿನ್ಹಾಜುಲ್ ಹಸ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಹ್ಯಾರಿಸ್ ಸಿದ್ದಿಕಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ
  • ಸರ್ಕಾರದ ಸೌಕರ್ಯ ಪ್ರಯೋಜನ ಪಡೆಯಿರಿ
ರಾಯಚೂರು: ವೈವಿಧ್ಯ ಜತೆ ಭಾವೈಕ್ಯದಿಂದ ಕೂಡಿದ ದೇಶ ನಮ್ಮದಾಗಿದ್ದು, ಅಲ್ಪಸಂಖ್ಯಾತರು ಶೈಕ್ಷಣಿಕವಾಗಿ ಸಾಕಷ್ಟು  ಮುಂದುವರಿಯುತ್ತಿರುವುದು ಸಂತೋಷದ ಸಂಗತಿ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಂಜುಮನ್-ಎ-ರಾಯಚೂರು ಸಂಸ್ಥೆಯಿಂದ ಸೋಮವಾರ  ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಮೊದಲ ವರ್ಷದಲ್ಲಿ ನಾಲ್ಕು ಸಾವಿರ ಕೋಟಿ, ಎರಡನೇ ವರ್ಷದಲ್ಲಿ ಐದು ಸಾವಿರ ಕೋಟಿ ಮತ್ತು ಪ್ರಸಕ್ತ ಸಾಲಿನಲ್ಲಿ ಆರೂವರೆ ಸಾವಿರ ಕೋಟಿ ರೂ. ಅನುದಾನ ನೀಡಿದೆ. 150 ಮೌಲಾನ ಆಜಾದ್ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಂಜೂರಾತಿ ನೀಡಿದೆ.
ಮುರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಆರಂಭಿಸಿದೆ. ನೂರಾರು ವಸತಿ ನಿಲಯಗಳನ್ನು ಸರ್ಕಾರ ಮಂಜೂರು ಮಾಡಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದರು.
ಪ್ರಾಧ್ಯಾಪಕ ಡಾ.ಸೈಯದ್ ಮಿನ್ಹಾಜುಲ್ ಹಸ್ ಮಾತನಾಡಿ, ವಿದ್ಯಾರ್ಥಿಗಳು ಪಾಲಕರಿಗೆ ವಿಧೇಯರಾಗಿರಬೇಕು. ಶಿಕ್ಷಕರ ಮಾತು ಕೇಳಬೇಕು. ಉನ್ನತ ಶಿಕ್ಷಣ ಪಡೆಯಲು ಹಿಂಜರಿಯಬಾರದು. ಯಾರಿಗಿಂತಲೂ ಕಡಿಮೆ ಇಲ್ಲ ಎನ್ನುವ ಭಾವನೆಯೊಂದಿಗೆ ಅಧ್ಯಯನ ಮಾಡಬೇಕೆಂದು ಸಲಹೆ ನೀಡಿದರು. 
ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಸಂಸ್ಥೆಯ ಸಂಚಾಲಕ ಹ್ಯಾರಿಸ್ ಸಿದ್ದಿಕಿ, ಪ್ರಮಖರಾದ ಡಾ.ರಝಾಕ್ ಉಸ್ತಾದ್, ಅಬ್ದುಲ್ ಕರೀಂ, ಕೆ.ಅಸ್ಲಾಂ ಪಾಷಾ, ಮೌಲಾನಾ ಸೈಯದ್ ಅಬ್ದುಲ್ ಲತೀಫ ಲೌಬಲಿ ಸಾಹೇಬ್, ವಕೀಲ ಸೈಯದ್ ತಾರೀಖ ಹಸನ್ ರಿಜ್ವಿ,  ಸೈಯದ್ ಅಮೀನುಲ್ ಹಸನ್ , ಶೇಕ್ ಮಹಿಬೂಬ, ಸೈಯದ್ ಜುಬೇರ ಮೋಹಿಯುದ್ದೀನ್, ಡಾ.ಬಂದೇನವಾಜ್ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net