ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ

ಬೀಳಗಿ ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆ ಅಧ್ಯಕ್ಷ ಎಂ.ಎನ್.ಪಾಟೀಲ, ನಿರ್ದೇಶಕ ರಾಜು ಬೋರ್ಜಿ, ಆರ್.ಎಸ್.ಪಾಟೀಲ, ಆಡಳಿತಾಧಿಕಾರಿ ವಿ.ಎಸ್.ಮೇಟಿ ಇತರರಿದ್ದರು.
ಬೀಳಗಿ ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆ ಅಧ್ಯಕ್ಷ ಎಂ.ಎನ್.ಪಾಟೀಲ, ನಿರ್ದೇಶಕ ರಾಜು ಬೋರ್ಜಿ, ಆರ್.ಎಸ್.ಪಾಟೀಲ, ಆಡಳಿತಾಧಿಕಾರಿ ವಿ.ಎಸ್.ಮೇಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಂ.ಎನ್.ಪಾಟೀಲ ಹೇಳಿಕೆ
  • ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಸಮಾರಂಭ್ಖ
ಬೀಳಗಿ: ಪಠ್ಯೇತರ ಜೊತೆಗೆ ಕ್ರೀಡಾ ಸಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಂಡು ಅವರಲ್ಲಿರುವ ಪ್ರತಿಯೊಂದು ಪ್ರತಿಭೆ ಹೊರ ತರಲು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎನ್.ಪಾಟೀಲ ಹೇಳಿದರು.
ಸ್ಥಳೀಯ ಬೀಳಗಿ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ  ಶಾಲಾ-ಕಾಲೇಜುಗಳ 2026-27ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ, ಶಾಲಾ ಸಂಸತ್ತು ಮತ್ತು ಸ್ಕೌಟ್ಸ್, ಗೈಡ್ಸ್,  ಧ್ವಜ ವಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಥೆಯಲ್ಲಿ ಅನೇಕ ಮಕ್ಕಳು ಶಿಕ್ಷಣ ಹಾಗೂ ವಿವಿಧ ಪ್ರತಿಭೆಯಲ್ಲಿ ಭಾಗವಹಿಸಿದ್ದಾರೆ. ಪ್ರತಿಭೆಯುಳ್ಳ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಅವರನ್ನು ಕಿಳವಾಗಿ ಕಾಣಬೇಡಿ, ಮಕ್ಕಳಿಗೆ  ಶಿಕ್ಷಕರ ಮಾರ್ಗದರ್ಶನ ಬಹಳ ಮಹತ್ವ. ಶಿಕ್ಷಕ, ಬೋಧಕ ಬೋಧಕಿಯರ ಹಾಗೂ ಎಲ್ಲ ಸಿಬ್ಬಂದಿ ಸಹಕಾರದಿಂದ ಈ ಸಂಸ್ಥೆ ಮಾದರಿಯಾಗಿದೆ ಎಂದರು.
ಸಂಸ್ಥೆಯಲ್ಲಿ ಅನೇಕ ಮಕ್ಕಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲಾ, ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದಾರೆ. ಇನ್ನು ಇದೇ ರೀತಿಯಾಗಿ ಮಕ್ಕಳು ಪಠ್ಯೇತರ ಜತೆಗೆ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಸಂಸ್ಥೆ ಆಡಳಿತಾಧಿಕಾರಿ ವಿ.ಎಸ್.ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ರಾಜು ಬೋರ್ಜಿ ಕ್ರೀಡಾ ಧ್ವಜಾರೋಹಣ ಮಾಡಿದರು. 
ಆರ್.ಎಸ್.ಪಾಟೀಲ ಉದ್ಘಾಟಿಸಿದರು. ಕಾಲೇಜ್ ಪ್ರಾಂಶುಪಾಲ ಜಿ.ಅರ್.ಪಾಟೀಲ, ಆರ್.ಎಸ್.ನಂದವಾಡಗಿ, ಎಂ.ಬಿ.ವೆಂಕಟಾಪೂರ, ಸಿಬಿಎಸ್‌ಇ ಪ್ರಾಂಶುಪಾಲ ಎಸ್.ಎಂ.ಕಲಬುರ್ಗಿ, ಎಂ.ಎಸ್.ಸಬ್ಬಿಗೇರಿ, ಡಿಗ್ರಿ ಪ್ರಾಂಶುಪಾಲ ಎಲ್.ಎಸ್.ಕತ್ತಿ, ಮಂಜುನಾಥ ಕಂದಗಲ್ಲ ಇದ್ದರು.
"

ಮಕ್ಕಳು ಪಠ್ಯೇತರ ಜತೆಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊ ಳ್ಳುವುದರಿಂದ ದೈಹಿಕವಾಗಿ ಮಾನಸಿಕವಾಗಿ ಚೈತನ್ಯ ಶೀಲರಾಗಿ ಸದೃಢರಾಗಲು ಸಾಧ್ಯ. 

 ಎಂ.ಎನ್.ಪಾಟೀಲ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net